ಚಿಟಗುಪ್ಪ: ವಿದ್ಯಾರ್ಥಿನಿ ಸೋನಾ ಪಿಯುಸಿಯಲ್ಲಿ 593 (98.83 )ಅಂಕ ಪಡೆದು ಉತ್ತಮ ಸಾಧನೆ ಗೈದಿದ್ದಾಳೆ.
2025-26ನೇ ಸಾಲಿನ ಪಿಯುಸಿ ಪರೀಕ್ಷೆ 1ರ ಫಲಿತಾಂಶ ಗುರುವಾರ ಪ್ರಕಟಣೆಗೊಂಡಿದ್ದು ಚಿಟಗುಪ್ಪ ಪಟ್ಟಣದ ಸರ್ಕಾರಿ ಕನ್ಯಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸೋನಾ ತಂದೆ ಚಂದ್ರಕಾಂತ ಕಲಾ ವಿಭಾಗದಲ್ಲಿ 600ಕ್ಕೆ 593 (98.83)ಅಂಕ ಪಡೆಯುವ ಮೂಲಕ ನಮ್ಮ ಕಾಲೇಜಿಗೆ ಕೀರ್ತಿ ತಂದಿದ್ದಾಳೆ ಎಂದು ಕಾಲೇಜಿನ ಪ್ರಾಂಶುಪಾಲರಾದ ರಾಜೇಂದ್ರ ಚೌಹಾಣ್ ತಿಳಿಸಿದ್ದಾರೆ. ವಿದ್ಯಾರ್ಥಿನಿಯ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರಾದ ರಾಜೇಂದ್ರ ಚೌಹಾಣ್ ಸೇರಿ ಉಪನ್ಯಾಸಕರು,ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.
ವರದಿ: ಸಜೀಶಕುಮಾರ ಲಂಬುನೋರ




