Ad imageAd image

ಪೂಜ್ಯರುಗಳ ನೇತೃತ್ವದಲ್ಲಿ ವಿಶೇಷವಾಗಿ ನಡೆದ ಎಸ್ ಆರ್ ಕಾಶಪ್ಪನವರ್ ಪುಣ್ಯಸ್ಮರಣೆ ಸಮಾರಂಭ.

Bharath Vaibhav
ಪೂಜ್ಯರುಗಳ ನೇತೃತ್ವದಲ್ಲಿ ವಿಶೇಷವಾಗಿ ನಡೆದ ಎಸ್ ಆರ್ ಕಾಶಪ್ಪನವರ್ ಪುಣ್ಯಸ್ಮರಣೆ ಸಮಾರಂಭ.
WhatsApp Group Join Now
Telegram Group Join Now

ಇಳಕಲ್ :-ಜನಾನುರಾಗಿ,ಮುತ್ಸದ್ಧಿನಾಯಕ,ಮಾಜಿ ಸಚಿವರಾದ ಲಿಂ.ಎಸ್.ಆರ್.
ಕಾಶಪ್ಪನವರ 22 ನೇ ಪುಣ್ಯ ಸ್ಮರಣೆಯ ನಿಮಿತ್ಯ ವಿಜಯ ಮಹಾಂತೇಶ ಅನುಭವ ಮಂಟಪದಲ್ಲಿ ಎಸ್ ಆರ್ ಕಾಶಪ್ಪನವರ್ 22 ನೇ ಪುಣ್ಯಸ್ಮರಣೆ ಸಮಾರಂಭ ವಿಶೇಷವಾಗಿ ನಡೆಯಿತು. ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾನ್ವಿತ ಪ್ರತಿಭಾ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಮಾರಂಭವನ್ನು ಇಲ್ಕಲ್ ನ ಗುರುಮಂತ ಸ್ವಾಮೀಜಿ, ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿ, ಡಾಕ್ಟರ್ ಬಸವಲಿಂಗ ಮಹಾ ಸ್ವಾಮೀಜಿ ಶಾಸಕ ವಿಜಯಾನಂದ ಕಾಶಪ್ಪನವರ್, ಗೌರಮ್ಮ ಕಾಶಪ್ಪನವರ್ , ವೀಣಾ ಕಾಶಪ್ಪನವರ್ ಹಾಗೂ ವೇದಿಕೆ ಮೇಲಿರುವ ಎಲ್ಲಾ ಮುಖಂಡರುಗಳು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಹುನಗುಂದ ಮತಕ್ಷೇತ್ರದ ಎಲ್ಲಾ ಜನರಿಗೆ ಎಸ್ ಆರ್ ಕೆ ಪ್ರತಿಷ್ಠಾನದ ವತಿಯಿಂದ ವರ್ಷದದ್ದಕ್ಕೂ ಅನೇಕ ಚಟುವಟಿಕೆಗಳನ್ನ ಹಮ್ಮಿಕೊಂಡು, ಸಾಮಾಜಿಕ ಆರ್ಥಿಕ ಶೈಕ್ಷಣಿಕ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಇದೇ ರೀತಿ ನಿಮ್ಮ ಸೇವೆ ಮಾಡಲು ನಿಮ್ಮ ಸಹಕಾರ ನನಗೆ ಸದಾ ಇರಲಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರುಗಳು ನಗರಸಭೆಯ ಸದಸ್ಯರುಗಳು, ವಿವಿಧ ಪದಾಧಿಕಾರಿಗಳು, ಕಾಂಗ್ರೆಸ್ ಪಕ್ಷದ ಎಲ್ಲಾ ಅಭಿಮಾನಿಗಳು ಕಾರ್ಯಕರ್ತರು ಹಾಗೂ ಮತಕ್ಷೇತ್ರದ ವಿವಿಧ ಶಾಲೆಯ ವಿದ್ಯಾರ್ಥಿಗಳು ಪಾಲಕರು ಉಪಸ್ಥಿತರಿದ್ದರು.

ವರದಿ :-ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!