Ad imageAd image

ಬಡಜನರಿಗೆ ವರದಾನವಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ

Bharath Vaibhav
ಬಡಜನರಿಗೆ ವರದಾನವಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ
WhatsApp Group Join Now
Telegram Group Join Now

 ಅಥಣಿ : ಹಳ್ಳಿಗಳಲ್ಲಿ ಉಚಿತವಾಗಿ CSC ಸೇವೆ ನೀಡುವ ಮೂಲಕ ಬಡಜನರಿಗೆ ವರದಾನವಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹತ್ಕಾರ್ಯ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ ಕಾಗವಾಡ ಹಾಗೂ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸಂಬರಗಿ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರ ವ್ಯಾಪ್ತಿಯ ಜಂಬಗಿ ಗ್ರಾಮದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಕಾಗವಾಡ ಯೋಜನಾ ಕಚೇರಿಯ ಪರಿಚಯ ಹಾಗೂ ಸಂಘದ ಸಾಧನೆಯನ್ನು ತಿಳಿಸುದರ ಜೊತೆಗೆ ಸಾಮಾಜಿಕ ಆರ್ಥಿಕ, ಶಿಸ್ತು, ಗುಣಮಟ್ಟದ ನಿರ್ವಹಣೆ, ಹಾಗೂ ಸಾಮಾಜಿಕ ಕಳಕಳಿ, ಮಹಿಳೆಯರು ಸ್ವಾವಲಂಬಿ ಜೀವನ ನಡೆಸುವಲ್ಲಿ ಸಂಘದ ಪಾತ್ರದ ಕುರಿತು ತಿಳಿಸಲಾಯಿತು.

ಈ ಸಂದರ್ಭದಲ್ಲಿ
ಗ್ರಾಮ ಪಂಚಾಯಿತಿ ಅಧ್ಯಕ್ಷರು ರವಿ ವಾಘಮೋರೆ
ಸಂಜೀವ ಮರಾಠಿ ತಾಲೂಕು ಯೋಜನಾಧಿಕಾರಿಗಳು ಕಾಗವಾಡ,
ವಲಯದ ಒಕ್ಕೂಟದ ಮತ್ತು ಮದಭಾವಿ ವಲಯ ಮೇಲ್ವಿಚಾರಕರು, ಸಂಬರಗಿ ವಲಯ ಸೇವಾಪ್ರತಿನಿಧಿ ಟೀಮ್, ವಲಯ CSC ಸೇವಾದಾರರು ಉಪಸ್ಥಿತರಿದ್ದರು.

ವರದಿ ಸುಕುಮಾರ ಮಾದರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!