ತುರುವೇಕೆರೆ : ತಾಲೂಕಿನ ಮಾಯಸಂದ್ರದ ಸೌರಭ ಕಾನ್ವೆಂಟಿನ ಪುಟಾಣಿ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ 22 ಬಹುಮಾನಗಳನ್ನು ಪಡೆಯುವ ಮೂಲಕ ವಿಶೇಷ ಸಾಧನೆಗೈದಿದ್ದಾರೆ.
ಮಾಯಸಂದ್ರ ಕ್ಲಸ್ಟರ್ ವ್ಯಾಪ್ತಿಯ ದೊಡ್ಡಬೀರನಕೆರೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಂಠಪಾಠ, ದೇಶಭಕ್ತಿ ಗೀತೆ, ಕಥೆ ಹೇಳುವುದು, ಚಿತ್ರಕಲೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದ ಸೌರಭ ಕಾನ್ವೆಂಟಿನ ವಿದ್ಯಾರ್ಥಿಗಳು 13 ಪ್ರಥಮ, 5 ದ್ವಿತೀಯ, 4 ತೃತೀಯ ಸ್ಥಾನಗಳನ್ನು ಪಡೆದು ಒಟ್ಟು 22 ಬಹುಮಾನಗಳನ್ನು ಪಡೆದುಕೊಳ್ಳುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
ಎಲ್.ಪಿ.ಎಸ್. ವಿಭಾಗದಿಂದ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ಪೂರ್ಣಿಮಾ ಪ್ರಥಮ, ಇಂಗ್ಲಿಷ್ ಕಂಠಪಾಠದಲ್ಲಿ ಆರ್ಯ ಪ್ರಥಮ, ಅರೇಬಿಕ್ ಕಂಠಪಾಠದಲ್ಲಿ ಅಬ್ದುಲ್ ವಹಾಬ್ ಅರ್ಫಾನ್ ಪ್ರಥಮ, ಧಾರ್ಮಿಕ ಪಠಣ (ಸಂಸ್ಕೃತ)ದಲ್ಲಿ ಧನಲಕ್ಷ್ಮೀ ಪ್ರಥಮ, ದೇಶಭಕ್ತಿ ಗೀತೆಯಲ್ಲಿ ಪೂರ್ವಿಕ ಪ್ರಥಮ, ಕಥೆ ಹೇಳುವ ಸ್ಪರ್ಧೆಯಲ್ಲಿ ವರ್ಷಿಣಿ ಪ್ರಥಮ, ಛದ್ಮವೇಷದಲ್ಲಿ ಧನಲಕ್ಷ್ಮೀ ದ್ವಿತೀಯ, ಭಕ್ತಿಗೀತೆಯಲ್ಲಿ ಪೂರ್ವಿಕ ತೃತೀಯ, ಕ್ಲೇಮಾಡಲಿಂಗ್ ನಲ್ಲಿ ಅಲ್ಫಿಯಾ ಬಾನು ತೃತೀಯ, ಚಿತ್ರಕಲೆಯಲ್ಲಿ ವರ್ಷಿತ ತೃತೀಯ ಸ್ಥಾನ ಪಡೆದರೆ, ಹೆಚ್.ಪಿ.ಎಸ್. ವಿಭಾಗದಲ್ಲಿ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ಶ್ರೇಯ ಕೆ.ಸಿ. ಪ್ರಥಮ, ಇಂಗ್ಲಿಷ್ ಕಂಠಪಾಠದಲ್ಲಿ ಆಲಿಯಾ ಫಿರ್ದೋಸ್ ಪ್ರಥಮ, ಹಿಂದಿ ಕಂಠಪಾಠದಲ್ಲಿ ನೂರ್ ಸಾದಿಯಾ ಪ್ರಥಮ, ಅರೇಬಿಕ್ ಕಂಠಪಾದಲ್ಲಿ ಆಲಿಯಾ ಫಿರ್ದೋಸ್ ಪ್ರಥಮ, ಧಾರ್ಮಿಕ ಪಠಣ (ಸಂಸ್ಕೃತ)ದಲ್ಲಿ ನೂತನ್ ಕೆ.ವೈ. ಪ್ರಥಮ, ಕವನ ವಾಚನದಲ್ಲಿ ಉಮ್ಮೆ ಕುಲ್ಸುಮ್ ಪ್ರಥಮ, ಪ್ರಬಂಧದಲ್ಲಿ ನೂರಾ ಸಾದಿಯಾ ದ್ವಿತೀಯ, ಭಕ್ತಿಗೀತೆಯಲ್ಲಿ ಜಸ್ಮಿತಾ ಲಕ್ಷ್ಮೀ ದ್ವಿತೀಯ, ಕ್ಲೇ ಮಾಡಲಿಂಗ್ ನಲ್ಲಿ ಕೆಂಪೇಗೌಡ ದ್ವಿತೀಯ, ಆಶುಭಾಷಣದಲ್ಲಿ ನೂತನ್ ಕೆ.ವೈ. ತೃತೀಯ, ಅಭಿನಯ ಗೀತೆಯಲ್ಲಿ ನಿಧಿಶ್ರೀ ಯು. ತೃತೀಯ ಸ್ಥಾನ ಪಡೆದಿದ್ದಾರೆ.
ಪ್ರತಿಭಾ ಕಾರಂಜಿಯಲ್ಲಿ ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಂಡು 22 ಬಹುಮಾನಗಳನ್ನು ತಂದು ಶಾಲೆಗೆ ಕೀರ್ತಿ ತಂದ ಪುಟಾಣಿಗಳನ್ನು ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಕಲ್ಪನಾ ಮುನಿರಾಜು, ಮುಖ್ಯ ಶಿಕ್ಷಕ, ಕಸಾಪ ಹೋಬಳಿ ಘಟಕದ ಅಧ್ಯಕ್ಷ ಮುನಿರಾಜು, ಶಿಕ್ಷಕರಾದ ನುಸರತ್ ಜಬಿನ್, ಲಲಿತಾ ಭಟ್, ಗೀತಾಮಣಿ, ಸೌಮ್ಯ, ನಮಿರಾ ಖಾನಂ, ಪ್ರಭಾ ಸೇರಿದಂತೆ ಬೋಧಕ, ಬೋಧಕೇತರ ವರ್ಗ ಅಭಿನಂದಿಸಿದರು.
ವರದಿ : ಗಿರೀಶ್ ಕೆ ಭಟ್




