Ad imageAd image

ದಿ.26 ರಂದು ಕಿಲ್ಲಾ ತೊರಗಲ್ಲದ ಶ್ರೀ ಪವಾಡ ಬಸವೇಶ್ವರ ಪಲ್ಲಕ್ಕಿ ಉತ್ಸವ

Bharath Vaibhav
ದಿ.26 ರಂದು ಕಿಲ್ಲಾ ತೊರಗಲ್ಲದ ಶ್ರೀ ಪವಾಡ ಬಸವೇಶ್ವರ ಪಲ್ಲಕ್ಕಿ ಉತ್ಸವ
WhatsApp Group Join Now
Telegram Group Join Now

ಕಿಲ್ಲಾ ತೊರಗಲ್ಲ: , ಬೆಳಗಾವಿ ಜಿಲ್ಲೆ , ರಾಮದುರ್ಗ ತಾಲೂಕಿನ ಕಿಲ್ಲಾ ತೊರಗಲ್ಲದ ಪ್ರಾಚೀನ ಕಾಲದ ಶ್ರೀ ಪವಾಡ ಬಸವೇಶ್ವರ ದೇವರ ಗುಡಿಯಲ್ಲಿ ಶ್ರಾವಣ ಮಾಸದ ಪ್ರಯುಕ್ತ ‘ ಪಲ್ಲಕ್ಕಿ ಉತ್ಸವವು ‘ ಸೋಮವಾರ ದಿ.26 ರಂದು ಮುಂಜಾನೆ ವಿವಿಧ ಧಾರ್ಮಿಕ ಪೂಜೆಗಳ ಮೂಲಕ ವಿಜ್ರಂಭಣೆಯಿಂದ ಜರುಗಲಿದೆ.

ಹಿಂದೂ ಧರ್ಮದ ಪ್ರಕಾರ ಶ್ರಾವಣ ಮಾಸವನ್ನು ಅತ್ಯಂತ ಪವಿತ್ರ ಮಾಸವೆಂದು ಪರಿಗಣಿಸಲಾಗಿದೆ. ಈ ಮಾಸದಲ್ಲಿ ಭಗವಂತನ ನಾಮಸ್ಮರಣೆ , ಪೂಜೆಯನ್ನು ಮಾಡುವುದರಿಂದ ನಮ್ಮೇಲ್ಲರ ಇಷ್ಟಾರ್ಥಗಳು ನೆರವೇರುವುದರೊಂದಿಗೆ ಭಗವಂತನ ದಿವ್ಯ ಕೃಪೆಗೆ ಪಾತ್ರರಾಗುತ್ತೇವೆ ಎಂಬುದಾಗಿ ಭಕ್ತರು ನಂಬುತ್ತಾರೆ. ಹೀಗಾಗಿಯೇ ಜನರು ತಂತಮ್ಮ ಊರುಗಳಲ್ಲಿನ ಗುಡಿ, ಗುಂಡಾರ, ದೇವಸ್ಥಾನಗಳಲ್ಲಿ ಶ್ರಾವಣ ಮಾಸದಲ್ಲಿ ನಿತ್ಯ ಹರನಾಮ ಸ್ಮರಣೆ, ಭಜನೆ , ಪುರಾಣ , ಕೀರ್ತನೆ, ವಿಶೇಷ ಪೂಜೆ , ಹಾಗೂ ದೇವತಾ ಆರಾಧನೆಯಂಥಹ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಅನಾದಿ ಕಾಲದಿಂದಲೂ ಆಯೋಜಿಸಿ ನಡೆಸಿಕೊಂಡು ಬರುತ್ತಲಿದ್ದಾರೆ.

ಈ ದಿಶೆಯಲ್ಲಿ ರಾಮದುರ್ಗ ತಾಲೂಕಿನ ಕಿಲ್ಲಾ ತೊರಗಲ್ಲದ ಪ್ರಾಚೀನ ಕಾಲದ ” ಶ್ರೀ ಪವಾಡ ಬಸವೇಶ್ವರ ಮೂರ್ತಿಗೆ ” ಶ್ರಾವಣ ಮಾಸದ ಆರಂಭದ ದಿನದಿಂದಲೂ ಪ್ರತಿನಿತ್ಯ ಬೆಳಿಗ್ಗೆ ‘ ರುದ್ರಾಭಿಷೇಕ ಪೂಜೆ ‘ ವೇ. ಶಾಸ್ತ್ರಿಗಳಿಂದ ನಡೆದುಕೊಂಡು ಬಂದಿದ್ದು , ಸೋಮವಾರ ದಿ.26 ರಂದು ಮುಂಜಾನೆ ಶ್ರೀ ಪವಾಡ ಬಸವೇಶ್ವರ ದೇವರ ಪಲ್ಲಕ್ಕಿಯ ಉತ್ಸವದ ಮೂಲಕ ಮಂಗಲಗೊಳ್ಳಲಿದೆ. ಮಹಾ ಮಂಗಳಾರತಿಯ ನಂತರ ” ಅನ್ನ ಪ್ರಸಾದ ” ವಿತರಣೆಯ ಕಾರ್ಯಕ್ರಮ ಜರುಗುವುದು. ಕಾರಣ ಶ್ರೀ ಪವಾಡ ಬಸವೇಶ್ವರ ದೇವರ ಮಹಾಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಗುರುವಿನ ಪಲ್ಲಕ್ಕಿಯ ಉತ್ಸವದಲ್ಲಿ ಶೃದ್ಧಾ , ಭಕ್ತಿಯಿಂದ ಪಾಲ್ಗೊಂಡು ಶ್ರೀ ಗುರುವಿನ ದರುಶನ , ಆಶೀರ್ವಾದ ಪಡೆದುಕೊಂಡು ಪುನೀತರಾಗುವಂತೆ ಈ ಮೂಲಕ ತಮ್ಮಲ್ಲಿ ಸದ್ಭಕ್ತರ ಪರವಾಗಿ ಕೋರಲಾಗಿದೆ.

ವರದಿ: ಮಹಾಂತೇಶ. ಬ. ಶಿದ್ದಿಭಾವಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!