ಸೇಡಂ : ತಾಲೂಕಿನ ಕಾರ್ಯಕ್ರಮವನ್ನು ಶ್ರೀ ಮಲ್ಲಯ್ಯ ಬೆಟ್ಟದ ಆವರಣ, ಮುರಾರ್ಜಿ ದೇಸಾಯಿ ವಸತಿ ಶಾಲೆ ಆವರಣ, ಕೊಡ್ಲಾ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಆವರಣ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ಸೇಡಂ ತಾಲೂಕು, ಶ್ರೀ ಫೌಂಡೇಶನ್ ಟ್ರಸ್ಟ್ ಬೆನಕನಹಳ್ಳಿ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ಕೊಡ್ಲಾ ಇವರ ಸಹಯೋಗದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಗೌರವಾನ್ವಿತ ಜಿಲ್ಲಾ ನಿರ್ದೇಶಕರು ಗಣಪತಿ ಮಾಳಂಜಿ ಸರ್ ಇವರು ಯೋಜನೆಯ ಹಲವಾರು ಕಾರ್ಯಕ್ರಮಗಳ ಬಗ್ಗೆ ಪರಿಚಯಿಸುತ್ತ, ಗಿಡಮರಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ.. ನಾವೆಲ್ಲರೂ ಪ್ರಕೃತಿಗೆ ಚಿರಋಣಿಯಾಗಿರಬೇಕು. ಪ್ರತಿಯೊಬ್ಬರೂ ಹುಟ್ಟಿದ ದಿನ, ಅನೇಕ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ನೆನಪಿಗಾಗಿ ಒಂದೊಂದು ಸಸಿಗಳನ್ನು ನೆಡುವಂತಹ ಉತ್ತಮ ಹವ್ಯಾಸವನ್ನು ರೂಡಿಸಿಕೊಳ್ಳಬೇಕು ಅಂತ ಮಾಹಿತಿ ನೀಡಿದರು.
ರಾಮನಗೌಡ ಸಿ. ಎಚ, ಆರ್, ಶ್ರೀ ಫೌಂಡೇಶನ್ ಟ್ರಸ್ಟ್ ಇವರು ಯೋಜನೆಯಲ್ಲಿ ಹಲವಾರು ಇಂತಹ ಜನಪರ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಕಾರ್ಯಕ್ರಮಗಳು ಮಾಡುತ್ತಿದ್ದು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಅರಣ್ಯವನ್ನು ಸಂರಕ್ಷಿಸಬೇಕು ಗಿಡಗಳನ್ನು ಬೆಳೆಸಿ ಪೋಷಿಸಬೇಕು ಎನ್ನುವ ಮಾಹಿತಿ ನೀಡಿ ಅರಣ್ಯ ಗಿಡಗಳ ನಾಟಿ ಮಾಡುವುದರ ಮೂಲಕ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಪವಿತ್ರಾದೇವಿ ಪ್ರಾಂಶುಪಾಲರು ಮುರಾರ್ಜಿ ದೇಸಾಯಿ ವಸತಿ ಶಾಲೆ ಕೋಡ್ಲಾ, ಶಿವಕುಮಾರ್ ಜಾಡರ್ ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯರು, ವರದ ಬಿ ಸ್ವಾಮಿ ಹಿರೇಮಠ ಜಯ ಕರ್ನಾಟಕ ಜನಪರ ವೇದಿಕೆ ಉಪಾಧ್ಯಕ್ಷರು ಕಲಬುರ್ಗಿ, ಮಲ್ಲು ಅವಟಿ ಜಯ ಕರ್ನಾಟಕ ರಕ್ಷಣಾ ವೆದಿಕೆ ಕಾರ್ಯಾಧ್ಯಕ್ಷರು, ನಾಗಭೂಷಣ ಆಲ್ಲೂರ ಪ್ರದಾನ ಕಾರ್ಯದರ್ಶಿ ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜ ಸೇಡಂ, ಸುರೇಶ್ ರೆಡ್ಡಿ ಪೂರ್ಮಾ ಉಪಾಧ್ಯಕ್ಷರು ಗ್ರಾಮ ಪಂಚಾಯಿತಿ ಕೋಡ್ಲಾ, ಸೋಮನಾಥ್ ರೆಡ್ಡಿ ಬೆಳಗೇರಿ, ಶಿವಶರಣಯ್ಯಸ್ವಾಮಿ ಕಪೂರ್, ಬಸವರಾಜ ಅಲ್ಲೋಳ್ಳಿ, ಅಂಬುಜಾ, ಒಕ್ಕೂಟ ಸದಸ್ಯರು ಕೋಡ್ಲಾ, ಶ್ರೀಧರ ಅರಳಿ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು.
