ಚಾಮರಾಜನಗರ :ಜಿಲ್ಲೆಯ ಯಳಂದೂರು ತಾಲೂಕಿನ ಕಂದಹಳ್ಳಿ ಗ್ರಾಮದಲ್ಲಿ ಜಾತ್ರೆ ಮಹೋತ್ಸವ ಪ್ರತಿ ವರ್ಷದಂತೆ ಇಂದು ವಿಜೃಂಭಣೆಯಿಂದ ಜರುಗಿದೆ.
ಜಾತ್ರೆಯೂ ಬಣ್ಣ ಬಣ್ಣದ ದೀಪಾಲಂಕಾರ ಹಾಗೂ ದೇವಸ್ಥಾನವೂ ಬಗೆಬಗೆಯ ಹೂವಿನ ಅಲಂಕಾರ ದಿಂದ ಕೂಡಿದ್ದು ಭಕ್ತರ ಗಮನ ಸೆಳೆದಿದೆ.
ಅಷ್ಟೇ ಅಲ್ಲದೇ ವಿವಿಧ ಆಟಿಕೆಗಳು ಹಾಗೂ ಕಲಾವಿದರಾದ ಶಿವಕುಮಾರ ಸ್ವಾಮಿಗಳ ಕಥೆಯನ್ನು ಕೇಳಿ ಬಂದಂತಹ ಭಕ್ತರು ಕಣ್ತುಂಬಿಕೊಂಡಿದ್ದಾರೆ.
ಬೆಳಿಗ್ಗೆ 10:30 ರಿಂದ ಪ್ರಸಾದ ವಿನಿಯೋಗ ಪ್ರಾರಂಭವಾಗಿದ್ದು ವೀರಶೈವ ಬಸವ ಬಳಗ ಅಂಬಳೆ ಗ್ರಾಮದವರಿಂದ
ಪ್ರಸಾದ ಬಡಿಸುವ ಕಾರ್ಯ ನಡೆಯಿತು.

ಹೆಚ್ಚಿನ ಪ್ರಮಾಣದಲ್ಲಿ ಅಕ್ಕ ಪಕ್ಕದ ಹಳ್ಳಿಯಿಂದ ಬರುವ ಭಕ್ತರಿಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಲವಾರು ಪೋಲೀಸರನ್ನು ನಿಯೋಜನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಯಜಮಾನರುಗಳು ಹಾಗೂ ದೇವಸ್ಥಾನದ ಸದಸ್ಯರುಗಳು ಮಾತನಾಡಿ ಭಕ್ತಾದಿಗಳು ಹಾಗೂ ಗಣ್ಯರು ದೇವರ ದರ್ಶನಕ್ಕೆ ಆಗಮಿಸುತಿದ್ದು ಶ್ರೀ ಮಹದೇಶ್ವರ ದೇವಸ್ಥಾನವನ್ನು ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದರು.
ವರದಿ :ಸ್ವಾಮಿ ಬಳೇಪೇಟೆ




