ಚಡಚಣ: ಪಟ್ಟಣದಲ್ಲಿ ಹಾಡು ಹಗಲೇ ದಿನಾಂಕ 16 9 2025 ರಂದು ಐದು ಜನ ಮುಷ್ಕರಧಾರಿಗಳು ಮಿಲಿಟರಿ ಸಮವಸ್ತ್ರ ಧರಿಸಿಕೊಂಡು ಎಸ್ ಬಿ ಐ ಬ್ಯಾಂಕಿನೊಳಗೆ ಸಿನಿಮಾ ಮಾದರಿಯಲ್ಲಿ ಎಸ್‌ಬಿಐ ಸಿಬ್ಬಂದಿಗಳಿಗೆ ತಲೆಗೆ ಪಿಸ್ತೂಲ್ ಹಚ್ಚಿ ಕೈಕಾಲುಗಳನ್ನು ಕಟ್ಟಿ ರೂಮಿನೊಳಗೆ ಹಾಕಿ ಒಂದು ಕೋಟಿ ನಾಲ್ಕು ಲಕ್ಷ ನಗದು ಅಂದಾಜು 22 ಕೆಜಿ ಚಿನ್ನ ತೆಗೆದುಕೊಂಡು ಪರಾರಿಯಾಗಿರುವ ಘಟನೆ ಕರ್ನಾಟಕ ರಾಜ್ಯದಲ್ಲಿ ಸದ್ದು ಮಾಡಿದೆ.
ಇದನ್ನು ಕಂಡ ಚಡಚಣ ಪಟ್ಟಣದ ಜನರು ಆತಂಕಕ್ಕೆ ಒಳಗಾಗಿದ್ದರು ಹಣ ಮತ್ತು ಚಿನ್ನವನ್ನು ತಗೆದುಕೊಂಡು ಹೋಗುವಾಗ ಮಹಾರಾಷ್ಟ್ರದ ಗಡಿಭಾಗದಲ್ಲಿ ಹುಲಿಜಂತಿಯ ಗ್ರಾಮದಲ್ಲಿ ವಾಹನವನ್ನು ಆಕ್ಸಿಡೆಂಟ್ ಮಾಡಿದಾಗ ಅಲ್ಲಿದ್ದ ಜನರು ಎಕ್ಸಿಡೆಂಟ್ ಆದಲ್ಲಿ ದೌಡಾಶಿ ಬಂದರು ಆಗ ದುಷ್ಕರ್ಮಿಗಳು ಜನರನ್ನು ಹೆದರಿ ಅವರ ಹತ್ತಿರ ಇದ್ದರೆ ಪಿಸ್ತೂಲ್ ಮಾರ್ಕ್ ಅಸ್ತ್ರಗಳನ್ನು ಹೊರಗೆ ತೆಗೆದು ಜನರನ್ನು ಹೆದರಿಸಿ ವಾಹನವನ್ನು ಅಲ್ಲೇ ರಸ್ತೆಯ ಮೇಲೆ ಬಿಟ್ಟು ಅಲ್ಲಿಂದ ಪಲಾಯನ ವಾಗಿದ್ದರು.
ಜನರು ಅವರನ್ನು ನೋಡಿ ಗಾಬರಿಗೊಂಡರು ವಾಹನದಲ್ಲಿ ಅಲ್ಪಸ್ವಲ್ಪ ಚಿನ್ನು ಮತ್ತು ಹಣ ನೋಡಿ ಜನರಲ್ಲಿ ಆತಂಕವನ್ನು ಉಂಟಾಯಿತು ಪಲಾಯನ ಆದ ದುಷ್ಕರ್ಮಿಗಳು ಒಂದು ಹೊಲದ ಬೀಳ ಹಳೆಯ ಮನೆಯಲ್ಲಿ ಒಂದು ಬ್ಯಾಗನ್ನು ಎಸೆದು ಹೋಗಿದ್ದಾರೆ ಅದರಲ್ಲಿ ನಲವತ್ತು ಒಂದು ಲಕ್ಷ ನಗದು ಆರರಿಂದ ಏಳು ಕೆಜಿ ಬಂಗಾರ ಪೊಲೀಸ್ ಇಲಾಖೆ ಜಪ್ತಿ ಮಾಡಿಕೊಂಡಿದೆ ಇನ್ನೂ ಆರೋಪಿಗಳಿಗೆ ಹುಡುಕಾಟ ನಡದಿದೆ ಎಂದು ಲಕ್ಷ್ಮಣ ನಿಂಬರಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವರದಿ: ಉಮಾಶಂಕರ ಕ್ಷತ್ರಿ




