ಭಾಲ್ಕಿ : ಕ್ರೀಡೆ ಎಂಬುದು ಆರೋಗ್ಯಕ್ಕೆ ಪೂರಕ, ಕ್ರೀಡೆಯಿಂದ ದೈಹಿಕ ಕ್ಷಮತೆಯೊಂದಿಗೆ ಆರೋಗ್ಯವಾಗಿ ಕ್ರಿಯಾಶೀಲವಾಗಿ ಇರಲು ಸಾಧ್ಯ ಎಂದು ಸೂರ್ಯ ಫೌಂಡೇಶನ್ ರಾಜ್ಯ ಸಂಯೋಜಕ ಗುರುನಾಥ ರಾಜಗೀರಾ ಹೇಳಿದರು. ಭಾಲ್ಕಿ ತಾಲ್ಲೂಕಿನ ಧನ್ನೂರ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಸ್ವಾಮಿ ವಿವೇಕಾನಂದ ಅವರ ಜನ್ಮದಿನದ ನಿಮಿತ್ತ ಸೂರ್ಯ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ ಕ್ರೀಡಾಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕ್ರೀಡಾ ಸಾಧನೆಗೆ ನಿರಂತರ ಪ್ರಯತ್ನ ಕಠಿಣ ಪರಿಶ್ರಮ ಅಗತ್ಯ ಉತ್ತಮ ಆಹಾರ ಮತ್ತು ದೈಹಿಕ ಚಟುವಟಿಕೆಗಳು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಅವಶ್ಯಕವಾಗಿವೆ ಯುವ ಜನತೆ ಆರೋಗ್ಯವಂತರಾಗಿದ್ದರೆ ನಮ್ಮ ದೇಶ ಹಾಗೂ ಮುಂದಿನ ಪೀಳಿಗೆ ಆರೋಗ್ಯಯುತವಾಗಿರುತ್ತದೆ ಎಂದರು. ಈ ದಿಶೆಯಲ್ಲಿ ಸೂರ್ಯ ಫೌಂಡೇಶನ್ ಸಂಸ್ಥಾಪಕರಾದ ಪದ್ಮಶ್ರೀ ಜಯಪ್ರಕಾಶ್ ಅಗ್ರವಾಲ್ ಅವರ ಮಾರ್ಗದರ್ಶನದಲ್ಲಿ ದೇಶಾದ್ಯಂತ ಹಾಗೂ ಫೌಂಡೇಶನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಅನಂತ ಬಿರಾದಾರ ಅವರ ಮಾರ್ಗದರ್ಶನದಲ್ಲಿ ಬೀದರ ಜಿಲ್ಲೆಯಲ್ಲಿ ಸಾಮಾಜಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಲಿವೆ ಎಂದು ತಿಳಿಸಿದರು.
ಕಬ್ಬಡ್ಡಿ, ವಾಲಿವಾಲ್, ರನ್ನಿಂಗ್, ಹಗ್ಗ ಜಗ್ಗಾಟ, ಪ್ರಬಂಧ, ರಂಗೋಲಿ ಸ್ಪರ್ದೆಗಳಲ್ಲಿ ಧನ್ನುರಾ, ಬಸವನಗರ, ದಾದೋಡಿ ತಾಂಡಾ ಸೇರಿದಂತೆ ಇತರೆ ಗ್ರಾಮಗಳ ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಮುಖರಾದ ಸಿದ್ದು ಕಾಡೊದೆ, ರಮೇಶ ಅರಾಳೆ, ಸಂಗಮೇಶ ದಾನಿ,ಸಂಗಮೇಶ ಬಿರಾದಾರ ಸೇರಿದಂತೆ ಇತರರಿದ್ದರು.
ವರದಿ : ಸಂತೋಷ ಬಿಜಿ ಪಾಟೀಲ




