ಅಮೇರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಸೇನಾ ಕಾರ‍್ಯಾಚರಣೆ (ಯುದ್ಧ) ಆರಂಭಿಸಿ ನಾಲ್ಕನೇ ವಾರಕ್ಕೆ ಕಾಲಿರಿಸಿದೆ.
ಯುದ್ಧದಿಂದಾಗಿ ಇರಾನ್‌ನ ಸಾವಿರಾರು ಜನರು ಅಸು ನೀಗಿದ್ದರೆ, ಅಮೇರಿಕ- ಇಸ್ರೆಲ್ ಕಡೆಯೂ ನೂರಾರು ಸಾವುಗಳು ಸಂಭವಿಸಿವೆ.
ಏತನ್ಮಧ್ಯೆ ಯುದ್ದದಿಂದ ಸಮಸ್ಯೆಗಳು ದಿನೇ ದಿನೇ ಉಲ್ಬಣವಾಗುತ್ತಲೇ ನಡೆದಿದೆ. ಜಗತಿನಾದ್ಯಂತ ಇಂಧನ ಕೊರತೆ, ಬೆಲೆ ಏರಿಕೆ ನಿರಂತರ ಬೆಳೆಯುತ್ತಲೇ ನಡೆದಿದೆ.
ಇದೀಗ ಶ್ರೀಲಂಕಾದಲ್ಲಿ ಪೆಟ್ರೋಲ್ ಬೆಲೆ ಶೇ.೨೫ ರಷ್ಟು ಹೆಚ್ಚಾಗಿದೆ. ವಿವಿಧ ರಾಷ್ಟçಗಳಲ್ಲಿಯೂ ಇಂಧನ ಕೊರತೆ ಹಾಗೂ ಬೆಲೆ ಏರಿಕೆ ನಿರಂತರವಾಗಿ ಏರುತ್ತಲೇ ಇದೆ.
ಪಶ್ಚಿಮ ಏಷ್ಯಾ ಬಿಕ್ಕಟ್ಟು: ಶ್ರೀಲಂಕಾದಲ್ಲಿ ಪೆಟ್ರೋಲ್ ಶೇ.೨೫ ರಷ್ಟು ಹೆಚ್ಚಳ




