Ad imageAd image

ಶ್ರೀ ನುಂಕೆಮಲೆ ಸಿದ್ದೇಶ್ವರ ಸ್ವಾಮಿ ಛಾಯಾಚಿತ್ರಗ್ರಾಹಕರ ಸಂಘ ಉದ್ಘಾಟನೆ ಸಮಾರಂಭ , ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ

Bharath Vaibhav
ಶ್ರೀ ನುಂಕೆಮಲೆ ಸಿದ್ದೇಶ್ವರ ಸ್ವಾಮಿ ಛಾಯಾಚಿತ್ರಗ್ರಾಹಕರ ಸಂಘ ಉದ್ಘಾಟನೆ ಸಮಾರಂಭ , ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ
WhatsApp Group Join Now
Telegram Group Join Now

ಮೊಳಕಾಲ್ಮುರು:-  ರಾಜ್ಯದಲ್ಲಿ ಸುಮಾರು ಎರಡರಿಂದ ಮೂರು ಲಕ್ಷ ಜನ ಛಾಯಾಚಿತ್ರಗಾರರಿದ್ದು, ಇವರ ಬದುಕನ್ನು ಭದ್ರವಾಗಿಸಲು ಸರಕಾರವು ಮತ್ತಷ್ಟು ಸೌಲಭ್ಯ ನೀಡುವ ಅವಶ್ಯತೆ ಇದೆ ಎಂದು ಛಾಯಾಗ್ರಾಹಕರ ಸಂಘದ ರಾಜ್ಯಾಧ್ಯಕ್ಷ ಎಚ್‌.ಎಸ್.ನಾಗೇಶ್‌ ತಿಳಿಸಿದರು.

ಮೊಳಕಾಲ್ಮುರು:-ತಾಲೂಕಿನ ರಾಂಪುರ ಉಚ್ಚಮಲ್ಲೇಶ್ವರ ದೇವಸ್ಥಾನ ಆವರಣದಲ್ಲಿ ಮಂಗಳವಾರ ಶ್ರೀ ನುಂಕಮಲೆ ಸಿದ್ದೇಶ್ವರ ಸ್ವಾಮಿ ಛಾಯ ಚಿತ್ರಗಾರ  ,ತಾಲೂಕು ಸಂಘದಿಂದ ಏರ್ಪಡಿಸಿದ್ದ ಸಂಘದ ಉದ್ಘಾಟನೆ ಹಾಗೂ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಕೋವಿಡ್ ಸಮಯದಲ್ಲಿ ಛಾಯಚಿತ್ರಗಾರರ ಬದುಕು ಹೆಚ್ಚು ದುಸ್ತರವಾಗಿತ್ತು. ಸರಕಾರವು ಕೆಲವು ಸೌಲಭ್ಯಗಳನ್ನು ನೀಡಿ ಸಹಕರಿಸಿದೆ.ಆದರೆ ಈಗಿನ ಸ್ಪರ್ಧಾತ್ಮಾಕ ಯುಗದಲ್ಲಿ ನಮ್ಮಗಳ ಪರಿಸ್ಥಿತಿ ಸುಧಾರಿಸಲು ಮತ್ತಷ್ಟು ಸೌಕರ್ಯಗಳ ಅನಿವಾರ್ಯತೆ ಬಂದೊದಗಿದೆ.ಸ್ಥಳೀಯ ಶಾಸಕರು ನಮ್ಮ ಸಂಘದ ಕಚೇರಿ ನಿರ್ಮಾಣಕ್ಕೆ ಖಾಲಿ ನಿವೇಶನ ನೀಡಿದಲ್ಲಿ ಹೆಚ್ಚು ಅನುಕೂಲವಾಗಲಿದೆ ಎಂದರು.

ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಎನ್‌ ವೈಸಿ ಚೇತನ್‌ ಮಾತನಾಡಿ, ಛಾಯಚಿತಗಾಹಕರು ತಮ್ಮ ಬಡತನ,ಸಮಸ್ಯೆಗಳನ್ನು ಬದಿಗೊತ್ತಿ ಶುಭಸಮಾರಂಭಗಳಲ್ಲಿ ಮೋಟೋಗಳನ್ನು ತೆಗೆದು ಸಮಾಜ ಸೇವೆ ಮಾಡುತ್ತಿದ್ದಾರೆ. ಇವರು ನೀಡುವ,ಛಾಯಾಚಿತ್ರಗಳು ಎಲ್ಲಾ ಕಾರ್ಯಗಳಿಗೂ ಅನಿವಾರ್ಯವಾಗಿದ್ದು, ಈ ಚಿತ್ರಗಳಿಂದಲೇ ಎಲ್ಲರೂ ಉನ್ನತಿ, ಪ್ರಚಾರ ಪಡೆಯಲು ಸಾಧ್ಯವಿದೆ.ಇವರು ತೆಗೆದ ಫೋಟಗಳು ಜನರ ಮನದಲ್ಲಿ ನೆನಪಗಳಾಗಿ ಉಳಿಯಲಿವೆ ಎಂದರು.ಕಾರ್ಯಕ್ರಮದಲ್ಲಿ ಹಿರಿಯ ಛಾಯಾಗ್ರಾಹಕರನ್ನು ಸನ್ಮಾನಿಸಲಾಯಿತು. ಆರ್ಹರಿಗೆ ಗುರುತಿನ ಚೀಟಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ತಾಲೂಕು ಅಧ್ಯಕ್ಷ ಜಿ.ವಿ.ಷಖಿರಾಜ್‌, ಗೌರವಾಧ್ಯಕ್ಷ ಟಿ.ರುದ್ರೇಶ್‌, ಚಿತ್ರದುರ್ಗ ಜಿಲ್ಲಾಧ್ಯಕ್ಷ ಸೈಯದ್‌ ರಹಮತ್ ಉಲ್ಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಿರಿಯೂರು ನಾಗಣ್ಣ, ಚಿತ್ರದುರ್ಗ ತಾಲೂಕು ಅಧ್ಯಕ್ಷ ರಾಮಚಂದ್ರರೆಡ್ಡಿ, ಚಳ್ಳಕೆರೆ ತಾಲೂಕು ಅಧ್ಯಕ್ಷ ನೇತಾಜಿ ಪ್ರಸನ್ನ, ಹೊಸದುರ್ಗ ತಾಲೂಕು ಅಧ್ಯಕ್ಷ ಮಂಜುನಾಥ್, ಹಿರಿಯೂರು ತಾಲೂಕು ಅಧ್ಯಕ್ಷ ಕೃಷ್ಣಪ್ಪ, ಬಳ್ಳಾರಿ ಜಿಲ್ಲಾಧ್ಯಕ್ಷ ನಾಗನಗೌಡ ಚಂದ್ರಮೋಹನ, ದಾವಣಗೆರೆ ತಾಲೂಕು ಅಧ್ಯಕ್ಷ ಎಸ್‌.ಆರ್.ತಿಪ್ಪೇ‌. ಏನೇಶ್‌, ಕರಿಬಸಪ್ಪ ಇದ್ದರು.

ವರದಿ :-ಪಿಎಂ ಗಂಗಾಧರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!