Ad imageAd image

ಶ್ರೀ ದತ್ತಾತ್ರೇಯ 12ನೇ ವರ್ಷದ ಜಯಂತಿಯ ಕಾರ್ಯಕ್ರಮ

Bharath Vaibhav
ಶ್ರೀ ದತ್ತಾತ್ರೇಯ 12ನೇ ವರ್ಷದ ಜಯಂತಿಯ ಕಾರ್ಯಕ್ರಮ
WhatsApp Group Join Now
Telegram Group Join Now

ಹುಬ್ಬಳ್ಳಿ: ಶ್ರೀ ಔದುಂಬರ ದತ್ತಪಾದುಕ ಮಂದಿರ ಮಂಜುನಾಥ್ ನಗರ ಗೋಕುಲ್ ರೋಡ್ ಹುಬ್ಬಳ್ಳಿ.02/12/205 ರಿಂದ 05/12/2025 ಗುರುವಾರ ದವರಿಗೆ ಶ್ರೀ ದತ್ತಾತ್ರೇಯ 12ನೇ ವರ್ಷದ ಜಯಂತಿಯ ಕಾರ್ಯಕ್ರಮ ವಿದ್ಯುಕ್ತವಾಗಿ ಜರುಗುವವು.
ಕಾರ್ಯಕ್ರಮಗಳ ವಿವರ.02/12/2025. ಬೆಳಗ್ಗೆ 5:00 ರಿಂದ ಕಾಕಡಾರತಿ ಹಾಗೂ ಅಭಿಷೇಕ ಹಾಗೂ ಗುರು ಚರಿತ್ರ ಪಾರಾಯಣ ಗಣ ಹೋಮ , ಸಂಗೀತ ಕಾರ್ಯಕ್ರಮ ಮಹಿಳಾ ಮಂಡಲದಿಂದ ಭಜನಾ ಕಾರ್ಯಕ್ರಮ ಮತ್ತು ಮಂಗಳಾರತಿ.
03/12/2025. ಬೆಳಗ್ಗೆ 5:00 ಗಂಟೆಯಿಂದ ಅಭಿಷೇಕ. ಶ್ರೀ ಗುರು ಚರಿತ್ರೆ ಪಾರಾಯಣ ಹಾಗೂ ದತ್ತಯಾಗ ಭರತನಾಟ್ಯ ಕಾರ್ಯಕ್ರಮ ನೆರವೇರುವುದು. 04/12/2025. ರಂದು ಮುಂಜಾನೆ 05.00 ಗಂಟೆಯಿಂದ ಸತ್ಯನಾರಾಯಣ ಪೂಜೆ ಮತ್ತು ಅಭಿಷೇಕ ಕಾರ್ಯಕ್ರಮ ಜರುಗುವುದು. ಸಭಾ ಕಾರ್ಯಕ್ರಮ 12:೦೦ ಗಂಟೆಗೆ ಪ್ರಾರಂಭ ಮುಖ್ಯ ಅತಿಥಿಗಳು. ಅರವಿಂದ ಬೆಲ್ಲದ ಶಾಸಕರು ( ಹುಬ್ಬಳ್ಳಿ ಪಶ್ಚಿಮ) ಮಹೇಶ ಟೆಂಗಿನಕಾಯಿ ಶಾಸಕರು ಹುಬ್ಬಳ್ಳಿ ( ಗ್ರಾಮೀಣ) ಸತೀಶ್ ಹಾನಗಲ್ ಕಾರ್ಪೊರೇಟರ್
ಸಂದಿಲ್ ಕುಮಾರ್ ಕಾರ್ಪೊರೇಟರ್ ಕೃಷ್ಣ ಗಂಡಗಾಳೇಕರ, ಸಿ ಕೆ ಪೂಜಾರ, ವಾಯ. ವಾಯ .ಲದವಾ, ಲಕ್ಷ್ಮಣ ದೇಶಪಾಂಡೆ,
ಚಂದ್ರಕಾಂತ ಪಾಟೀಲ, ಪ್ರವೀಣ ಹಬೀಬ, ಶ್ರೀ ಶೇಷಾಚಲ ಶರ್ಮಾ ಮಾಗಣಗೇರಿ ,ಉಪಸ್ಥಿತಿ ಇರುವರು.
05/12/2025. ರಂದು ಅಭಿಷೇಕ ಗುರು ಚರಿತ್ರೆ ಪಾರಾಯಣ ರುದ್ರಾಭಿಷೇಕ ತದನಂತರ ಗುರುಗಳ ಪಾದಪೂಜೆ ಅನ್ನ ಸಂತರ್ಪಣೆ ಮಹಾಪ್ರಸಾದ ಜರುಗುವುದು. ಈ ಧಾರ್ಮಿಕ ಕಾರ್ಯಕ್ರಮಕ್ಕೆ ಮಂಜುನಾಥ ನಗರ ಎರಡನೇ ಹಂತ ಹಾಗೂ ಸುತ್ತಮುತ್ತಲಿನ ಬಡಾವಣೆಗಳ ಸದ್ಭಕ್ತರು ಭಾಗವಹಿಸಿ ಶ್ರೀ ದತ್ತಾತ್ರೇಯ ಸ್ವಾಮಿಗಳ ಆಶೀರ್ವಾದಕ್ಕೆ ಪಾತ್ರರಾಗಬೇಕಾಗಿ ವಿನಂತಿ.
ವರದಿ :ಗುರುರಾಜ ಹಂಚಾಟೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!