ಹಾಸನ: ತಾಯಿ ಮಗನ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಕಂಠಪೂರ್ತಿ ಕುಡಿದು ಬಂದಿದ್ದ 19 ವರ್ಷದ ಮಗನೊಬ್ಬ ಹೆತ್ತ ತಾಯಿಯನ್ನೇ ಕೊಲೆಗೈದಿದ್ದಾನೆ.
ಹಾಸನ ಜಿಲ್ಲೆಯ ಆಲೂರಿನ ಕದಾಳುಚನ್ನಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ರೇಮ (45) ಮಗನಿಂದ ಕೊಲೆಯಾದ ಮಹಿಳೆ ಸಂತೋಷ್ (19) ತಾಯಿಯನ್ನೇ ಕೊಂದ ಮಗ.ಮಗ ಸಂತೋಷ್ ಕುಡಿದು ಮನೆಗೆ ಬಂದಿದ್ದ. ತಾಯಿ ಮಗನಿಗೆ ಬುದ್ಧಿವಾದ ಹೇಳಿದ್ದಾರೆ.
ಅಲ್ಲದೇ ಮಗನ ವರ್ತನೆಗೆ ಬೇಸರಗೊಂಡು ಅಡುಗೆ ಮಾಡಿರಲಿಲ್ಲ. ಅಡುಗೆ ಮಾಡದ ಕಾರಣಕ್ಕೆ ಮತ್ತೆ ಜಗಳ ತೆಗೆದ ಮಗ ತಾಯಿಯ ತಲೆಗೆ ದೊಣ್ಣೆಯಿಂದ ಹೊಡೆದಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದ ತಾಯಿಯನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.




