ಬೆಳಗಾವಿ: ತಾಲೂಕಿನ ಮೋದಗಾ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ, ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ, ನಾಡಿನ ಸಮಸ್ತ ಜನತೆಗೆ ಒಳಿತಾಗಲಿ ಎಂದು ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸಂಜಯ ಪಾಟೀಲ, ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಸುಭಾಷ ಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷರಾದ ಯುವರಾಜ ಜಾಧವ್, ಪ್ರಮುಖರಾದ ಧನಂಜಯ ಜಾಧವ್, ಚೇತನ ಅಂಗಡಿ, ಮನೋಜ ಪಾಟೀಲ, ಪ್ರಕಾಶ ದಾನೋಜಿ, ಓಮಪ್ಪ ಅಷ್ಟೇಕರ, ಬಸವಣೆಪ್ಪ ಮುಗಳಿ, ರಾಹುಲ್ ಪಾಟೀಲ, ಯಲ್ಲಪ್ಪ ಅಷ್ಟೇಕರ, ಮಂಜುನಾಥ ಪಾಟೀಲ, ಸಾಗರ ಹಣಬರ, ಶ್ರೀಧರ ಚೌಗುಲಾ, ಅಪ್ಪಯ್ಯ ಪಾಟೀಲ, ದೇವಸ್ಥಾನದ ಕಮೀಟಿ ಸದಸ್ಯರು, ಕಾರ್ಯಕರ್ತರು ಹಾಗೂ ಮೋದಗಾ ಗ್ರಾಮದ ಗ್ರಾಮಸ್ಥರು ಪಾಲ್ಗೊಂಡಿದ್ದರು.