ಸೇಡಂ: ವಿಶ್ವ ಕಾರ್ಮಿಕರ ದಿನಾಚರಣೆ ನಿಮಿತ್ಯ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕ ಸೇಡಂ ವತಿಯಿಂದ ರಾಘಪುರ್ ಗ್ರಾಮದ ಹಜರತ್ ಮೌಲಾಲಿ ದರ್ಗಾದ ಹತ್ತಿರ ಪರಮಪೂಜ್ಯ ತಿಪ್ಪಯ್ಯ ಮುಖ್ಯ ಅವರ ನೇತೃತ್ವದಲ್ಲಿ ಕಾರ್ಮಿಕರ ದಿನಾಚರಣೆಯನ್ನು ವಿಶೇಷವಾಗಿ ಆಚರಣೆ ಮಾಡಲಾಯಿತು ಕುಶಲಕರ್ಮಿಗಳಿಗೆ ಶವಾಸಂಸ್ಕಾರರಿಗೆ ಲೈನ್ ಮ್ಯಾನ್ ಗಳಿಗೆ ಪೋಲಿಸ್ ಸಿಬ್ಬಂದಿ ವರ್ಗಕ್ಕೆ ವಿಶೇಷ ಸನ್ಮಾನ ಮಾಡಿ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಡಾಕ್ಟರ್ ರಾಮಚಂದ್ರ ಗುತ್ತೇದಾರ್ ಶ್ರೀನಿವಾಸ ರೆಡ್ಡಿ ಮದನಾ ಗುಂಡಪ್ಪ ಪೂಜಾರಿ ಮಹೇಶ್ ರೆಡ್ಡಿ ಚಂದ್ರಶೇಖರ್ ಮಡಿವಾಳ ನವೀನ್ ಗುತ್ತೇದಾರ್ ಮುಕುಂದ ಬಂದೆವಪಲ್ಲಿ ಸಿದ್ದಲಿಂಗ ಮದನ ಅನಿಲ್ ಟಿ ನೀಲಿ ಇನ್ನು ಅನೇಕ ಭಕ್ತಾದಿಗಳು ಹಾಜರಿದ್ದರು.
ವರದಿ :ವೆಂಕಟಪ್ಪ ಕೆ ಸುಗ್ಗಾಲ್