ಸೇಡಂ: ಆನ್ ಲೈನ್ ಯೋಗ ತರಗತಿಯು ಇಂದಿಗೆ 1547 ದಿನ ಪೂರೈಸಿದ ಶುಭ ಸಂದರ್ಭ ಸಮಾಜದಲ್ಲಿ ಸ್ವಸ್ಥ ಮನಸುಗಳಿಂದ ಸ್ವಸ್ಥ ಆರೋಗ್ಯ ಸ್ವಸ್ಥ ಆರೋಗ್ಯದಿಂದ ಸ್ವಾಸ್ತ್ಯ ಸಮಾಜ ನಮ್ಮ ಸಂಸ್ಥೆಯ ಗುರಿ. ನಿಜಕ್ಕೂ ಇದುಒಂದು ಸಾಧನೆಯ ಕಥೆ!
ಸ್ವಾಸ್ತ್ಯರಾಜ್ಯ ಯೋಗ ಕೇಂದ್ರವು ನಿರಂತರವಾಗಿ, ಯಾವುದೇ ಶುಲ್ಕವಿಲ್ಲದೆ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಪಡುವ ಸಂಗತಿ. ಇದು ಕೇವಲ ಯೋಗಾಭ್ಯಾಸದ ಸ್ಥಳವಲ್ಲ; ಇದು ಶರೀರ, ಮನಸ್ಸು ಮತ್ತು ಆತ್ಮವನ್ನು ಶುದ್ಧೀಕರಿಸುವ ಪುಣ್ಯ ಧಾಮವಾಗಿದೆ. ಈ ಕೇಂದ್ರದಲ್ಲಿ ಪ್ರತಿದಿನವೂ ಭಾಗವಹಿಸಿದ ಯೋಗ ಸಾಧಕರು ಶಿಸ್ತಿನಿಂದ, ಶುದ್ಧ ಮನಸ್ಸಿನಿಂದ, ನಿಸ್ವಾರ್ಥ ಸೇವೆಯಿಂದ, ದೈನಂದಿನ ಯೋಗಾಭ್ಯಾಸದ ಮೂಲಕ ತಮ್ಮ ಆರೋಗ್ಯ, ಶಾಂತಿ, ಆತ್ಮವಿಶ್ವಾಸ ಹಾಗೂ ಜೀವನದ ಶ್ರೇಷ್ಟತೆಯನ್ನು ಕಂಡುಹಿಡಿದಿದ್ದಾರೆ.
ಇದು ಸಾಧ್ಯವಾಗಿದ್ದು ಕೇಂದ್ರದ ಹಿಂದಿನ ಶಕ್ತಿ ಆಧ್ಯಾತ್ಮಿಕ ಶ್ರದ್ಧೆ ಮತ್ತು ಸೇವಾಭಾವದಿಂದ ತುಂಬಿರುವ ನಮ್ಮ ಯೋಗ ಗುರುಗಳೇ ಅವರೇ ಹಿಂದೆ ಕೊಡ್ಲಾ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ ನಾಗಯ್ಯ ಮಠ ಹಾಗೂ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಸೋಮನಾಥ ರೆಡ್ಡಿ ಪೂರ್ಮಾ ಅವರು. ಹೃದಯದ ಭಾಷೆಯ ಮೂಲಕ ಯೋಗದಲ್ಲಿ ಅಭಿರುಚಿ ಮೂಡಿಸಿದ್ದಾರೆ ಅದಕ್ಕೆ ಉದಾಹರಣೆ ನಮ್ಮ ಭಾಗದ ಹೆಮ್ಮೆಯ ಅಧಿಕಾರಿಗಳು ಪ್ರಸ್ತುತ ಮೈಸೂರಿನ ಸಹಾಯಕ ಆಯುಕ್ತಕರಾದ ಆಶಪ್ಪ ಪೂಜಾರಿ ಅವರು ಯೋಗ ಸಂಪನ್ಮೂಲ ವ್ಯಕ್ತಿ ಯಾಗಿದ್ದಾರೆ.
ಗುರುಗಳ ತ್ಯಾಗ, ಶ್ರದ್ಧೆ, ಹಾಗೂ ನಿರಂತರ ಸೇವೆಗಾಗಿ ನಾವು ಎಲ್ಲಾ ಯೋಗ ಮಹಿಳಾ ಸಾದಕಿಯರು ಹೆಮ್ಮೆಪಟ್ಟು, ಹೃದಯಪೂರ್ವಕವಾಗಿ ನಮಸ್ಕರಿಸುತ್ತೇವೆ.
ಈ ಸಂತಸದ ಸಂದರ್ಭದಲ್ಲಿ ನಾವು ಹೃದಯಪೂರ್ವಕವಾಗಿ ಎಲ್ಲ ಯೋಗ ಸಹೋದರ ಬಂಧುಗಳಿಗೆ ಪವಿತ್ರ ರಾಖಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತೇವೆ ನೀವು ಎಲ್ಲರಿಗೂ ಆರೈಕೆ ನೀಡುವವರು, ಸ್ಫೂರ್ತಿಯಾದವರು, ನಿಜವಾದ ಯೋಗ ಯೋಧರು. ನಿಮ್ಮ ಸೇವಾ ಯಜ್ಞ ಸದಾ ಬೆಳಗಲಿ. ಯೋಗದ ಬೆಳಕು ಯುಗಾಂತರ ಹರಡುವುದಕ್ಕೆ ಈ ಶುಭ ಹಾರೈಕೆ ಎಂದು ಡಾ.ವಸುಂಧರಾ ಪಾಟೀಲ್ ಸಹಾಯಕ ಉಪನ್ಯಾಸಕರು ತಾರಾನಾಥ ಶಿಕ್ಷಣ ಸಂಸ್ಥೆಯ
SCAB ಕಾನೂನು ಮಹಾವಿದ್ಯಾಲಯ ರಾಯಚೂರು ರವರು ಅಭಿಪ್ರಾಯ ವ್ಯಕ್ತಪಡಿಸಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




