ನವದೆಹಲಿ : ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದ’ ಮತ್ತು ‘ಜಾತ್ಯತೀತತೆ’ ಎಂಬ ಪದಗಳನ್ನು ಮರುಪರಿಶೀಲಿಸುವ ಅಥವಾ ತೆಗೆದುಹಾಕುವ ಯಾವುದೇ ಯೋಜನೆ ಅಥವಾ ಉದ್ದೇಶವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಸಂಸತ್ತಿನಲ್ಲಿ ಲಿಖಿತ ಉತ್ತರದಲ್ಲಿ ,ಪೀಠಿಕೆಗೆ ತಿದ್ದುಪಡಿಗಳ ಕುರಿತು ಯಾವುದೇ ಚರ್ಚೆಗಳಿಗೆ ಸಂಪೂರ್ಣ ಚರ್ಚೆ ಮತ್ತು ವಿಶಾಲವಾದ ಒಮ್ಮತದ ಅಗತ್ಯವಿರುತ್ತದೆ, ಆದರೆ ಇಲ್ಲಿಯವರೆಗೆ, ಈ ನಿಬಂಧನೆಗಳನ್ನು ಬದಲಾಯಿಸಲು ಸರ್ಕಾರ ಯಾವುದೇ ಔಪಚಾರಿಕ ಪ್ರಕ್ರಿಯೆಯನ್ನು ಪ್ರಾರಂಭಿಸಿಲ್ಲ” ಎಂದು ತಿಳಿಸಿದ್ದಾರೆ.
ಈ ವಿಚಾರ ಕುರಿತು ಸಾರ್ವಜನಿಕ ವಲಯ ಮತ್ತು ರಾಜಕೀಯ ಪಕ್ಷಗಳ ಮೊಗಸಾಲೆಗಳಲ್ಲಿ ಚರ್ಚೆಗಳು ಅಥವಾ ಸಂವಾದಗಳು ನಡೆದಿರಬಹುದು. ಆದರೆ, ಈ ಪದಗಳನ್ನು ಸಂವಿಧಾನದ ಪೀಠಿಕೆಯಿಂದ ತೆಗೆದು ಹಾಕುವ ಕುರಿತು ಪ್ರಸ್ತುತ ಯಾವುದೇ ಯೋಜನೆ ಅಥವಾ ಉದ್ದೇಶ ಇಲ್ಲ ಎಂಬುದೇ ಸರ್ಕಾರದ ನಿಲುವಾಗಿದೆ’ ಎಂದು ಮೇಘವಾಲ್ ಹೇಳಿದ್ದಾರೆ.




