ಬೆಂಗಳೂರು : ಪಕ್ಷ ವಿರೋಧಿ ಚಟುವಟಿಕೆಯ ಹಿನ್ನಲೆಯಲ್ಲಿ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಇಬ್ಬರು ಶಾಸಕರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಿದೆ.
ಶಾಸಕರಾದ ಎಸ್.ಟಿ ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ರನ್ನು ಬಿಜೆಪಿ ಉಚ್ಛಾಟನೆ ಮಾಡಿರುವ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಪರೋಕ್ಷವಾಗಿ ಮುನಿರತ್ನರನ್ನ ಕುಟುಕಿದ್ದಾರೆ.
ಈ ಬಗ್ಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಸೋಮಶೇಖರ್ ಮತ್ತು ಹೆಬ್ಬಾರ್ ಯಾರನ್ನೂ ರೇಪ್ ಮಾಡಿಲ್ವಲ್ಲಾ..? ಎಂದು ಪ್ರಶ್ನಿಸುವ ಮೂಲಕ, ರೇಪ್ ಆರೋಪ ಹೊತ್ತಿರುವ ಶಾಸಕ ಮುನಿರತ್ನರನ್ನು ಬಿಜೆಪಿ ಇನ್ನೂ ಪಕ್ಷದಲ್ಲೇ ಇಟ್ಟುಕೊಂಡಿದೆ ಎಂದು ಕುಟುಕಿದ್ದಾರೆ.
ಈ ಇಬ್ಬರು ನಾಯಕರು ವಿಧಾನ ಸೌಧದಲ್ಲಿ ಯಾರನ್ನೂ ರೇಪ್ ಮಾಡಿಲ್ಲ ಅಥವಾ ಯಾರಿಗೂ ಏಡ್ಸ್ ಇಂಜೆಕ್ಷನ್ ಕೊಟ್ಟಿಲ್ಲ. ಅವರ ಪಕ್ಷದಲ್ಲಿರುವ ಮುತ್ತು ರತ್ನಗಳನ್ನೆಲ್ಲ ಅವರೇ ಇಟ್ಟುಕೊಳ್ಳಲಿ ಎಂದು ಮಾರ್ಮಿಕವಾಗಿ ಮುನಿರತ್ನ ವಿಚಾರದಲ್ಲಿ ಬಿಜೆಪಿ ಕ್ರಮ ಕೈಗೊಳ್ಳದ ಕುರಿತು ಟೀಕಿಸಿದ್ದರೆ.




