ಕಂದಗಲ್ಲ : ಆತ್ಮ ಪ್ರತ್ಯಯದ ಮೂಲಕ ಬೆಳಕಾಗಿ, ತಾವರೆಯ ಎಲೆಯ ಮೇಲಿನ ನಿರಿನಂತೆ ಅಂಟಿಯು ಅಂಟದಂತೆ, ಸಾಮಾಜಿಕ ಪ್ರಭುತ್ವ ರಾಜ ಪ್ರಭುತ್ವ ದಿಕ್ಕರಿಸಿ ಲಿಂಗಾಭಾವವನ್ನು ಬಳಸಿಕೊಂಡಿರುವ ಮಾತೆ ಅಕ್ಕಮಹಾದೇವಿ ವಚನ ಸಾಹಿತ್ಯಕಾಶದ ನಕ್ಷತ್ರ ಎಂದು ಇಳಕಲ್ಲದ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಮಂಜುಳಾಪ್ರಭು ಬನ್ನಿಗೋಳಮಠ ರವರು ಗ್ರಾಮದ ಸುವರ್ಣಗಿರಿ ಶ್ರೀ ರುದ್ರುಸ್ವಾಮಿ ಮಠದಲ್ಲಿ ನೆಡೆದ 49 ನೆ ಮಾಸಿಕ ಶಿವಾನುಭವ
ಕಾರ್ಯಕ್ರಮದಲ್ಲಿ ಅನುಭಾವದ ಮಾತುಗಳನ್ನಾಡಿದರು.
ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಕಂದಗಲ್ಲ ಸುವರ್ಣಗಿರಿ ರುದ್ರುಸ್ವಾಮಿ ಮಠದ ಡಾ ಮ ನಿ ಪ್ರ ಚನ್ನಮಲ್ಲ ಮಹಾಹಾಸ್ವಾಮಿಗಳು ವಚನಗಳು ಸಾಹಿತ್ಯದ ಮೂಲಕ ನಮ್ಮ ಜೀವನಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದು ವಚನ ಸಾಹಿತ್ಯ ದಿಂದ ನಾವು ಸಾಕಷ್ಟು ತಿಳಿದುಕೊಳ್ಳಬಹುದು. ನಮ್ಮ ಸಂಪೂರ್ಣ ಜೀವನ ನೆಡೆಸುವಲ್ಲಿ ವಚನ ಗಳು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಆಶೀರ್ವಚನ ನೀಡಿದರು.
ಗ್ರಾಮ ಪ ಮಾಜಿ ಅಧ್ಯಕ್ಷರಾದ ಪಂಪಣ್ಣ ಸಜ್ಜನ ಮುಖ್ಯ ಅತಿಥಿ ಸ್ಥಾನ ಅಲಂಕರಿಸಿ ಆಗಮಿಸಿದ ಎಲ್ಲ ಭಕ್ತರಿಗೆ ಪ್ರಸಾದ ಸೇವೆ ಕಲ್ಪಿಸಿದರು.
ಕಾವ್ಯ ಗುರುವಿನಮಠ ಪ್ರಾರ್ಥಿಸಿದರು. ಕವಿತಾ ಹವಾಲ್ದಾರಾಮಠ ವಂದಿಸಿದರು. ಜಯಶ್ರೀ ಕಲಕಮ್ರಮಠ ನಿರೂಪಿಸಿದರು
ಕಲಾವಿದ ರಮೇಶ ದಾಸರ ವಚನ ಗೀತೆ ಹಾಡಿದರು ಕು ಭಾಗ್ಯಶ್ರೀ ಮಠ ಗ್ರಾಮದ ಇತಿಹಾಸ ತಿಳಿಸಿದರು ಕಾರ್ಯಕ್ರಮದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಕಂದಗಲ್ಲ ಮತ್ತು ಸುತ್ತಮುತ್ತಲಿನ ಗ್ರಾಮದ ಹಿರಿಯರು ಮಕ್ಕಳು ಭಾಗವಹಿಸಿದ್ದರು
ವರದಿ ದಾವಲ್ ಶೇಡಂ