ಹುಬ್ಬಳ್ಳಿ: ತೆಲಂಗಾಣ ಮತ್ತು ಆಂಧ್ರಪ್ರದೇಶದ ಅತ್ಯಂತ ಜನಪ್ರಿಯ ಶಾಪಿಂಗ್ ತಾಣವಾದ ಸೌತ್ ಇಂಡಿಯಾ ಶಾಪಿಂಗ್ ಮಾಲ್ ಇಂದು ಹುಬ್ಬಳ್ಳಿಯಲ್ಲಿ ತನ್ನ 35 ನೇ ಪ್ರಮುಖ ಶೋರೂಮ್ ಅದ್ದೂರಿಯಾಗಿ ಶುಭಾರಂಭವಾಯಿತು.
ಈ ಮಳಿಗೆಯನ್ನು ನಟಿ ರಚಿತಾ ರಾಮ್ ದೀಪ ಬೆಳಗಿಸಿ ಉದ್ಘಾಟಿಸಿದರು, ಬಳಿಕ ಮಾತನಾಡಿದ ಅವರು, ಸೌತ್ ಇಂಡಿಯಾ ಕಾಪಿಂಗ್ ಮಾಲ್ ನ ಭಾಗವಾಗಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಇವರ ಕಲೆಕ್ಷನ್ ಗಳು ಸಾಂಪ್ರದಾಯಿಕ ರೇಷ್ಮೆಯಿಂದ ಅಧುನಿಕ ಎಂಸೆಂಬಲ್ ಗಳವರೆಗೆ ಭಾರತೀಯ ಸಂಸ್ಕೃತಿಯ ಸೌಂದರ್ಯದ ನಿಜವಾದ ಸಂಭ್ರಮಾಚರಣೆಯ ಸಂಕೇತವಾಗಿದೆ. ಅವರು ಕಡಿಮೆ ದರದಲ್ಲಿ ಸಂಪೂರ್ಣ ಹೊಸ ಶ್ರೇಣಿಯ ವೈವಿಧ್ಯತೆಯನ್ನು ಸಂಯೋಜಿಸಿರುವ ಬಗೆ ನನ್ನನ್ನು ಹೆಚ್ಚು ಪ್ರಭಾವಿತಗೊಳಿಸಿದೆ. ಪ್ರತಿಯೊಬ್ಬ ಖರೀದಿದಾರರು ತಮ್ಮ ಸ್ಟೈಲ್ ಅನ್ನು ರಾಜಿ ಮಾಡಿಕೊಳ್ಳದೆ ತಮಗಿಷ್ಟವಾದುದನ್ನು ಪಡೆದುಕೊಳ್ಳಬಹುದಾದ ತಾಣ ಇದಾಗಿದೆ”ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಸೌತ್ ಇಂಡಿಯಾ ಶಾಪಿಂಗ್ ಮಾಲ್ ನ ನಿರ್ದೇಶಕರು ಮಾತನಾಡಿ, ಹುಬ್ಬಳ್ಳಿಯ ಜನರು ನೀಡಿದ ಆತ್ಮೀಯ ಸ್ವಾಗತಕ್ಕಾಗಿ ಹೃತ್ತೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಬ್ರಾಂಡ್ ನ 35 ನೇ ಶಾಪ್ ನ ಮೈಲಿಗಲ್ಲನ್ನು ಸಾಧಿಸಿದ್ದಕ್ಕೆ ಅವರು ಹೆಮ್ಮೆ ವ್ಯಕ್ತಪಡಿಸಿದರು ಮತ್ತು ಸಾಟಿಯಿಲ್ಲದ ವೈವಿಧ್ಯತೆ, ಗುಣಮಟ್ಟ ಮತ್ತು ಮೌಲ್ಯವನ್ನು ನೀಡುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

ಅಧ್ಯಕ್ಷರು ಮತ್ತು ಪೂರ್ಣಾವಧಿ ನಿರ್ದೇಶಕರಾದ ಪೊಟ್ಟಿ ವೆಂಕಟೇಶ್ವರಲು ಮಾತನಾಡಿ, ‘ನಮ್ಮ 35 ನೇ ಶೋ ರೂಂನೊಂದಿಗೆ ಕರ್ನಾಟಕಕ್ಕೆ ಕಾಲಿಟ್ಟಿರುವುದು ಹೆಮ್ಮೆ ಮತ್ತು ಭಾವನಾತ್ಮಕ ಕ್ಷಣವಾಗಿದೆ. ಹುಬ್ಬಳ್ಳಿ ದಕ್ಷಿಣದ ಸಂಸ್ಕೃತಿ ಮತ್ತು ಸೊಬಗನ್ನು ಸುಂದರವಾಗಿ ಪ್ರತಿಫಲಿಸುತ್ತದೆ ಮತ್ತು ನಮ್ಮಶಾಪ್ನಲ್ಲಿ ವಿಶಿಷ್ಟಶಾಪಿಂಗ್ ಅನುಭವವನ್ನು ಈ ಮೂಲಕ ಒದಗಿಸಲು ರೋಮಾಂಚನಗೊಂಡಿದ್ದೇವೆ” ಎಂದು ಹೇಳಿದರು.
