ಮೈಸೂರು: ಎಲ್‌ಐಸಿ ಹಣಕ್ಕಾಗಿ ತಂದೆಯನ್ನೇ ಮಗ ಹತ್ಯೆಗೈದ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಸಮೀಪದ ಗೆರೋಸಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.
ತಂದೆ ಅಣ್ಣಪ್ಪನ ಹೆಸರಿನಲ್ಲಿ ಮಗ ಪಾಂಡು ವಿಮೆ ಮಾಡಿಸಿದ್ದ.ಈ ವಿಮೆ ಹಣಕ್ಕಾಗಿ ಹಿಂಬದಿಯಿಂದ ತಲೆಗೆ ದೊಣ್ಣೆಯಲ್ಲಿ ಹೊಡೆದು ಕೊಂದಿದ್ದಾನೆ.
ಬಳಿಕ ಘಟನೆಯ ಕುರಿತು ಯಾರಿಗೂ ಅನುಮಾನ ಬರಬಾರದೆಂದು ಅಪಘಾತದ ಕಥೆ ಕಟ್ಟಿದ್ದಾನೆ. ಅಪರಿಚಿತ ವಾಹನ ಡಿಕ್ಕಿಯಾಗಿ ತಂದೆ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾನೆ. ಇಷ್ಟೇ ಅಲ್ಲದೇ ಬೈಲುಕುಪ್ಪೆ ಪೊಲೀಸರಿಗೂ ಪಾಂಡು ದೂರು ಕೊಟ್ಟಿದ್ದ. ದೂರು ದಾಖಲಿಸಿಕೊಂಡ ಪೊಲೀಸರು ಅನುಮಾನಗೊಂಡಿದ್ದಾರೆ.
ಹೀಗಾಗಿ ಪಾಂಡುನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸತ್ಯ ಬೆಳಕಿಗೆ ಬಂದಿದ್ದು, ಎಲ್ ಐಸಿ ಇನ್ಸೂರೆನ್ಸ್ ಪಾಲಿಸಿ ಹಣಕ್ಕಾಗಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಕ