ತಿಪಟೂರು: ತಾಲೂಕಿನ ರಂಗಾಪುರ ಹೊಸಹಳ್ಳಿಯ ರಾಯರ ತೋಟದ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ, ಶ್ರೀರಾಮ ನವಮಿ ಪ್ರಯುಕ್ತ ನಾಳೆ ಸ್ವಾಮಿಯವರಿಗೆ ವಿಶೇಷ ಪೂಜೆ ಹೂವಿನ ಅಲಂಕಾರ ಏರ್ಪಡಿಸಲಾಗಿದೆ.
ಬೆಳಗ್ಗೆ 6:30 ರಿಂದ 7 ಗಂಟೆಗೆ ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ, ಬೆಳಗ್ಗೆ 11:00ಗೆ ಪ್ರಸಾದ ವಿನಿಯೋಗ, ಪಾನಕ ಫಲಹಾರ ವಿತರಣೆ ಮಾಡಲಾಗುವುದು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ದೇವಾಲಯದ ಧರ್ಮದರ್ಶಿಗಳಾದ ಮಂಜುನಾಥ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ವರದಿ: ಗಿರೀಶ್ ಕೆ ಭಟ್.