ಬೆಂಗಳೂರು: ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಒಟಿಟಿ ಸೀಸನ್ 1ರ ಮಾಜಿ ಸ್ಪರ್ಧಿ, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸೋನು ಶ್ರೀನಿವಾಸ್ ಗೌಡ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ.
ಕೆಲವೊಮ್ಮೆ ಕೆಟ್ಟ ಕಾರಣಕ್ಕೂ ಸೋನು ಶ್ರೀನಿವಾಸ್ ಗೌಡ ಸುದ್ದಿಯಾಗುತ್ತಾರೆ. ಬಿಗ್ಬಾಸ್ ಮನೆಗೆ ಹೋಗಿದ್ದಾಗಲೂ ಸಖತ್ ಸುದ್ದಿಯಲ್ಲಿದ್ದ ಸೋನು ಗೌಡ, ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದೇನೆ ಅಂತ ಹೇಳಿ ಶಾಕ್ ಕೊಟ್ಟಿದ್ದರು.
ಈಗ ಶ್ರೀಲಂಕಾದ ಬೀಚ್ನಲ್ಲಿ ಫುಲ್ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಪಡ್ಡೆ ಹುಡುಗರ ಹಾರ್ಟ್ಗೆ ಕಿಚ್ಚು ಹಚ್ಚಿದ್ದಾರೆ.
ಕಲರ್ ಫುಲ್ ಬಿಕಿನಿ ತೊಟ್ಟು, ಹಾರ್ಟ್ ಶೇಪ್ನಲ್ಲಿ ಕೈಯನ್ನು ಮೇಲೆತ್ತಿ ಸೋನು ಪೋಸ್ ಕೊಟ್ಟಿದ್ದಾರೆ. ಈ ಫೊಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಬಣ್ಣ ಬಣ್ಣದ ಬಿಕಿನಿ ಧರಿಸಿ ಕ್ಯಾಮೆರಾ ಕಣ್ಣಿಗೆ ಸಖತ್ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ವಿವಿಧ ಭಂಗಿಗಳ ಫೋಟೋಗಳನ್ನ ನಟಿ ಶೇರ್ ಮಾಡಿದ್ದಾರೆ. ಸೋನು ಅವತಾರಕ್ಕೆ ಒಂದಿಷ್ಟು ಜನ ಮೆಚ್ಚುಗೆ ಸೂಚಿಸಿದ್ರೆ, ಮತ್ತೊಂದಿಷ್ಟು ಜನ ಖಡಕ್ ಆಗಿ ಕ್ಲಾಸ್ ತೆಗೆದುಕೊಳ್ತಿದ್ದಾರೆ.
ತನ್ನ ವಿಚಾರದಲ್ಲಿ ಯಾರಾದರೂ ಟ್ರೋಲ್ ಮಾಡಿದರೆ ಕಣ್ಣೀರು ಹಾಕುವ ಸೋನು ಶ್ರೀನಿವಾಸ್ ಗೌಡ, ಟ್ರೋಲ್ ಆಗುವಂತಹ ಹಲವಾರು ಕಿರಿಕ್ ಮಾಡುತ್ತಲೇ ಇರುತ್ತಾರೆ. ಹಾಗಾಗಿಯೇ ಟ್ರೋಲ್ ಮಾಡುವವರು ಇವರ ವಿಡಿಯೋಗಾಗಿ ಕಾಯುತ್ತಿರುತ್ತಾರೆ ಎನ್ನುವುದು ಸುಳ್ಳಲ್ಲ.ಸೋನು ಶ್ರೀನಿವಾಸ್ ಗೌಡ ಬಳಕುವ ಸೊಂಟ, ಬಂಗಾರದ ಬಣ್ಣದ ಬ್ಯೂಟಿ ಕಂಡು, ಪಡ್ಡೆ ಹುಡುಗರು ನಾ.. ಮುಂದೆ ತಾ..ಮುಂದೆ ಎಂದು ಕಾಮೆಂಟ್ಗಳಲ್ಲಿ ಮಾಡುತ್ತಿದ್ದಾರೆ.
ಈ ಹಿಂದೆ ಸಹ ಸೋನು ಬಿಕಿನಿ ತೊಟ್ಟು ಬೀಚ್ನಲ್ಲಿ ಪೋಸ್ ಕೊಟ್ಟು ಪಡ್ಡೆ ಹೈಕ್ಳ ನಿದ್ದೆ ಕದ್ದಿದ್ದರು.ದೇವರು ಫ್ರೀ ಇದ್ದಾಗ ಮಾಡಿದ ಕ್ಯಾಂಡಿ, ಸೋನು ಗೌಡ ಈಗ ಬೋಲ್ಡ್ ಸುಂದರಿ, ಶ್ರೀಲಂಕಾದಲ್ಲಿ ಮಾಡಿರುವ ಶೋಕಿ ನೋಡಿ ಎಂದು ಫಾಲೋವರ್ಸ್ ಕಾಮೆಂಟ್ ಮಾಡಿದ್ದಾರೆ.
ಕಾಮೆಂಟ್ ಬಾಕ್ಸ್ನಲ್ಲಿ ವಾವ್, ಸೂಪರ್, ಬಾಲಿವುಡ್ ಹೀರೋಯಿನ್, ಮೈ ಗರ್ಲ್ ಅಂತ ಕೆಲ ಯುವಕರು ಕೊಂಡಾಡಿದ್ದಾರೆ. ಇನ್ನೂ ಕೆಲವರು ಇದಕ್ಕೆ ಶ್ರೀಲಂಕಾ ಹೋಗ್ಬೇಕಿತ್ತಾ ಅಂತ ಕಾಲೆಳೆದಿದ್ದಾರೆ.
ಅದರಲ್ಲೂ ಕೆಲವರು ಸಂಸ್ಕೃತಿಯ ಪಾಠ ಮಾಡುತ್ತಿದ್ದಾರೆ.ಈ ಹಿಂದೆ ಸೋನು ಶ್ರೀನಿವಾಸ್ ಗೌಡ ಕೆಲ ಖಾಸಗಿ ಫೋಟೋ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು.
ಹಸಿಬಿಸಿ ದೃಶ್ಯಗಳನ್ನು ನೋಡಿ ಪಡ್ಡೆ ಹುಡುಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದರು. ಜೊತೆಗೆ ಮೊನ್ನೆಯಷ್ಟೇ ಸೋನು ಹೊಸ ವೀಡಿಯೋವೊಂದನ್ನು ಶೇರ್ ಮಾಡಿದ್ದರು, ಹುಡುಗಿಯರಿಗೆ ಮಾತ್ರ ಹುಡುಗರು ನೋಡಬೇಡ ಎಂದು ಹಾಕಿ ಕುತೂಹಲ ಹೆಚ್ಚಿಸಿದ್ದರು.




