Ad imageAd image

ಐಫೋನ್ ಖರೀದಿಸಿದನ್ನ ಪ್ರಶ್ನಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಮಗ 

Bharath Vaibhav
ಐಫೋನ್ ಖರೀದಿಸಿದನ್ನ ಪ್ರಶ್ನಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಮಗ 
WhatsApp Group Join Now
Telegram Group Join Now

ಬೆಳಗಾವಿ : ಇತ್ತೀಚೆಗಿನ ದಿನಗಳಲ್ಲಿ ಯುವ ಜನತೆ ಕ್ಷುಲಕ ಕಾರಣಕ್ಕೆ ಪ್ರಾಣವನ್ನೇ ಕಳೆದುಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದು, ಇದೀಗ ಬೆಳಗಾವಿಯ ವೈಭವ ನಗರದಲ್ಲಿ ಐಫೋನ್ ತಗೊಂಡಿದ್ದನ್ನು ಪೋಷಕರು ಪ್ರಶ್ನಿಸಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಮೃತ ಯುವಕನನ್ನು ಮುಸ್ತಫೀಸ್ ಅಬ್ದುಲ್ ರಶೀದ್ ಶೇಖ್ (24) ಎಂದು ಗುರುತಿಸಲಾಗಿದೆ. ಯುವಕನ ಎರಡು ದಿನದ ಹಿಂದೆಯಷ್ಟೇ 70 ಸಾವಿರ ಬೆಲೆ ಐಫೋನ್ ಅನ್ನು ಇಎಂಐ ಮೂಲಕ ಖರೀದಿಸಿದ್ದ.. ಈ ವಿಚಾರ ಗೊತ್ತಾಗಿ ತಂದೆ ಅಷ್ಟೊಂದು ಹಣಕೊಟ್ಟು ಯಾಕೆ ಫೋನ್ ತಗೊಂಡೆ. ಕಡಿಮೆ ಹಣದು ತೆಗೆದುಕೊಳ್ಳಬೇಕಿತ್ತು ಎಂದು ಬುದ್ದಿವಾದ ಹೇಳಿದ್ದಾರೆ.

ಕಡಿಮೆ ದರದ ಫೋನ್ ತೆಗೆದುಕೊಳ್ಳಬೇಕಿತ್ತು ಎಂದು ಬುದ್ದಿವಾದ ಹೇಳಿದ್ದಕ್ಕೆ ಯುವಕ ಮನನೊಂದು ತನ್ನ ರೂಮ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೆಳಗ್ಗೆ ಯಾಕೆ ಇನ್ನು ಮಗ ಎದ್ದಿಲ್ಲ ಎಂದು ನೋಡಲು ಹೋದಾಗ ಮಗ ಆತ್ಮಹತ್ಯೆಗೆ ಶರಣಾಗುವುದು ಬೆಳಕಿಗೆ ಬಂದಿದೆ.

ಸದ್ಯ ಈ ಘಟನೆಗೆ ಸಂಬಂಧಪಟ್ಟಂತೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

WhatsApp Group Join Now
Telegram Group Join Now
Share This Article
error: Content is protected !!