ಮುದಗಲ್ಲ :- ಆಧಾರ್ ದಾಖಲೆ ಈಗ ಬದುಕಿನ ಅವಿಭಾಜ್ಯ ಅಂಗ. ಜನನ–ಮರಣ ಪ್ರಮಾಣಪತ್ರ ಪಡೆಯಲು ಮೊದಲುಗೊಂಡು ಸರ್ಕಾರಿ ಸವಲತ್ತು, ಶಾಲೆ–ಕಾಲೇಜು ದಾಖಲೆ, ಆಸ್ತಿ ಖರೀದಿ, ಮಾರಾಟ ಹೀಗೆ ಎಲ್ಲೆಡೆಯೂ ಸಲ್ಲುವ ಆಧಾರ್ ಈಗ ನಿತ್ಯ ಬದುಕಿನ ಒಡನಾಡಿ.
ಹೀಗಾಗಿ ಆಧಾರ್ ದಾಖಲೆ ಪಡೆಯಲು, ಅದರಲ್ಲಿನ ಲೋಪಗಳ ತಿದ್ದುಪಡಿ ಮಾಡಿಸಲು ಇಲ್ಲವೇ ವಿಳಾಸ ಬದಲಾಯಿಸಲು ಒಂದಿಲ್ಲೊಂದು ಕಾರಣಕ್ಕೆ ಸಾರ್ವಜನಿಕರು ಆಧಾರ್ ತಿದ್ದುಪಡಿ ಕೇಂದ್ರಗಳಿಗೆ ಎಡತಾಕುವುದು
ಸಾಮಾನ್ಯ. ಆದರೆ,ಸಾಫ್ಟ್‌ವೇರ್,ನೆಟ್‌ವರ್ಕ್ ಸಮಸ್ಯೆ, ಸರ್ವರ್ ಬ್ಯುಸಿ, ಸಿಬ್ಬಂದಿ ರಜೆ ಹೀಗೆ ನಾನಾ ಕಾರಣಕ್ಕೆ ಆಧಾರ್ ಕೇಂದ್ರಗಳಲ್ಲಿ ಸೇವೆಗಳು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುತ್ತಿಲ್ಲ.
ಸೇವೆಗಳು ಸಿಗುತ್ತಿವೆ.ಆದರೆ ಕಾಯುವ ಸಮಯ ಹೆಚ್ಚಾಗಿದೆ. ಇದು ಸಾಫ್ಟ್‌ವೇರ್ ಅಪ್ಡೇಟ್ ನೆಟ್ವರ್ಕ್ ಸಮಸ್ಯೆ ಕಾಣುತ್ತದೆ
ನಾಡ ಕಚೇರಿಯಲ್ಲಿಯೂ ಆಧಾರ್ ಕಾರ್ಡ್ ನೋಂದಣಿಗೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಆದರೆ, ಅಲ್ಲಿಯೂ ಬಹಳ ನೆಟ್‍ವರ್ಕ್ ಸಮಸ್ಯೆ ಹಾಗೂ ಹೊಸ ಸಾಫ್ಟ್‌ವೇರ್ ಸಮಸ್ಯೆ ಹೀಗಾಗಿ ಆಧಾರ್ ಕಾರ್ಡ್ ನೋಂದಣಿ ತೊಂದರೆ ಹಾಗುತೀವೆ.ನಾಡ ಕಚೇರಿಯಲ್ಲೂಆಧರ್ ನೆಟ್ವರ್ಕ್ ಹಾಗೂ ಸಮಸ್ಯೆ ಇದೆ ಎಂದು ಸ್ಥಳೀಯ ಜನರು ಆಕ್ರೋಶ ವ್ಯಕ್ತಪಡಿಸಿದರು
ಸಾಫ್ಟ್‌ವೇರ್ ಅಪ್ಡೇಟ್ ಸಮಸ್ಯೆ…ನಾಡ ಕಚೇರಿ ಮೂಲಕ ಆಧರ್ ಸೇವಗಳು ವಿತರಿಸುವಲ್ಲಿ ವಿಳಂಬ ಆಗುತ್ತಿರುವುದಕ್ಕೆ ಒಂದು ಸಮಸ್ಯೆಯಾದರೆ, ಸಾಫ್ಟ್‌ವೇರ್‌ನಿಂದಲೂ ಒಂದಷ್ಟು ಸಮಸ್ಯೆಗಳು ಇವೆ. ಶೀಘ್ರದಲ್ಲೇ ಇದಕ್ಕೆ ಸಂಬಂಧಿಸಿದ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಮಸ್ಯೆ ಬಗೆಹರಿಯುವ ಸಾವ೯ಜನಿಕರ ಹೇಳಿದರು..
ವರದಿ:- ಮಂಜುನಾಥ ಕುಂಬಾರ