Ad imageAd image

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ)ಭಾಲ್ಕಿ ವತಿಯಿಂದ,ತಾಲೂಕು ಮಟ್ಟದ ಒಕ್ಕೂಟದ ಪದಾಧಿಕಾರಗಳ ಸಮಾವೇಶ

Bharath Vaibhav
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ)ಭಾಲ್ಕಿ ವತಿಯಿಂದ,ತಾಲೂಕು ಮಟ್ಟದ ಒಕ್ಕೂಟದ ಪದಾಧಿಕಾರಗಳ ಸಮಾವೇಶ
WhatsApp Group Join Now
Telegram Group Join Now

ಭಾಲ್ಕಿ : -ಪಟ್ಟಣದ ಶ್ರೀ ರಾಮ ಮಂದಿರ ಕಲ್ಯಾಣ ಮಂಟಪದಲ್ಲಿ ತಾಲೂಕು ಮಟ್ಟದ ಒಕ್ಕೂಟದ ಪದಾಧಿಕಾರಗಳ ಸಮಾವೇಶ
ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷರಾದ ಶಿವಕುಮಾರ ಲೋಖಂಡೆ, ಕಲಬುರ್ಗಿ ಹಾಲು ಮಂಡಳಿಯ ನಿರ್ದೇಶಕರಾದ ನಾಗರಾಜ, ಬ್ಯಾಂಕ್ ಆಫ್ ಬರೋಡ ಶಾಖಾ ಪ್ರಭಂದಕರಾದ ಅಮರ , ಜಿಲ್ಲಾ ಜನ ಜಾಗೃತಿ ಮಾಧ್ಯಮ ಸಲಹೆಗಾರ ಸಂತೋಷ್ ಬಿಜಿ ಪಾಟೀಲ ಹಾಗೂ ಸಂಸ್ಥೆಯ ಜಿಲ್ಲಾ ನಿರ್ದೇಶಕ ಪ್ರವೀಣಕುಮಾರ ಅವರು ಸೇರಿ ಕಾರ್ಯಕ್ರಮ ಉದ್ಘಾಟಿಸಿದರು.

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ ಲೋಖಂಡೆ ಸಂಸ್ಥೆಯು ಸರ್ಕಾರ ಮಾಡುವ ಕಾರ್ಯಕ್ರಮಗಳಿಗಿಂತ ಹೆಚ್ಚಿನ ಸೇವಾ ಕಾರ್ಯ ನಿರ್ವಹಿಸಿ ಬಡ ಹಾಗೂ ನಿರ್ಗತಿಕರ ಜೀವನಕ್ಕೆ ಆಶ್ರಯದಾತವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಬ್ಯಾಂಕ್ ಆಫ್ ಬರೊಡಾ ಶಾಖಾ ಪ್ರಭಂದಕರು ಮಾತಾಡಿ
ಈಗಿನ ಸಮಯದಲ್ಲಿ ಒಂದು ಸಣ್ಣ ಸಾಲ ಕೊಡಬೇಕು ಅಂದ್ರೆ ಹತ್ತಾರು ಕಾಗದ ಪತ್ರ ಬೇಕಾಗುತ್ತೆ ಆದರೆ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ ಸಂಸ್ಥೆಯ,ಗ್ಯಾರಂಟಿಯಾಗಿ ಇವತ್ತು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಲ ಸಿಗುವಂತಾಗಿದೆ, ಅವಶ್ಯಕತೆ ಇದ್ದವರಿಗೆ ಸಹಾಯ ಆಗಬೇಕು ಅನ್ನೋ ದೃಷ್ಟಿಯಿಂದ ಸಂಸ್ಥೆ ಮುಖಾಂತರ ಸಾಲ ಕೊಡ್ತಾ ಇರೋದು ಇದೊಂದು ಕಲ್ಪ ವೃಕ್ಷವಾಗಿದೆ ಎಂದು ಹೆಮ್ಮೆ ಯಿಂದ ಹೇಳಿದರು.

ಸಂಸ್ಥೆಯ ಜಿಲ್ಲಾ ಜನ ಜಾಗೃತಿ ಮಾಧ್ಯಮ ಸಲಹೆಗಾರರಾದ ಸಂತೋಷ ಬಿಜಿ ಪಾಟೀಲ ಮಾತನಾಡಿ ಮಹಿಳಾ ಸಬಲೀಕರಣ, ಗ್ರಾಮೀಣ ಭಾಗದ ಅಭ್ಯುದಯಕ್ಕೇ ಸಂಸ್ಥೆ ಮಾಡುತ್ತಿರುವ ಕಾರ್ಯ ಅಸಮಾನ್ಯವಾದದ್ದು,
ಪೂಜ್ಯ ಖಾವಂದರ ರಾಜ್ಯಸಭಾ ಸದಸ್ಯರ ಅನುದಾನ ಮೊದಲನೇ ಹಂತದ 2.5 ಕೋಟಿ ಹಾಗೂ ಎರಡೇ ಹಂತದ 2.5 ಕೋಟಿ ರೂಪಾಯಿ ಅನುದಾನವನ್ನು ಬೀದರ ಜಿಲ್ಲೆಯ ಕ್ಷೀರ ಕ್ರಾಂತಿಗೆ ಮೀಸಲು ಇಟ್ಟು ಇವತ್ತು ಅವನತಿಯ ಅಂಚಿನಲ್ಲಿದ್ದ ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ಕಲಬುರ್ಗಿ ವಿಭಾಗೀಯ ಸಂಸ್ಥೆ ಇವತ್ತು
6 ಸಾವಿರ ಲೀಟರ್ ಹಾಲಿನಿಂದ 58 ಸಾವಿರ ಲೀಟರ್ ಪ್ರತಿ ದಿನಕ್ಕೆ ಹೋಗ್ತಾ ಇದೇ ಇದು ಹೆಮ್ಮೆಯ ಸಂಗತಿ ನಿರ್ಗತಿಕರಿಗೆ ಮಾಶಾಸನ, ವಿಕಲ ಚೇತನರಿಗೆ ವೀಲ್ ಚೇರ್, ವಾಟರ್ ಬೆಡ್, ವೃದ್ಯಾಪ್ಯ ವೇತನ,