ಕಾರ್ಯಕ್ರಮದಲ್ಲಿ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಗಳು ಮಂಜುನಾಥ್ ಎಸ್ ಜಿ ಅವರು ಪ್ರಾಸ್ತಾವಿಕವಾಗಿ ಯೋಜನೆಯ ಬಹು ಮುಖ್ಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು ದಶಲಕ್ಷ ಗಿಡ ನಾಟಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡುತ್ತಾ ಶೌರ್ಯ ವಿಪತ್ತು ನಿರ್ವಹಣಾ ತಂಡಗಳ ಬಗ್ಗೆ ಪೂಜ್ಯರ ಆಶಯದ ಬಗ್ಗೆ ಜನರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಾಹಿತಿಗಳು ಮೂಡಬಿ ಗುಂಡೇರಾವ್ ಮುಖ್ಯ ಶಿಕ್ಷಕರು ಸರಕಾರಿ ಶಾಲೆ ಕೊಡ್ಲಾ ಅವರು ಮಕ್ಕಳಿಗೆ ಸಾರ್ವಜನಿಕರಿಗೆ ಗಿಡ ಮರಗಳ ಬೆಳೆಸಿದರೆ ಪ್ರಯೋಜನವನ್ನು ತಿಳಿಸಿ ಎಲ್ಲರೂ ಗಿಡಮರಗಳನ್ನು ಬೆಳೆಸುವಂತೆ ಮಾಹಿತಿ ನೀಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯ ಕ್ಷೇತ್ರಕ್ಕೆ ಅಪಕೀರ್ತಿಯನ್ನು ಉಂಟುಮಾಡುವ ದುಷ್ಟ ಶಕ್ತಿಗಳ ನಾಶವಾಗುವ ಕಾಲ ಬಹಳ ದೂರವಿಲ್ಲ, ದೂರದ ಕ್ಷೇತ್ರ ಧರ್ಮಸ್ಥಳದ ಕ್ಷೇತ್ರ ಪಾಲಕರು ಇಡೀ ರಾಜ್ಯದ್ದುಗಲಕ್ಕೂ ಇದ್ದಾರೆ ಎಂದು ಪೂಜ್ಯರೊಂದಿಗೆ ನಾವಿದ್ದೇವೆ ಎನ್ನುವ ನುಡಿಗಳನ್ನು ತಿಳಿಸಿ, ಶ್ರೀ ಕ್ಷೇತ್ರದ ಮೂಲಕ ನಡೆಯುವಂತಹ ಎಲ್ಲ ಕಾರ್ಯಕ್ರಮಕ್ಕೆ ನಮ್ಮೆಲ್ಲರ ಸಹಕಾರ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯಕ್ರಮವನ್ನು ವಲಯ ಮೇಲ್ವಿಚಾರಕರು ಬಸವಣ್ಣಪ್ಪ ತುಪ್ಪದ್ ನಿರೂಪಿಸಿದರು, ಶೌರ್ಯ ತಂಡದ ನಾಯಕ ರಾಜು ಮಾಳಪ್ಪನವರ ಸ್ವಾಗತಿಸಿದರು. ಕೃಷಿ ಮೇಲ್ವಿಚಾರಕರು ಶಂಕರ ಬಂಡಿ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಕೊಡ್ಲಾ ವಲಯದ ಎಲ್ಲಾ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು, ಕೊಡ್ಲಾ ಕಾರ್ಯಕ್ಷೇತ್ರದ ಸ್ವ-ಸಹಾಯ ಸಂಘದ ಸದಸ್ಯರು, ಗ್ರಾಮದ ಗಣ್ಯರು ಮತ್ತು ವಲಯದ ಸೇವಾಪ್ರತಿನಿಧಿಗಳು, ಪತ್ರಿಕೆಯ ವರದಿಗಾರರು ಉಪಸ್ಥಿತರಿದ್ದು ಈ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




