ನಿಪ್ಪಾಣಿ : ಜಗತ್ತಿನ ಮೂರೂವರೆ ಶಕ್ತಿಪೀಠಗಳಲ್ಲಿ ಒಂದಾದ ಕರವೀರ ನಿವಾಸಿನಿ ಕೊಲ್ಲಾಪುರದ ಮಹಾಲಕ್ಷ್ಮಿಗೆ ಮಹಾಶಿವರಾತ್ರಿಯ ಪೂರ್ವ ಸಂಜೆ ಅಂದರೆ ಮಂಗಳವಾರದಂದು ಸಾಯಂಕಾಲ ವಿಶೇಷ ಅಲಂಕಾರ ಪೂಜೆ ನಡೆಯಿತು.
ವಿಶೇಷವಾಗಿ ಶಿವರಾತ್ರಿಯ ಪ್ರಯುಕ್ತ ಬೆಳಿಗ್ಗೆಯಿಂದಲೇ ಕರ್ನಾಟಕ ಮಹಾರಾಷ್ಟ್ರ ಆಂಧ್ರಪ್ರದೇಶ ಗೋವಾ ರಾಜ್ಯಗಳಿಂದ ಭಕ್ತರ ಆಗಮನವಾಗುತ್ತಿತ್ತು. ದಿನವಿಡೀ ಮಂದಿರದಲ್ಲಿ ದೇವಿಗೆ ಕುಂಕುಮಾರ್ಚನೆ, ನೈವೇದ್ಯ ಅಭಿಷೇಕ ವಿಶೇಷ ಅಲಂಕಾರ ಪೂಜೆಗಳು ನಡೆದವು. ಪೂಜಾ ವಿಧಿಗಾಗಿ ಹಾಗೂ ಹರಕೆ ಪೂರೈಸಲು ಭಕ್ತರ ದಂಡೆ ಹರಿದು ಬರುತ್ತಿತ್ತು.ಮಧ್ಯಾಹ್ನ ಸುಡು ಬಿಸಿಲಿನಲ್ಲೂ ಮಂದಿರದಲ್ಲಿ ಭಕ್ತರ ಜನದಟ್ಟಣೆ ಕಡಿಮೆಯಾಗಿದ್ದಿಲ್ಲ.
ಭಕ್ತರಿಗಾಗಿ ಮಂದಿರದಲ್ಲಿ ದೇವಸ್ಥಾನ ಕಮಿಟಿ ವತಿಯಿಂದ ಶುದ್ಧ ಕುಡಿಯುವ ನೀರು ಹಾಗೂ ಪ್ರಸಾದ ವಿತರಣೆ ನಡೆಯಿತು. ಇಂದು ಮಹಾಶಿವರಾತ್ರಿಯ ದಿನವಾದ ಬುಧವಾರ ಮಹಾಲಕ್ಷ್ಮಿ ಮಂದಿರದ ಎರಡನೇ ಅಂತಸ್ತಿನಲ್ಲಿರುವ ಮಾತೃಲಿಂಗ ಗಣೇಶ ಮೂರ್ತಿಯ ದರ್ಶನಕ್ಕಾಗಿ ಅವಕಾಶ ನೀಡಲಾಗಿದ್ದು ಭಕ್ತರಿಗಾಗಿ ವಿಶೇಷ ದರ್ಶನದೊಂದಿಗೆ ಸೂವ್ಯವಸ್ಥಿತ ಹಾಗೂ ಸುಗಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು,ಶಿಸ್ತು ಹಾಗೂ ಸರದಿಯಲ್ಲಿ ದರ್ಶನ ಪಡೆಯಲು ಮಂದಿರದ ಸೇವಕರಿಂದ ವ್ಯವಸ್ತೆ ಮಾಡಲಾಗಿದೆ ಎಂದು ಮಂದಿರದ ಮುಖ್ಯ ಅರ್ಚಕರಾದ ಮಾಧವ್ ಗುರೂಜಿ ಬಿವಿ ಫೈವ್ ನ್ಯೂಸ್ ಪ್ರತಿನಿಧಿಗೆ ತಿಳಿಸಿದ್ದಾರೆ.
ಹಾಗಾದರೆ ಬನ್ನಿ ಶಿವರಾತ್ರಿಯ ಪೂರ್ವ ಸಂಜೆಯ ಮಹಾಲಕ್ಷ್ಮಿ ವಿಶೇಷ ಪೂಜೆಯನ್ನು ನಾವು ತೋರಿಸುತ್ತಿವೆ ನೋಡಿ ಕೃತಾರ್ಥರಾಗಿ.
ವರದಿ : ಮಹಾವೀರ ಚಿಂಚಣೆ