ವಾತ್ಸಲ್ಯ ಮನೆ ಕಟ್ಟಿಕೊಡೋದು, ತಾಲೂಕಿನ 4 ಕೆರೆಗಳನ್ನು ಪುನಃಚೇತನ ಗೊಳಿಸಿದ್ದು, 135 ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ, ಹೀಗೆ ಸಾಮಾಜಿಕ ಕಾರ್ಯ ಮಾಡ್ತಾ ಇರೋದು ಬಹಳ ಹೆಮ್ಮೆಯ ವಿಷಯ, ಸಂಸ್ಥೆಯಿಂದ ಸಹಾಯ ಪಡೆದ ತಾವೆಲ್ಲರೂ ಸಂಸ್ಥೆಯ ಬೆನ್ನಿಗೆ ನಿಲ್ಲಬೇಕು ಅವರು ಮಾಡುತ್ತಿರುವ ಮಹತ್ವದ ಕಾರ್ಯಕ್ಕೆ ಶಕ್ತಿ ತುಂಬಬೇಕು ಎಂದು ತಿಳಿಸಿದರು.

ಸಂಸ್ಥೆಯ ಜಿಲ್ಲಾ ನಿರ್ದೇಶಕ ಪ್ರವೀಣ ಕುಮಾರ್ ಅವರು ಒಕ್ಕೂಟದ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ ಸಂಸ್ಥೆಯು ಬ್ಯಾಂಕ್ ಮತ್ತು ಸ್ವ ಸಹಾಯ ಸಂಘಗಳ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತಿದ್ದು ಅತೀ ಕಡಿಮೆ ಬಡ್ಡಿ ದರದಲ್ಲಿ ಸಂಘಗಳಿಗೆ ಬ್ಯಾಂಕಿನಿಂದ ಆರ್ಥಿಕ ಸೌಲಭ್ಯ ದೊರೆಯುವಂತೆ ಮಾಡಿದೆ, ಸಂಸ್ಥೆಯ ವ್ಯವಹಾರದ ಪಾರದರ್ಶಕತೆಯ ಬಗ್ಗೆ ಸದಸ್ಯರು ಗಮನವಹಿಸುವುದು ಅಲ್ಲದೆ ಸಂಸ್ಥೆಯು ಬಿ. ಸಿ ಟ್ರಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಸಮುದಾಯಕ್ಕೆ ಹಲವಾರು ಉಪಯುಕ್ತ ಕಾರ್ಯಕ್ರಮಗಳನ್ನು ಪೂಜ್ಯರು ನೀಡಿರುತ್ತಾರೆ ಎಂದು ತಿಳಿಸಿದರು.

ತದನಂತರ ಯೋಜನಾಧಿಕಾರಿಗಳಾದ ಸಂತೋಷ ಅವರು ಮಾತನಾಡಿ ಸಮುದಾಯದ ಅಭಿವೃದ್ಧಿಗಾಗಿ ಜ್ಞಾನದೀಪ ಶಾಲಾ ಶಿಕ್ಷಣ ಕಾರ್ಯಕ್ರಮ ಶಾಲೆಗಳಿಗೆ ಪೀಟೋಪಕರಣ ಒದಗಣೆ ಹಿಂದೂ ರುದ್ರಭೂಮಿ ಅಭಿವೃದ್ಧಿ ಕಾರ್ಯಕ್ರಮ ವೃತ್ತಿಪರ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ವಿಕಲಚೇತನರಿಗೆ ಆಶಕ್ತರಿಗೆ ಜನಮಂಗಳ ಕಾರ್ಯಕ್ರಮದಡಿಯಲ್ಲಿ ವಾಕರ್ ವಾಟರ್ ಬೆಡ್ ವೀಲ್ ಚೇರ್ ಉಪಕರಣ ಒದಗಿಸಲಾಗುತ್ತಿದೆ ನಿರ್ಗತಿಕರಿಗೆ ಮಾಶಾಸನ ನಮ್ಮೂರು ನಮ್ಮ ಕೆರೆ ಇನ್ನೂ ಮುಂತಾದ ಸಮುದಾಯಕ್ಕೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಯೋಜನೆಯಲ್ಲಿ ಅನುಷ್ಟಾನ ಮಾಡಲಾಗುತ್ತಿದೆ ಎಂದು ಹೇಳಿದರು ಕಾರ್ಯಕ್ರಮದಲ್ಲಿ ಯೋಜನೆಯ ಸಿಬ್ಬಂದಿಗಳು, 5 ವಲಯದ 38 ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು, ಶಿವಾನಂದ ಅವರು ಸ್ವಾಗತಿಸಿದರು ಸುರೇಶ ಅವರು ವಂದಿಸಿದರು ಲಾಯಪ್ಪ ಅವರು ನಿರೂಪಿಸಿದರು.

ವರದಿ:-ಸಂತೋಷ ಬಿಜಿ ಪಾಟೀಲ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!