ವ್ಯವಸ್ಥಾಪಕ ನಿರ್ದೇಶಕರಾದ ಸೀರ್ನಾ ರಾಜಮೌಳಿ ಮಾತನಾಡಿ, ”ಈ ಪ್ರಮುಖ ಶೋರೂಮ್ ಹಬ್ಬ ಮದುವೆ ಮತ್ತು ಫ್ಯಾಮಿಲಿ ಶಾಪಿಂಗ್ ಅನ್ನು ಎಲ್ಲರಿಗೂ ಹೆಚ್ಚು ರೋಮಾಂಚಕಾರಿ, ಅನುಕೂಲಕರ ಮತ್ತು ಅಗ್ಗವಾಗಿಸುವ ನಮ್ಮ ನಿರಂತರ ಸಮರ್ಪಣೆಯನ್ನು ಪ್ರತಿನಿಧಿಸುತ್ತದೆ” ಎಂದು ಹೇಳಿದರು.
ಪೂರ್ಣಾವಧಿ ನಿರ್ದೇಶಕರಾದ ತಿರುವಿಧುಲ ಪ್ರಸಾದಯ ರಾವ್ ಮಾತನಾಡಿ, ಎಥ್ನಿಕ್ನಿಂದ ವೆಸ್ಟರ್ನ್ವರೆಗೆ ನಮ್ಮ ಕಲೆಕ್ಷನ್ಗಳನ್ನು ಪ್ರತಿಯೊಂದು ಪೀಳಿಗೆ, ಸಂದರ್ಭಮತ್ತು ಬಜೆಟ್ ಗೆ ಸರಿಹೊಂದುವಂತೆ ದಿನ್ಯಾಸಗೊಳಿಸಲಾಗಿದ್ದು ನಮ್ಮಲ್ಲಿ ಎಲ್ಲವೂ ಒಂದೇ ಸೂರಿನಡಿಯಲ್ಲಿ ಲಭ್ಯವಾಗಲಿದೆ” ಎಂದು ಹೇಳಿದರು.
ಹೊಸ ಹುಬ್ಬಳ್ಳಿ ಶೋರೂಮ್ ಕಾಂಚೀಪುರಂ ರೇಷ್ಮೆಯಿಂದ ಹಿಡಿದು ಡಿಸೈನರ್ ಸೀರೆಗಳವರೆಗೆ ವ್ಯಾಪಕ ಶ್ರೇಣಿಯ ಸೀರೆಗಳನ್ನು ಮತ್ತು ಎಥಿಕ್, ವೆಸ್ಟರ್ನ್ ಮತ್ತು ಇಂಡೋ ಪಾಶ್ಚಿಮಾತ್ಯ ಸ್ಟೈಲ್ ಗಳಲ್ಲಿ ಮಹಿಳೆಯರ ಉಡುಪು, ಪುರುಷರ ಉಡುಪು ಮತ್ತು ಮಕ್ಕಳ ಉಡುಪುಗಳನ್ನು ಹೊಂದಿದೆ. ಇದು ನಿಜವಾಗಿಯೂ ಪ್ರತಿಯೊಂದು ಸಂದರ್ಭಕ್ಕೂ ಸರಿಹೊಂದುವ ಅತ್ಯುತ್ತಮ ಶಾಪಿಂಗ್ ತಾಣವಾಗಿದೆ ಎಂದು ತಿಳಿಸಿದರು.
ವರದಿ:ಸುಧೀರ್ ಕುಲಕರ್ಣಿ




