ಮೊಳಕಾಲ್ಮೂರು: ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರಾದ ಎನ್ ವೈ ಗೋಪಾಲಕೃಷ್ಣರವರನ್ನು ವೈಯಕ್ತಿಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ತೆಜೋವಧೆ ಮಾಡಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆ ಕೆ ಜೆ ಜಯಲಕ್ಷ್ಮಿವಿರುದ್ಧ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಮುಖಂಡರು ಕಾರ್ಯಕರ್ತರು ಮಹಿಳಾ ವಿಭಾಗದ ರಾಜ್ಯದ್ಯಕ್ಷರಾದ ಸೌಮ್ಯ ರೆಡ್ಡಿಗೆ ದೂರು ನೀಡಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಮಧ್ಯಾಹ್ನ ಸೌಮ್ಯ ರೆಡ್ಡಿಯನ್ನು ಭೇಟಿಯಾಗಿ ದೂರು ಸಲ್ಲಿಸಿದ್ದಾರೆ.

7 ಬಾರಿ ಶಾಸಕರಾಗಿ ಆಯ್ಕೆಯಾಗಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಸರಳ ಮತ್ತು ಸಜ್ಜನಿಕೆಯ ವ್ಯಕ್ತಿಯಾಗಿ ಗುರುತುಸಿಕೊಂಡು ತಾಲೂಕಿನಾದ್ಯಂತ ಉತ್ತಮ ವ್ಯಕ್ತಿ ಎಂದು ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಶಾಸಕರ ಆಡಳಿತ ಬಗ್ಗೆ ರಾಜಕೀಯವಾಗಿ ಮಾತನಾಡಲಿ ಅದನ್ನು ಬಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕವಾಗಿ ನಿಂದನೆ ಮಾಡಿರುವುದು ಎಲ್ಲಾ ಕಾರ್ಯಕರ್ತರಿಗೂ ನೋವು ತಂದಿದೆ. ಹೀಗಾಗಿ ಇವರು ವಿರುದ್ಧ ಶಿಸ್ತುನ ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಮನವಿ ಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದ ಮುಖಂಡರ ಮತ್ತು ಕಾರ್ಯಕರ್ತರ ಮಾತಿಗೆ ಮಹಿಳೆ ಅಧ್ಯಕ್ಷೆ ಸೌಮ್ಯ ರೆಡ್ಡಿ ಮಾತನಾಡಿ ನಮ್ಮ ಪಕ್ಷದ ಹಿರಿಯ ರಾಜಕಾರಣಿ ಎನ್ ವೈ ಗೋಪಾಲಕೃಷ್ಣ ಅವರನ್ನು ತೇಜೋವಧೆ ಮಾಡಿರುವುದು ನಿಮಗೊಂದೇ ಅಲ್ಲದೆ ನನಗೂ ಕೂಡ ತುಂಬಾ ನೋವಾಗಿದೆ. ಅವರು ಏಳು ಬಾರಿ ಶಾಸಕರಾಗಿ ಉತ್ತಮ ಆಡಳಿತ ನಡೆಸುತ್ತಾ ಬಂದಿದ್ದಾರೆ. ಅಂತವರ ವಿರುದ್ಧ ತೆಜೋವಧೆ ಮಾಡಬಾರದಿತ್ತು. ಆದ್ದರಿಂದ ಜೈಲಕ್ಷ್ಮಿ ಅವರನ್ನು ಪಕ್ಷದ ಚೌಕಟ್ಟಿನಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಇದು ಕಾರ್ಯಕರ್ತರಿಗೆ ಉತ್ತರಿಸಿದರು.
ಕ್ಷೇತ್ರದ ಬದಲಾವಣೆ ಬಗ್ಗೆ ನನಗೆ ಫೋನ್ ಮಾಡಿ ಇಲ್ಲ ಮೆಸೇಜ್ ಮಾಡಿ ಅದು ಬಿಟ್ಟು ಮೆಂಟಲ್ ಕೇಸ್ ಗೋಸ್ಕರ ಇಲ್ಲಿವರೆಗೂ ಬರುವುದು ಬಂದು ದೂರು ನೀಡುವುದು ಬೇಡ. ಎನ್ ವೈ ಗೋಪಾಲಕೃಷ್ಣ ರವರು ಇರಿತನದಲ್ಲಿ ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಉತ್ತಮ ಹಾಡಳಿತ ನಡೆಸುತ್ತಾ ಬಂದಿದ್ದಾರೆ ಇವರ ಪ್ರಾಮಾಣಿಕತೆ ಮತ್ತು ಕರ್ತವ್ಯ ಮಾದರಿಯಾಗಿದೆ ಇಂತಹ ಹಿರಿಯ ಶಾಸಕರಿಗೆ ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ಕೊಡಲೇ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗುವುದು ಎಂದು ತಿಳಿಸಿದರು.ನಮಗೆ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಮುಖ್ಯ ಎಂದು ಜಯಲಕ್ಷ್ಮಿ ವಿರುದ್ಧ ಮೆಂಟಲ್ ಕೇಸ್ ಎಂದು ಆಕ್ರೋಶ ಅವರ ಹಾಕಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಎಸ್ ಖಾದರ್, ತಳುಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗೇಶ್ ರೆಡ್ಡಿ, ಮಹಿಳಾ ಘಟಕದ ಅಧ್ಯಕ್ಷರಾದ ಸುಧಾ ದೇವಯ್ಯ ಮುಖಂಡರಾದ ದೇವಯ್ಯಹೆಜ್ಜನಳ್ಳಿ ನಾಗರಾಜ್ ಕರುನಾಡ ಜಿಯಾವುಲ್ಲ, ಭರತ್, ಪಿ ಗೋಪಾಲ್ ಇನ್ನು ಹಲವರು ಮಹಿಳೆಯರು ಇದ್ದರು.
ವರದಿ: ಪಿಎಂ ಗಂಗಾಧರ




