——————————————————————————ನಾಯಕ ಮಲ್ಡರ್ ದಾಖಲೆಯ ಇನ್ನಿಂಗ್ಸ್
ಬುಲಾವಾಯೋ (ಜಿಂಬಾಬ್ವೆ): ದಕ್ಷಿಣ ಆಫ್ರಿಕಾ ಹಾಗೂ ಜಿಂಬಾಬ್ವೆ ಕ್ರಿಕೆಟ್ ತಂಡಗಳ ನಡುವೆ ಇಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ಗೆಲುವು ಪಡೆಯುವ ಸಾಧ್ಯತೆ ಹೆಚ್ಚಿದೆ.
ಎರಡನೇ ದಿನದಾಟ ಮುಗಿದಾಗ ಜಿಂಬಾಬ್ವೆ ತನ್ನ ದ್ವಿತೀಯ ಇನ್ನಿಂಗ್ಸ್ ನಲ್ಲಿ ಫಾಲೋ ಆನ್ ಮೇಲೆ 1 ವಿಕೆಟ್ ಗೆ 51 ರನ್ ಗಳಿಸಿದ್ದು, ಇನ್ನಿಂಗ್ಸ್ ಸೋಲಿನ ಭೀತಿ ಎದುರಿಸುತ್ತಿದೆ. ದಕ್ಷಿಣ ಆಫ್ರಿಕಾ ತಂಡದ ಬೃಹತ್ ಮೊದಲ ಇನ್ನಿಂಗ್ಸ್ ಮೊತ್ತವಾದ 5 ವಿಕೆಟ್ ಗೆ 626 ಡಿಕ್ಲೇರ್ ಗೆ ಉತ್ತರವಾಗಿ ಜಿಂಬಾಬ್ವೆ ಮೊದಲ ಸರದಿಯಲ್ಲಿ 170 ರನ್ ಗೆ ಆಲೌಟಾಗಿತ್ತು.
ಜಿಂಬಾಬ್ವೆ ಪರವಾಗಿ ಸೀನ್ ವಿಲಿಯಮ್ಸ್ ಮಾತ್ರ ಪ್ರಥಮ ಸರದಿಯಲ್ಲಿ 83 ರನ್ ಗಳಿಸಿದ್ದರು. ಅವರನ್ನು ಹೊರತು ಪಡಿಸಿ ಯಾವ ಬ್ಯಾಟ್ಸಮನ್ ಗಳು ಪ್ರತಿರೋಧ ತೋರಲಿಲ್ಲ. ದಕ್ಷಿಣ ಆಫ್ರಿಕಾ ಸುಬ್ರಾಯೆನ್ 42 ಕ್ಕೆ 4 ವಿಕೆಟ್ ಪಡೆದರು.
ದಕ್ಷಿಣ ಆಫ್ರಿಕಾ ಪರವಾಗಿ ಆ ತಂಡದ ಮಲ್ಡರ್ 367 ರನ್ ಗಳಿಸಿ ದಾಖಲೆ ನಿರ್ಮಿಸಿದ್ದರು.




