ಲಿಂಗಸುಗೂರು : ಹಟ್ಟಿ ಚಿನ್ನದ ಗಣಿ ಪಟ್ಟಣದ ಆರಾಧ್ಯ ದೈವ ಪವಾಡ ಪುರುಷ ಶ್ರೀ ಲಿಂಗವಧೂತ ರಥೋತ್ಸವ ಅದ್ದೂರಿಯಾಗಿ ಜರುಗಿತು ಶಿವರಾತ್ರಿ ಅಮಾವಾಸ್ಯೆಯ ಮಾರನೇ ದಿನದಂದು ನಡೆಯುವ ರಥೋತ್ಸವ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ವಿಶೇಷ ಪೂಜೆ ಮಂಗಳಾರತಿ ಶ್ರೀ ಲಿಂಗ ವಧೂತರಿಗೆ ಅಭಿಷೇಕ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು ಸಂಜೆ ನಡೆದ ರಥೋತ್ಸವದಲ್ಲಿ ದೇವರ ಭೂಪೂರ ಗ್ರಾಮದ ಅಭಿನವ ಗಜದಂಡ ಶ್ರೀ ನೇತೃತ್ವದಲ್ಲಿ ರಥೋತ್ಸವ ನಡೆಯಿತು ರಥೋತ್ಸವದಲ್ಲಿ ಸಾವಿರಾರು ಭಕ್ತರು ಅವದೂತನ ಸನ್ನಿಧಿಯಲ್ಲಿ ಸೇರುವ ಮೂಲಕ ರಥೋತ್ಸವದಲ್ಲಿ ಪಾಲ್ಗೊಂಡು ದರ್ಶನ ಪಡೆದು ಪುನೀತರಾದರು ಈ ಸಂದರ್ಭದಲ್ಲಿ ಸಣ್ಣ ಗುಂಡಪ್ಪ ಗೌಡ ಗುರಿಕಾರ್ ನೇತೃತ್ವದಲ್ಲಿ ಬಸವರಾಜ ಗೌಡ ಗುರಿಕಾರ, ಆಂಜನೇಯ ಗೌಡ ಗುರಿಕಾರ್, ಕನಕರಾಜ ಗೌಡ ಗುರಿಕಾರ್, ಹಟ್ಟಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹೊಸಕೇರಪ್ಪ ಕೆ, ಪಟ್ಟಣ ಪಂಚಾಯತಿ ಅಧ್ಯಕ್ಷ ಎಂ ಡಿ ಸಂಧಾನಿ,ಏನ್ ಸ್ವಾಮಿ ನಾಯ್ಕೋಡಿ, ನಿಂಗಪ್ಪ ಮನಗೂಳಿ ಬಾಲಪ್ಪ ನಾಯಕ್, ಅಮ್ಜದ್ ಸೀಟ್, ಸೇಟ್ ಚನ್ನಪ್ಪ ಅರಿಕೇರಾ ಗುಂಡಪ್ಪ ಗೌಡ ಮಾಸ್ಟರ್, ರೆಡ್ಡಪ್ಪ ಬಿ ಆರ್ ಗುಂಡು, ಕನಕನ ಗೌಡ, ಗುಂಡಪ್ಪ ಗೌಡ ಕೋಟಾ, ರಮೇಶ್ ಹುಳಿಮೇಶ್ವರ, ಪರಮೇಶ್ ಯಾದವ್, ಶಿವು ಟಬಲಾಜಿ, ಯೋಗಪ್ಪ ದೊಡ್ಮನಿ, ಬಸವರಾಜ್, ಯಂಕೋಬ ಪವಡೆ, ಶ್ರೀನಿವಾಸ್ ಮಧುಶ್ರೀ ಸೇರಿದಂತೆ ಅನೇಕ ಧರ್ಮದ ಮುಖಂಡರು ಸಂಘ-ಸಂಸ್ಥೆಯವರು ಉಪಸ್ಥಿತರಿದ್ದರು
ವರದಿ : ಶ್ರೀನಿವಾಸ ಮಧುಶ್ರೀ




