ಬೆಂಗಳೂರು : ರುದ್ರಾಕ್ಷಿ ಒಂದು ಮಾನವನ ನೆಮ್ಮದಿಯ ಪವಿತ್ರ ವಸ್ತು ಅದನ್ನು ಧರಿಸುವುದರಿಂದ ಹೃದಯಕ್ಕೆ ಮತ್ತು ಮೆದುಳಿಗೆ ಶಾಂತಿ ಎಂದು ಗದ್ದುಗೆ ಮಠದ ಪೂಜ್ಯಶ್ರೀ ವ.ನಿ.ಪ್ರ. ಚರಲಿಂಗ ಮಹಾಸ್ವಾಮಿಜೀ ಹೇಳಿದರು.
ಕಲಬುರ್ಗಿ ನಗರದ ವಿದ್ಯಾನಗರ ಕಾಲೋನಿಯ ವೆಲ್‌ಫೇರ ಸೊಸೈಟಿಯ ಪದಾಧಿಕಾರಿಗಳು ಸದಸ್ಯರು ಭಕ್ತಾದಿಗಳು ಮನೆ ಮನೆಗಳಿಗೆ ಭೇಟಿ ನೀಡಿ ರುದ್ರಾಕ್ಷಿ ಧಾರಣೆ ಮಾಡಿ ಮತ್ತು ರುದ್ರಾಕ್ಷಿಯ ಮಹತ್ವವನ್ನು ತಿಳಿಸಿ ಮಾರ್ಗದರ್ಶನ ನೀಡಿದರು.ಕಾರ್ಯದರ್ಶಿ ಶಿವರಾಜ ಅಂಡಗಿ ಭಕ್ತರಿಗೆ ಕೆಸರಿ ಟೋಪಿ, ಶಾಲು ಹಾಕುವ ಮೂಲಕ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಲಲಿತಾ, ಕಮಲಾಕರ ಸಂಗೋಳಗಿ, ಸುನಂದಾ ಕಾಶಿನಾಥ ಚಿನ್ಮಳ್ಳಿ, ವಿಜಯಶ್ರೀ, ಡಾ. ಓಂಪ್ರಕಾಶ ಹೆಬ್ಬಾಳ, ರೇಖಾ ಶಿವರಾಜ ಅಂಡಗಿ, ಮಲ್ಲಿನಾಥ್ ದೇಶಮುಖ, ಗುರುಲಿಂಗಯ್ಯ, ನಾಗಭೂಷಣ , ಶಾಂತಯ್ಯ ಬೀದಿಮನಿ, ನಾಗರಾಜ ಹೆಬ್ಬಾಳ, ಅಣವೀರಪ್ಪ ಆಂದೇಲಿ, ಶ್ರೀವಸ್ತ ಸಂಗೋಳಗಿ ಸೇರಿದಂತೆ ಮುಂತಾದವರು ಇದ್ದರು.
ವರದಿ:ಅಯ್ಯಣ್ಣ ಮಾಸ್ಟರ್




