Ad imageAd image

ನೂತನ ಜಿಲ್ಲೆಗೆ ಆಗ್ರಹಿಸಿ ಎಲ್ಲರೊಂದಿಗೆ ಚರ್ಚಿಸಿ ನಿರಂತರ ಹೋರಾಟ : ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಎಚ್ಚರಿಕೆ

Bharath Vaibhav
ನೂತನ ಜಿಲ್ಲೆಗೆ ಆಗ್ರಹಿಸಿ ಎಲ್ಲರೊಂದಿಗೆ ಚರ್ಚಿಸಿ ನಿರಂತರ ಹೋರಾಟ : ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಎಚ್ಚರಿಕೆ
WhatsApp Group Join Now
Telegram Group Join Now

ಗೋಕಾಕ:- ನ 12 : ಗೋಕಾಕ ನೂತನ ಜಿಲ್ಲೆಗೆ ಆಗ್ರಹಿಸಿ ಎಲ್ಲರೊಂದಿಗೆ ಚರ್ಚಿಸಿ ನಿರಂತರ ಹೋರಾಟ ಕೈಗೋಳ್ಳಲಾಗುವುದು ಎಂದು ಗೋಕಾಕ ಜಿಲ್ಲಾ ರಚನಾ ಹೋರಾಟ ಚಾಲನಾ ಸಮಿತಿಯ ಅಧ್ಯಕ್ಷ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.

ಮಂಗಳವಾರದಂದು ನಗರದಲ್ಲಿ ಜಿಲ್ಲಾ ರಚನಾ ಹೋರಾಟ ಚಾಲನಾ ಸಮಿತಿ, ವಕೀಲರ ಸಂಘ ಹಾಗೂ ನಗರದ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಗೋಕಾಕ ಜಿಲ್ಲಾ ಹೋರಾಟ ಇಂದು ನಿನ್ನೆಯದಲ್ಲ ಕಳೆದ 4 ದಶಕಗಳಿಂದ ಗೋಕಾಕ ಜಿಲ್ಲೆ ಮಾಡಲು ನಿರಂತರ ಹೋರಾಟಗಳನ್ನು ಮಾಡಿ ಸರಕಾರಕ್ಕೆ ಮನವಿ ಸಲ್ಲಿಸಿ ಮನವರಿಕೆ ಮಾಡಲಾಗಿದ್ದು, ಅದು ಈಡೇರಿಲ್ಲ ಮುಂಬರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಸರಕಾರದ ಮೇಲೆ ಒತ್ತಡ ಹಾಕಿ ಜಿಲ್ಲೆಯ ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತಗೆದುಕೊಂಡು ಗೋಕಾಕ ನೂತನ ಜಿಲ್ಲಾ ಕೇಂದ್ರವನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು.

ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಗೋಕಾಕ ಜಿಲ್ಲಾ ಹೋರಾಟಕ್ಕೆ ಜಾರಕಿಹೊಳಿ ಸಹೋದರರ ಸಂಪೂರ್ಣ ಬೆಂಬಲವಿದ್ದು, ಸದನ ಒಳಗೆ ಮತ್ತು ಹೋರಗೆ ಸಚಿವ ಸತೀಶ ಜಾರಕಿಹೊಳಿ, ಶಾಸಕರುಗಳಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಅವರು ಆಯಾ ಸರಕಾರಗಳ ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡುತ್ತಾ ಬಂದಿದ್ದಾರೆ ಮುಂದೆಯುವ ಸಹ ಸ್ಥಳಿಯವಾಗಿ ಕೈಗೋಳ್ಳುವ ಎಲ್ಲಾ ಹೋರಾಟಗಳಿಗೆ ಬೆಂಬಲ ನೀಡುವ ಜೊತೆಗೆ ಎಲ್ಲಾ ರೀತಿಯ ಸಹಾಯ, ಸಹಕಾರ ನೀಡಲಾಗುವುದು ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಡಾ: ಮಹಾಂತೇಶ ಕಡಾಡಿ ಮತನಾಡಿ ಬೆಂಗಳೂರು ಹೊರತುಪಡಿಸಿ ಬೆಳಗಾವಿ ರಾಜ್ಯದ ಅತಿದೊಡ್ಡ ಜಿಲ್ಲೆಯಾಗಿದ್ದು, ಅಭಿವೃದ್ಧಿ ಮತ್ತು ಜನಸಂಖ್ಯಾ ಆಧಾರದ ಮೇಲೆ ಅಖಂಡ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಿ ಗೋಕಾಕ ಹೊಸ ಜಿಲ್ಲೆ ಮಾಡಬೇಕು ಆಗ ಈ ಭಾಗದ ಅಭಿವೃದ್ಧಿ ಆಗಲು ಸಾಧ್ಯ. ಈ ವಿಚಾರವನ್ನು ಸರಕಾರ ಗಂಭೀರವಾಗಿ ತಗೆದುಕೊಂಡು ಆದಷ್ಟು ಬೇಗ ಬೆಳಗಾವಿ ಜಿಲ್ಲೆ ವಿಭಜನೆ ಮಾಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡ ಅಶೋಕ್ ಪೂಜಾರಿ ಮಾತನಾಡಿ ಗೋಕಾಕ ನೂತನ ಜಿಲ್ಲೆ ಮಾಡುವಂತೆ ಆಗ್ರಹಿಸಿ ಇದು ಸಾಂಕೇತಿಕ ಹೋರಾಟವಾಗಿದ್ದು , ಮುಂದಿನ ವಾರದಿಂದ ಸಸತವಾಗಿ ಹೋರಾಟ ಕೈಗೊಂಡು ಸರಕಾರವನ್ನು ಎಚ್ಚರಿಸುವ ಉಗ್ರ ಪ್ರಯತ್ನ ಮಾಡಲಾಗುವುದು. ಬೆಳಗಾವಿ ಜಿಲ್ಲೆ ವಿಭಜನೆ ಆದರೆ ಕನ್ನಡಕ್ಕೆ ಹಿನ್ನಡೆ ಆಗುತ್ತದೆ ಎನ್ನುವುದು ಶುದ್ದ ಸುಳ್ಳು ಗಡಿ ವಿಚಾರ ಹಾಗೂ ಕನ್ನಡದ ವಿಚಾರವೆ ಬೇರೆ ಅಭಿವೃದ್ಧಿ ಪೂರಕವಾದ ಜಿಲ್ಲಾ ವಿಭಜನೆ ವಿಚಾರವೆ ಬೇರೆ ಹಾಗಾಗಿ ಬೆಳಗಾವಿ ಕನ್ನಡಿಗರು, ಸಾಹಿತಿಗಳು ಬೆಳಗಾವಿ ಜಿಲ್ಲಾ ವಿಭಜನೆಗೆ ಅಡ್ಡಿ ಪಡಿಸದೆ ಸಹಕರಿಸಬೇಕು. ಕನ್ನಡಕ್ಕೆ ಕುತ್ತು ಬಂದಾಗ ಗೋಕಾಕ ಸೇರಿದಂತೆ ಜಿಲ್ಲೆಯ ಎಲ್ಲಾ ಜನರು ಒಗ್ಗಟ್ಟಾಗಿ ಹೋರಾಟ ಮಾಡಿ ಕನ್ನಡವನ್ನು ಗಟ್ಟಿ ಗೋಳಿಸುವ ಕೆಲಸ ಮಾಡಲಾಗಿದ್ದು, ಮುಂದೆಯೂ ಮಾಡಲಾಗುವುದು ಹಾಗಾಗಿ ಯಾರು ಜಿಲ್ಲೆ ವಿಭಜನೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬ್ರಹ್ಮಾನಂದ ಸ್ವಾಮೀಜಿ, ಡಾ.ಮಹಾಂತೇಶ ಕಡಾಡಿ, ಶಶಿಧರ ದೇಮಶೆಟ್ಟಿ, ಸಿ.ಡಿ.ಹುಕ್ಕೇರಿ, ಅರ್ಜುನ್ ಪಂಗನ್ನವರ, ಬಸವರಾಜ ಖಾನಪ್ಪನವರ, ದಸ್ತಗಿರಿ ಪೈಲವಾನ, ಶಂಕರ ಗೋರೋಶಿ, ಸದಾಶಿವ ಗುದಗಗೋಳ, ನಿಂಗಪ್ಪ ಕುರಬೇಟ್, ವಿಶ್ವನಾಥ್ ಕಡಕೋಳ, ಸಿ.ಡಿ.ಗಿಡನ್ನವರ, ಎಂ.ಎಸ್.ವಾಲಿ, ಲಕ್ಷೀ ಪಾಟೀಲ, ಪವನ ಮಹಾಲಿಂಗಪೂರ, ಅಜೀಜ್ ಮೋಕಾಶಿ ಉಪಸ್ಥಿತರಿದ್ದರು.

ವರದಿ:- ಮನೋಹರ ಮೇಗೆರಿ 

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!