ಸಿರುಗುಪ್ಪ : ನಗರದ ಪ್ರವಾಸಿ ಮಂದಿರದಲ್ಲಿ ಡಿ.31ರಂದು ಸ್ಟಾರ್ ಮಸ್ತ್ ವಿಕ್ಟರಿ ಆರ್ಟ್ಸ್ನಿಂದ ನಿರ್ಮಾಣವಾದ ಸ್ವೇಚ್ಛಾ ಚಲನಚಿತ್ರದ ಬಿಡುಗಡೆಯ ಕುರಿತು ಸುದ್ದಿಗೋಷ್ಠಿ ಕರೆಯಲಾಗಿದ್ದು ಜನವರಿ 3ಕ್ಕೆ ರಾಮಕೃಷ್ಣ ಚಲನಚಿತ್ರ ಮಂದಿರದಲ್ಲಿ ಬಿಡುಗಡೆಯಾಗುತ್ತಿದೆಂದು ಚಿತ್ರ ಕಥೆಯ ನಿರ್ದೇಶಕ ಸುರೇಶ್ ರಾಜು ತಿಳಿಸಿದರು.
ನಂತರ ಮಾತನಾಡಿ ನಾವು ಮತ್ತು ಕೆ.ಆರ್.ಮುರಹರಿ ರೆಡ್ಡಿ ಅವರು ಸ್ಥಳೀಯರಾಗಿದ್ದೇವೆ. ಮುರಹರ ರೆಡ್ಡಿಯವರು ನಿರ್ಮಾಪಕರಾಗಿದ್ದು, ಚಲನಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ.
ಈ ಚಿತ್ರದಲ್ಲಿ ಅನ್ವಿಶ್ ನಾಯಕನಾಗಿ, ಪವಿತ್ರ ನಾಯಕ್ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ.
ಇನ್ನಿತರ ಮುಖ್ಯಪಾತ್ರದಲ್ಲಿ ಲಕ್ಷ್ಮಿ, ಸ್ಪಂದನ, ಮತ್ತು ಪ್ರಕಾಶ್‌ಕುಮಾರ್ ಅವರು ಅಭಿನಯಿಸಿರುತ್ತಾರೆ. ಐದು ಹಾಡು, ಒಂದು ಪೈಟ್ ಇರುತ್ತದೆ.
ಕುಟುಂಬ ಸಮೇತ ಎಲ್ಲರೂ ಬಂದು ನೋಡಬಹುದಾದ ಸಿನಿಮಾ ಇದಾಗಿದ್ದು ಎಲ್ಲರೂ ಥಿಯೇಟರಿಗೆ ಬಂದು ಸಿನಿಮಾ ನೋಡಿ ನಮ್ಮೆಲ್ಲಾ ಚಿತ್ರ ಮಂಡಳಿಯ ತಂಡವನ್ನು ಪ್ರೋತ್ಸಾಹಿಸಬೇಕೆಂದು ತಿಳಿಸಿದರು.
ನಟ ಅನ್ವೀಶ್ ಅವರು ಮಾತನಾಡಿ ಸಿನಿಮಾದ ನಿರ್ದೇಶಕರು ಮತ್ತು ನಿರ್ಮಾಕರು ಇಲ್ಲಿಯವರೇ ಆಗಿದ್ದರಿಂದ ಇಲ್ಲಿ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಇದು ನನ್ನ ಮೊದಲನೇ ಸಿನಿಮಾ ಆಗಿದ್ದು ಎಲ್ಲರೂ ಬೆಂಬಲಿಸಬೇಕೆಂದರು.
ವರದಿ : ಶ್ರೀನಿವಾಸ ನಾಯ್ಕ