
ಸ್ಮೃತಿ ಮಂದಾನಾ ಈಚೆಗೆ ಮುಗಿದ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಮೂರು ಪಂದ್ಯಗಳಲ್ಲಿ ಎರಡು ಶತಕಗಳನ್ನು ಸಿಡಿಸಿದ ಮಂದಾನಾ ಎರಡೂ ತಂಡಗಳಲ್ಲಿ ಅತ್ಯುತ್ತಮ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾದರು. ಕೊನೆಯ ಪಂದ್ಯದಲ್ಲಂತೂ ಸ್ಮೃತಿ ಮಂದಾನ್ನಾ ಸಿಡಿಸಿದ ಶತಕ ಅತ್ಯದ್ಭುತವಾಗಿತ್ತು.

ಕೊನೆಯ ಪಂದ್ಯದಲ್ಲಿ413 ರನ್ ಗಳ ಗುರಿ ಹೊಂದಿದ್ದ ಭಾರತ ವನಿತೆಯರ ತಂಡ 369 ರನ್ ಗಳಿಸಿ ಆಸ್ಟ್ರೇಲಿಯಾಗೆ ತೀವ್ರ ಪ್ರತಿರೋಧ ಒಡ್ಡಲು ಸ್ಮೃತಿ ಮಂದಾನಾ ಅವರ ಬಿರುಸಿನ ಶತಕವೇ ಕಾರಣವಾಗಿತ್ತು. ಸ್ಮೃತಿ ಮಂದಾನಾ ಕೇವಲ 63 ಎಸೆತಗಳಲ್ಲಿ 17 ಬೌಂಡರಿ, 5 ಸಿಕ್ಸರ್ ನೆರವಿನಿಂದ 125 ರನ್ ಗಳಿಸಿದ್ದರು. ಈ ಶತಕ ಅತ್ಯಂತ ವೇಗದ ಶತಕವಾಗಿದ್ದು, ಸ್ಮೃತಿ ಮಂದಾನಾ ಆಟ ಎಲ್ಲೆಡೆ ಪ್ರಶಂಸೆಗೆ ಕಾರಣವಾಗಿತ್ತು.





