Ad imageAd image

ಎಂಟನೆಯ ವಿಜಯಪುರ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನ : ಸವಾ೯ಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ

Bharath Vaibhav
ಎಂಟನೆಯ ವಿಜಯಪುರ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನ : ಸವಾ೯ಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ
WhatsApp Group Join Now
Telegram Group Join Now

ವಿಜಯಪುರ: ಇದೆ ಜನೇವರಿ ೨೧.೨೨ ವಿಜಯಪುರ ತಾಲೂಕ ಎಂಟನೆಯ ಕನ್ನಡ ಸಾಹಿತ್ಯ ಸಮ್ಮೇಳನ ಹಿಟ್ಟಿನಹಳ್ಳಿಯಲ್ಲಿ ಜರುಗುತ್ತಿದೆ ಸಮ್ಮೇಳನದ ಸವಾ೯ಧ್ಯಕ್ಷರಾಗಿ ಸಾಹಿತಿ ಸೋಮಲಿಂಗ ಗೆಣ್ಣೂರ ಸವಾ೯ನುಮತದಿಂದ ಆಯ್ಕೆಯಾಗಿದ್ದಾರೆ.
ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಕಾಯ೯ಕಾರಿ ಸಮಿತಿ ಪದಾಧಿಕಾರಿಗಳು ಚಚಿ೯ಸಿ ಸವಾ೯ನುಮತದಿಂದ ಸಾಹಿತಿ ಸೋಮಲಿಂಗ ಗೆಣ್ಣೂರ ಇವರನ್ನು ಸವಾ೯ಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಸೋಮಲಿಂಗ ಗೆಣ್ಣೂರ ಚಿಂತಕರು. ವಾಗ್ಮೀಗಳು. ಲೇಖಕರು ಹಾಗೂ ವಿಮರ್ಶಕರಾಗಿದ್ದು ದೇವರಗೆಣ್ಣೂರ ಎಂಬ ಆತ್ಮಕಥನ. ನಮ್ಮ ಸಂವಿಧಾನ ನಮ್ಮ ಹೆಮ್ಮ ಹಾಗೂ ಅಂಬೇಡ್ಕರ ಮಾಗ೯ ಹಾಗೂ ಸವ೯ಶ್ರೇಷ್ಥ ಭಾರತೀಯ ಎಂಬ ಕೃತಿಗಳನ್ನು ಸಾರಸ್ವತ ಲೋಕಕ್ಕೆ ಸ್ಮರಿಸಿದ್ದರು.

ಹಾಗೂ ಪರಿಶೋಧನೆ ಎಂಬ ಕೃತಿ ರಚಿಸಿದ್ದು ಅಚ್ಚಿನಲ್ಲದೆ. ಸವಾ೯ಧ್ಯಕ್ಷರ ಆಯ್ಕೆಯ ಸಭೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷರಾದ ಹಾಸಿಂಪೀರ ವಾಲಿಕಾರ ಮಾತನಾಡಿ ಸವಾ೯ಧ್ಯಕ್ಷರ ಆಯ್ಕೆ ಪಾರದರ್ಶಕತೆಯಿಂದ ಆಯ್ಕೆ ಮಾಡಿದ್ದೇವೆ. ಕಸಾಪ ಸಂಸ್ಥೆ ಪ್ರತಿಭಾವಂತರನ್ನು ಹಾಗೂ ಸಾಹಿತ್ಯ ಕೃಷಿ ಮಾಡಿದವರನ್ನು ಗುರುತಿಸಿ ಗೌರವಿಸುವ ಪ್ರಾತಿನಿಧಿಕ ಸಂಸ್ಥೆಯಾಗಿದೆ. ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲರೂ ಸೇರಿ ತನು ಮನ ದನ ದಿಂದ ಆಚರಿ ಯಶಸ್ವಿಗೊಳಿಸಿರಿ ಎಂದರು.

ಆಯ್ಕೆಯ ಸಂದರ್ಭದಲ್ಲಿ ಪದಾಧಿಕಾರಿಗಳಾದ ಶಿಲ್ಪಾ ಭಸ್ಮೆ. ಅಭಿಷೇಕ ಚಕ್ರವರ್ತಿ. ಆನಂದ ಕುಲಕರ್ಣಿ. ಜಗದೀಶ ಬೋಳಸೂರ. ಕಮಲಾ ಮುರಾಳ ಅಜು೯ನ ಶಿರೂರ.ಸಂಗನಬಸಪ್ಪ ರೆಡ್ಡಿ ಮುಂತಾದವರುಮಾತನಾಡಿದರು. ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷರಾದ ಬಿ ಎಮ್ ಅಜೂರ ಹಾಗು ಡಾ ಶೈಲಾ ಬಳಗಾನೂರ ಸೋಮಲಿಂಗ ಗೆಣ್ಣೂರ ಅವರ ಹೆಸರನ್ನು ಸೂಚಿಸಿದರು. ತಾಲೂಕ ಕಸಾಪ ಅಧ್ಯಕ್ಷ ಡಾ ಆನಂದ ಕುಲಕರ್ಣಿ ಹಾಗೂ ಮಹಾದೇವಿ ತೆಲಗಿ ಅನುಮೊದಿಸಿದರು. ಸಭೆಯು ಸವಾ೯ನುಮತದಿಂದ ಅಂಗಿಕರಿಸಿತು. ಸಭೆಯಲ್ಲಿ ರಾಜೇಶ್ವರಿ ಮೋಪಗಾರ. ವಿಜಯಲಕ್ಷ್ಮಿ ಹಳಕಟ್ಟಿ. ಆಶಾ ಬಿರಾದಾರ. ಪ್ರೇಮಾ ಬ್ಯಾಕೋಡ. ಜಿ ಎಸ್ ಬಳ್ಳೂರ. ಸಂಗನಗೌಡ ಬಿರಾದಾರ. ಮುದಸ್ಸರ ವಾಲಿಕಾರ. ಪೀರಸಾಬ ವಾಲಿಕಾರ. ಸವಿತಾ ದೊಡಮನಿ. ನೀಲಾ ಬಗಲಿ. ಕಮಲಾ ಬಿರಾದಾರ. ಜ್ಯೋತಿ ಪಡನಾಡ. ಪಕ್ರುದ್ದೀನ ಹಿರೇಕೊಪ್ಪ. ಮಹಮ್ಮದ ವಾಲೀಕಾರ. ಪ್ರದೀಪ ನಾಯ್ಕೊಡಿ. ಅಹಮ್ಮದ ವಾಲಿಕಾರ. ಕುಮಾರಗೌಡ ಬಿರಾದಾರ. ಡಾ ಸುರೇಶ ಕಾಗಲಕರಡ್ಡಿ. ಮುಂತಾದವರು ಉಪಸ್ಥಿತರು. ಸುಶೀಲಾಬಾಯಿ ತಳೆವಾಡ ಹಾಗು ಮಹಾಂತಮ್ಮ ಇಂಡಿ ಪ್ರಾಥಿ೯ಸಿದರು. ರಿಯಾಜ ಪಿಂಜಾರ ಪ್ರಾಥಿ೯ಸಿದರು. ಡಾ ಆನಂದ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು ಡಾ. ಶೈಲಾ ಬಳಗಾನೂರ ವಂದಿಸಿದರು.

ವರದಿ : ಸಾಯಬಣ್ಣ ಮಾದರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!