ನಿಪ್ಪಾಣಿ: ಶೀಘ್ರದಲ್ಲಿಯೇ ಭೋಜ್ ಕಲ್ಪವೃಕ್ಷ ಕ್ರೆಡಿಟ್ ಸೊಸೈಟಿಯ 8 ಶಾಖೆಗಳ ಪ್ರಾರಂಭ. ವಾರ್ಷಿಕ ಸಭೆಯಲ್ಲಿ ಸಂದೀಪ್ ಪಾಟೀಲರಿಂದ ಮಾಹಿತಿ.
ಮೂರುವರೆ ದಶಕಗಳ ಹಿಂದೆ ಹಿರಿಯ ಸಹಕಾರಿ ಧುರೀಣ ಸುಭಾಷ್ ಹಾಗೂ ಅಶೋಕ ಪಾಟೀಲರ ಪ್ರೇರಣೆಯಿಂದ ಪ್ರಾರಂಭವಾದ ಕಲ್ಪವೃಕ್ಷ ಕೋ ಆಪ್ ಕ್ರೆಡಿಟ್ ಸೊಸೈಟಿ ಮಿತ ಖರ್ಚು, ಪಾರದರ್ಶಕ ಆಡಳಿತದೊಂದಿಗೆ ನಿರಂತರ ಸಂಸ್ಥೆಯ ಅಭಿವೃದ್ಧಿಗೆ ಆಡಳಿತ ಮಂಡಳಿ ಶ್ರಮಿಸಿದ್ದರಿಂದ ಸೊಸೈಟಿಗೆ ಕಳೆದ ಆರ್ಥಿಕ ವರ್ಷದಲ್ಲಿ ದಾಖಲೆ 1 ಕೋಟಿ 5 ಸಾವಿರ ರೂಪಾಯಿ ಲಾಭ ಬಂದಿದ್ದು ಸಂಘದ ಸದಸ್ಯರಿಗೆ ಜಿಲ್ಲೆಯಲ್ಲಿ ದಾಖಲೆ 25ರಷ್ಟು ಲಾಭಾಂಶ ನೀಡಲಾಗುತ್ತಿದ್ದು ಬೆಳಗಾವಿ ಜಿಲ್ಲೆಯಲ್ಲಿ ಶೀಘ್ರದಲ್ಲಿಯೇ 8 ಶಾಖೆಗಳನ್ನು ಪ್ರಾರಂಭಿಸಲಾಗುವುದೆಂದು ಸಂಸ್ಥೆಯ ಅಧ್ಯಕ್ಷ ಸಂದೀಪ್ ಪಾಟೀಲ್ ತಿಳಿಸಿದರು ಅವರು ಸಂಸ್ಥೆಯ 34ನೇ ವಾರ್ಷಿಕ ಸಾಧಾರಣ ಸಭೆಯಲ್ಲಿ ಮಾತನಾಡುತ್ತಿದ್ದರು. ಸಭೆಯ ಪ್ರಾರಂಭದಲ್ಲಿ ಸಂಘದ ವತಿಯಿಂದ ಕಳೆದ ಆರ್ಥಿಕ ವರ್ಷದಲ್ಲಿ ನಿಧನರಾದ ಸಂಸ್ಥೆಯ ಸದಸ್ಯರು ವಿವಿಧ ಕ್ಷೇತ್ರಗಳಲ್ಲಿ ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು ತದನಂತರ ವೇದಿಕೆಯಲ್ಲಿಯ ಗಣ್ಯರಿಂದ ದೀಪ ಬೆಳಗಿ ವಾರ್ಷಿಕ ಸಭೆ ಪ್ರಾರಂಭವಾಯಿತು.

ವಾರ್ಷಿಕ ಸಭೆಯಲ್ಲಿ ವಿವಿಧ ಸ್ಥಾನಗಳಿಗೆ ಆಯ್ಕೆಯಾದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಸಂದೀಪ್ ಪಾಟೀಲ್ ವರದಿ ವಾಚನ ಮಾಡಿ ಸಂಸ್ಥೆ ಗಳನ್ನು ಪ್ರಸ್ತಾಪಿಸಿ ಸದಸ್ಯರಿಂದ ಮಂಜೂರಿ ಪಡೆದು ಸೊಸೈಟಿ ಸಂಪತ್ತಿಗೆ ಸ್ಥಿತಿ ವಿವರಿಸಿದ್ದರು. ಸಂಸ್ಥೆಯು 1677 ಸದಸ್ಯರನ್ನು ಹೊಂದಿದ್ದು 29 ಲಕ್ಷ 97 ಸಾವಿರ ರೂಪಾಯಿ ಶೇರ್ ಬಂಡವಾಳ 8 ಕೋಟಿ 37 ಲಕ್ಷ ರೂಪಾಯಿ ನಿಧಿ 35 ಕೋಟಿ 40.ಲಕ್ಷ ರುಪಾಯಿ ಠೇವು ಸಂಗ್ರಹಿಸಿದ್ದು 21ಕೋಟಿ 77ಲಕ್ಷ ರೂಪಾಯಿ ಗುಂತಾ ವಣೆ ಮಾಡಿ ವರ್ಷಂತೆಕ್ಕೆ ಸಂಘದ ಸದಸ್ಯರಿಗೆ 19 ಕೋಟಿ 57 ಲಕ್ಷ ರೂಪಾಯಿ ಸಾಲ ನೀಡಿ ಸಕಾಲಕ್ಕೆ ಮರುಪಾವತಿಸಿಕೊಂಡಿದ್ದರಿಂದ ಸಂಸ್ಥೆಗೆ ದಾಖಲೆ 1 ಕೋಟಿ 5 ಸಾವಿರ ರೂಪಾಯಿ ಲಾಭ ಬಂದಿರುವುದಾಗಿ ತಿಳಿಸಿದರು.
ವಾರ್ಷಿಕ ಸಭೆಯಲ್ಲಿ ಸಂಚಾಲಕರಾದ ರಮಿತ್ ಸದಲಗೆ ರಮೇಶ್ ಪಾಟೀಲ ಅಶೋಕ್ ಪಾಟೀಲ ರವೀಂದ್ರ ರೂಗೆ ರಾಜಗೌಡ ಪಾಟೀಲ, ವಿಜಯಾ ಪಾಟೀಲ, ಪದ್ಮಶ್ರೀ ಟಾಕಳೆ,ರಾವಸಾಹೇಬ ಪಾಟೀಲ , ಶರಾಫತ್ ದುಧಗಾವೆ ಭಾವುಸಾಬ್ ವಡ್ಡರ ಬೇಡಕಿಹಾಳ ಶಾಖೆಯ ಅಧ್ಯಕ್ಷ ಡಾ. ವಿಪುಲ್ ಸದಲಗೆ, ಮಾಂಗುರ ಶಾಖೆಯ ತಾತ್ಯಾ ಸಾಹೇಬ ಪಾಟೀಲ ಹಾಗೂ ಎಲ್ಲ ಶಾಖೆಗಳ ನಿರ್ದೇಶಕ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ವರದಿ:ಮಹಾವೀರ ಚಿಂಚಣೆ




