Ad imageAd image

ಸರ್ಕಾರಿ ಆಸ್ಪತ್ರೆ ಸುದ್ದಿ ಪ್ರಸಾರವಾದ ಕೂಡಲೇ ಎಚ್ಚೆತ್ತು ಧಿಡೀರ್ ಭೇಟಿಕೊಟ್ಟ ಬೆಳಗಾವಿ Dho

Bharath Vaibhav
ಸರ್ಕಾರಿ ಆಸ್ಪತ್ರೆ ಸುದ್ದಿ ಪ್ರಸಾರವಾದ ಕೂಡಲೇ ಎಚ್ಚೆತ್ತು ಧಿಡೀರ್ ಭೇಟಿಕೊಟ್ಟ ಬೆಳಗಾವಿ Dho
WhatsApp Group Join Now
Telegram Group Join Now

ಖಾನಾಪುರ:-ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು 2 ದಿವಸಗಳ ಹಿಂದಷ್ಟೇ ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ಹೊಸದಾಗಿ ನಿರ್ಮಿಸಿ ಉದ್ಘಾಟನೆಗೆ ಸಿದ್ಧವಾದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡದಲ್ಲಿ ಸಣ್ಣ ಪುಟ್ಟ ಕಾಮಗಾರಿಯೇ ಮುಗಿದಿಲ್ಲಾ ಎಂಬ ವಸ್ತು ಸ್ಥಿತಿಯ ವರದಿ ಪ್ರಕಟಿಸಿ ಬೆಳಕು ಚೆಲ್ಲಿದ್ದರು. ಸದರಿ ಈ ವರದಿ ಆಧರಿಸಿ ಇಂದು ಬೆಳಗಾವಿ ಜಿಲ್ಲೆಯ Dho ಡಾ. ಮಹೇಶ್ ಕೋಣೆ ಹಾಗೂ ಆರೋಗ್ಯ ಇಲಾಖೆಗಳ ಕಟ್ಟಡಗಳ ನಿರ್ಮಾಣದ ಬೆಳಗಾವಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಆದ ಅರುಣ್ ಕುಮಾರ್

ಖಾನಾಪುರ tho ಡಾ. ಮಹೇಶ್ ಕಿವಡಸಣ್ಣನವರ್, ಸಹಾಯಕ ಅಭಿಯಂತರರು ಸುನಿಲ್ ಸೇರಿದಂತೆ ಎಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹೊಸದಾಗಿ ನಿರ್ಮಾಣ ಮಾಡಲಾದ ಸರ್ಕಾರಿ ಆಸ್ಪತ್ರೆಗೆ ಭೇಟಿಕೊಟ್ಟು ಸಮಸ್ಯೆಗಳನ್ನು ಪರಿಶೀಲಿಸಿದರು ಈ ಸಂದರ್ಭದಲ್ಲಿ ನಮ್ಮ ನ್ಯೂಸ್ ಸಮೂಹದೊಂದಿಗೆ ಮಾತನಾಡಿದ dho ಡಾ. ಮಹೇಶ್ ಕೋಣೆ ಈ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಕೆಲವೇ ದಿನಗಳಲ್ಲಿ ಈ ಆಸ್ಪತ್ರೆಗೆ ಉದ್ಘಾಟನೆ ಭಾಗ್ಯ ಕೊಟ್ಟು ಈ ಭಾಗದ ಜನತೆಗೆ ಅನುಕೂಲ ಮಾಡಿಕೊಡುತ್ತೇವೆ ಎಂದು ಹೇಳಿದರು.

ಇನ್ನೂ ಅಭಿಯಂತರರು ಆದ ಅರುಣ್ ಕುಮಾರ್ ಮಾತನಾಡಿ ಕೆಲ ಸಣ್ಣ ಪುಟ್ಟ ಕೆಲಸಗಳು ಇದ್ದು ಕೂಡಲೇ ಇವುಗಳಿಗೆ ಮುಕ್ತಿ ಕೊಟ್ಟು ಖಾನಾಪುರ ಜನತೆಯ ಆರೋಗ್ಯ ಹಿತರಕ್ಷಣೆಗೆ ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದರು. ಒಟ್ಟಾರೆ ನಮ್ಮ ನ್ಯೂಸ್ ವರದಿ ಬಿತ್ತರವಾಗಿ ಅದನ್ನು ಗಮನಿಸಿ ಕೂಡಲೇ ಎಚ್ಚೆತ್ತುಕೊಂಡ ಬೆಳಗಾವಿ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಅಭಿಯಂತರರಿಗೆ ಧನ್ಯವಾದಗಳು. ಮತ್ತು ಈ ವರದಿಯನ್ನು ಸಮಗ್ರವಾಗಿ ಬೆಳಕು ಚೆಲ್ಲಿ ಫಾಲೋ ಅಪ್ ಮೂಲಕ ಸರ್ಕಾರದ ಗಮನಕ್ಕೆ ತೆಗೆದುಕೊಂಡು ಬಂದು ಪರಿಣಾಮಕಾರಿಯಾಗಿ ಪ್ರಭಾವ ಬೀರಿದಕ್ಕೆ ನಮ್ಮ ನ್ಯೂಸ್ ಸಮೂಹಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗ್ತಇದೆ.

ವರದಿ :-ಬಸವರಾಜು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!