Ad imageAd image

ಶ್ರೀ ಗುರು ಆರೂಢರ 117ನೇ ಜಯಂತೋತ್ಸವ

Bharath Vaibhav
ಶ್ರೀ ಗುರು ಆರೂಢರ 117ನೇ ಜಯಂತೋತ್ಸವ
WhatsApp Group Join Now
Telegram Group Join Now

ಬಸವನಬಾಗೇವಾಡಿ: ತಾಲ್ಲೂಕಿನ ಸುಕ್ಷೇತ್ರ ಆರೂಢನಂದಿಹಾಳದ ಶ್ರೀ ಗುರು ಆರೂಢರ 117 ನೇ ಜಯಂತೋತ್ಸವ ಅಂಗವಾಗಿ ತೊಟ್ಟಿಲೋತ್ಸವ ಬುಧುವಾರ ಸಂಭ್ರಮದಿಂದ ಜರುಗಿತು. ಆರೂಢರ ಮಂಟಪಕ್ಕೆ ಹೂವಿನ ಅಲಂಕಾರ, ಅಭಿಷೇಕ ಹಾಗೂ ಪೂಜೆ ಸಲ್ಲಿಸಲಾಯಿತು. ನಂತರ ಹೂಗಳಿಂದ ಅಲಂಕರಿಸಿದ ತೊಟ್ಟಿಲಲ್ಲಿ ಆರೂಢರ ಮೂರ್ತಿ ಪ್ರತಿಷ್ಠಾಪನೆ ಮಾಡಿ ತೊಟ್ಟಿಲೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಿ ಕೊಟ್ಟರು.ಅಕ್ಕನ ಬಳಗದ ಸದಸ್ಯರು ಜೋಗುಳ ಪದ ಹಾಡಿ ಸಂಭ್ರಮಿಸಿದರು. ನಂತರ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಶ್ರೀ ಮಠದ ಅಧ್ಯಕ್ಷ ಶ್ರೀಶೈಲ ಕನ್ನೂರ ಮಾತನಾಡಿ, 1908 ರಲ್ಲಿ ಈ ಲೋಕಕ್ಕೆ ಆರೂಢರು ಲೋಕ ಉದ್ದಾರಕ್ಕೆ ಈ ಪುಟ್ಟ ಹಳ್ಳಿಯಲ್ಲಿ ಉದಯಿಸಿದರು. ಶರೀರ ರಕ್ಷಣೆಗಿಂತ ನಿಜವಾದ ಜ್ಞಾನ ಮುಖ್ಯ. ಶರೀರ ಹಾಗೂ ಅಧಿಕಾರ ನಂಬಿ ಕೆಡಬೇಡಿ. ಆರೂಢರ ಶಕ್ತಿ ಅಪಾರವಾಗಿದೆ. ಬೇಡಿದವರ ಕಾಮಧೇನು ಆಗಿದ್ದಾರೆ. ವರುಣ ದೇವ, ಉದ್ದಾದಕ ಮುನಿ, ಅಷ್ಟಾವಕ್ರ ಸೇರಿದಂತೆ ಅನೇಕ ಶರಣರ ಕತೆಗಳ ಮೂಲಕ ಆರೂಢರನ್ನು ಪರಿಚಯಿಸಿದರು.

ಆರೂಢರ ಗ್ರಂಥ ಓದಿ ಪವಿತ್ರರಾಗಿರಿ. ಗರ್ಭಿಣಿಯರು ಇಂತಹ ಶರಣರ ಜೀವನವನ್ನು ಪಠಿಸಿದ್ದಲ್ಲಿ ಉತ್ತಮ ಸಂಸ್ಕಾರಯುತ ಮಕ್ಕಳು ಜನಿಸಲು ಸಾಧ್ಯ ಎಂದರು. ಈ ಸಂದರ್ಭದಲ್ಲಿ ಬಮ್ಮಯ್ಯ ಹಿರೇಮಠ, ಶ್ರೀಶೈಲ ಕನ್ನೂರ, ಗುರುನಾಥ ಸಜ್ಜನ, ಬಸಯ್ಯ ಹಿರೇಮಠ, ನಿಂಗಪ್ಪ ಮದರಿ, ರಾಚಪ್ಪ ಕನ್ನೂರ, ಬಸಣ್ಣ ಕನ್ನೂರ, ಶಾಂತಪ್ಪ ಕನ್ನೂರ, ಬಸಲಿಂಗಮ್ಮ,,ಸಂಗಮ್ಮ, ಈರಮ್ಮ ಅಂಗಡಿ,ಮೈತ್ರಾ ಕನ್ನೂರ, ಸಚಿನ್, ವನಜಾಕ್ಸಿ,ಸೌಜನ್ಯ, ಶ್ರುತಿ ಸೇರಿದಂತೆ ಅನೇಕ ಕಡೆಗಳಿಂದ ಆಗಮಿಸಿದ್ದ ಭಕ್ತರು ಹಾಗೂ ಶಿಷ್ಯ ವರ್ಗದವರು ಉಪಸ್ಥಿತರಿದ್ದರು.

ವರದಿ: ಗುರುರಾಜ್. ಬ. ಕನ್ನೂರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!