ಮೊಳಕಾಲ್ಮುರು: ಪಟ್ಟಣದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವೆಂಕಟೇಶ್ವರ ದೇವಸ್ಥಾನ ಮತ್ತು ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ವಿಶೇಷ ಪೂಜೆ ,ದೇವರ ದರ್ಶನ ಪಡೆದು ಪುನೀತರಾದ ಭಕ್ತರು.
ವೈಕುಂಠ ಏಕಾದಶಿ ಪ್ರಯುಕ್ತ ಇಡೀ ರಾಜ್ಯದ್ಯಂತ ವಿಶೇಷವಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿ ಬೆಳಿಗ್ಗೆಯಿಂದಲೇ ಭಕ್ತರಿಗೆ ದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದು ವಿಶೇಷವಾಗಿ ವೈಕುಂಠ ಏಕಾದಶಿಯ ದಿನ ವೈಕುಂಠ ಏಕಾದಶಿಯ ಬಾಗಿಲು ಒಳಗೆ ಹೋದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎನ್ನುವ ಸಂಪ್ರದಾಯವು ಇರುವುದರಿಂದ ಎಲ್ಲ ಭಕ್ತರು ದರ್ಶನ ಪಡೆದು ವೈಕುಂಠದ ಬಾಗಿಲಿನಲ್ಲಿ ಪ್ರವೇಶ ಮಾಡಿ ಪಡೆದು ಪುನೀತರಾದರು ಅದೇ ರೀತಿ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ವಿಶೇಷವಾಗಿ ಅಲಂಕಾರ ಮಾಡಿದ್ದ ಪಾಂಡುರಂಗ ದೇವಸ್ಥಾನದಲ್ಲಿ ದೇವರನ್ನು ಮುಟ್ಟಿ ದರ್ಶನ ಪಡೆದಿದ್ದು ವಿಶೇಷವಾಗಿತ್ತು. ಬೆಳಿಗ್ಗೆಯಿಂದಲೇ ಜನರು ದರ್ಶನ ಪಡೆದು ಪುನೀತರಾದರು.
ಒಟ್ಟಿನಲ್ಲಿ ವೈಕುಂಠ ಏಕಾದಶಿಯು ಇಡೀ ನಾಡಿನಾದ್ಯಂತ ಭಕ್ತರು ದೇವರ ದರ್ಶನ ಪಡೆದು ತಮ್ಮ ತಮ್ಮ ಕಷ್ಟಗಳನ್ನು ದೂರ ಮಾಡಿ ಮುಕ್ತಿ ಕೊಡು ಎಂದು ಕೇಳುತ್ತಾ ಜನರು ದೇವರ ದರ್ಶನ ಪಡೆದಿದ್ದು ವಿಶೇಷವಾಗಿತ್ತು.
ವರದಿ: ಪಿಎಂ ಗಂಗಾಧರ