ಚೇಳೂರು:- ತಾಲೂಕಿನ ಚಾಕವೇಲು ಪಟ್ಟಣದಲ್ಲಿ ನೆಲೆಸಿರುವ ಶ್ರೀ ಕೋದಂಡ ರಾಮಸ್ವಾಮಿಯ,ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಮೂಹದಲ್ಲಿ ವಿಜೃಂಭಣೆಯಿಂದ ನಡೆಯಿತು,
ಪ್ರತೀ ವರ್ಷ ಶ್ರೀರಾಮ ನವಮಿ ಪ್ರಯುಕ್ತ ನಡೆಸುವ ಈ ರಥೋತ್ಸವ ಪರಂಪರಿವಾಗಿ ನಡೆಸಿಕೊಂಡು ಬರಲಾಗುತ್ತಿದೆ,ಈ ರಥೋತ್ಸವ ಹಲವು ವಿಶೇಷತೆಗಳು ಕೂಡಿರುತ್ತದೆ,
ಸ್ವಾಮಿಯ ವಿಗ್ರಹಕ್ಕೆ ಮೂರು ದಿನಗಳ ಕಲ್ಯಾನೋತ್ಸವ ಸೇರಿದಂತೆ ನಾನಾ ರೀತಿಯ ಪೂಜೆ ಪುನಸ್ಕಾರಗಳು ಭಕ್ತಿಯಿಂದ ಅರ್ಚಕರು ನೆರವೇರಿಸಲಾಗುತ್ತದೆ,
ಮೊದಲ ದಿನ ಶೆಟ್ರ ವಂಶಸ್ತರಿಂದ ಸ್ವಾಮಿಗೆ ಕಲ್ಯಾನೋತ್ಸವ ಸೇರಿ ವಿಶೇಷ ಪೂಜೆಗಳು ನೆರವೇರಿಸಿದರೆ,ಎರಡನೇ ದಿನ ಹಾಗು ರಾಥೋತ್ಸವ ದಿನ ರೆಡ್ಡಿ ವಂಶಸ್ತ ಮಹಿಳೆಯರಿಂದ ಕೂಣಕುಂಭ ಹೊರುವ ಮೂಲಕ ಸ್ವಾಮಿಗೆ ಅರ್ಪಣೆ ಮಾಡಲಾಗುತ್ತದೆ,
ಬಳಿಕ ಸ್ವಾಮಿಯ ರಥೋತ್ಸವವನ್ನು ವಾಲ್ಮೀಕಿ ವಂಶಸ್ಥರು ರಥೋತ್ಸವಕ್ಕೆ ಚಾಲನೆ ಕೊಟ್ಟ ಬಳಿಕ ಎಲ್ಲಾ ಸಮುದಾಯದ ಭಕ್ತರಿಂದ ರಥವನ್ನು ಎಳೆಯುವ ಮೂಲಕ ರಥೋತ್ಸವಕ್ಕೆ ತೆರೆ ಎಳೆಯಲಾಗುತ್ತದೆ,
ಈ ಮೂಲಕ ಚಾಕವೇಲು ಪಟ್ಟಣದಲ್ಲಿ ನಡೆಯುವ ಶ್ರೀ ಕೋದಂಡ ರಾಮಸ್ವಾಮಿ ಬ್ರಹ್ಮ ರಥೋತ್ಸವಕ್ಕೆ ಸಾವಿರಾರು ಭಕ್ತರು ಪಾಲ್ಗೊಂಡು ಸ್ವಾಮಿ ಕೃಪೆಗೆ ಪಾತ್ರರಾಗಿದ್ದಾರೆ,
ವರದಿ : ಯಾರಬ್. ಎಂ.