ಹಾಸನ : MLC ಸೂರಜ್ ರೇವಣ್ಣ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾರೆ. ಬರ್ತ್ ಡೇ ಸಮಾರಂಭದಲ್ಲಿ ನಾಲಗೆ ಹರಿಬಿಟ್ಟು ವಿವಾದ ಸೃಷ್ಟಿಸಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ, ಅಗ್ರಹಾರ ಗ್ರಾಮದಲ್ಲಿ ನಿನ್ನೆ ರಾತ್ರಿ ಆಯೋಜಿಸಿದ್ದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಷಣದ ವೇಳೆ ನಾಲಗೆ ಹರಿಬಿಟ್ಟಿದ್ದಾರೆ
ಭಾಷಣ ಆರಂಭಿಸಿದ ಸೂರಜ್ ಅವರು, ನಮ್ಮ ತಾತ ದೇವೇಗೌಡರು ಹೇಳುತ್ತಿದ್ದರು. ಹಾಸನದಲ್ಲಿ ಯಾವುದೇ ಪಕ್ಷ ಇಲ್ಲ, ಇರುವುದು ಎರಡೇ ಪಕ್ಷ. ಒಂದು ದೇವೇಗೌಡರ ಪರ, ಇನ್ನೊಂದು ದೇವೇಗೌಡರ ವಿರುದ್ಧವಾಗಿರುವವರ ಪಕ್ಷ. ಈಗ ಅದು ನನಗೆ ಅನುಭವ ಆಗುತ್ತಿದೆ ಎಂದು ತಮ್ಮ ಮೇಲೆ ಬಂದ ಆರೋಪಗಳು ರಾಜಕೀಯ ಷಡ್ಯಂತ್ರ ಎಂದು ಸಮರ್ಥನೆ ಮಾಡಿಕೊಂಡರು.
ನನಗ ತುಂಬಾ ಹುಷಾರಿಲ್ಲ, ಸೋಕಾದ ರೀತಿ ಆಗಿತ್ತು, ಅದಕ್ಕೆ ದೃಷ್ಟಿ ತೆಗೆಸಿದರು. ನಾಯಿಕಣ್ಣು, ನರಿ ಕಣ್ಣು, ಕೆಟ್ಟ ಮುಂಡೆಯರ ಕಣ್ಣು ಅಂತ ದೃಷ್ಟಿ ತೆಗೆದರು. ನಾನು ಮನಸ್ಸಿನಲ್ಲಿ ಅನ್ಕೊಂಡೆ ಕೆಟ್ಟ ಸೂಳೆಯರ ಕಣ್ಣು ಅಂತ ಏಕೆ ಹೇಳಲಿಲ್ಲ ಅಂತ, ನಾನು ಮಹಿಳೆಯರಿಗೆ ಬಗ್ಗೆ ತಪ್ಪು ರೀತಿ ಮಾತನಾಡುತ್ತಿಲ್ಲ.
ದೇವೇಗೌಡರ ವಿರುದ್ಧ ಅಂತ ಬಿಂಬಿಸಿಕೊಳ್ಳದೆ ಪಾರ್ಟಿ ಒಳಗೆ ಇದ್ದು ಮೋಸ ಮಾಡಿದವರಿಗೆ ಈ ಮಾತು ಹೇಳಿದೆ. ಕೆಟ್ಟ ಸೂಳೆಯರ ಕಣ್ಣು ತೆಗೆದು ಬಿಡವ್ವ ಅಂತ ಹೇಳ್ದೆ ಎಂದು ತುಂಬಿದ ವೇದಿಕೆ ಭಾಷಣದಲ್ಲೇ ನಾಲಿಗೆ ಹರಿಬಿಟ್ಟಿದ್ದಾರೆ.