ಚೇಳೂರು: ತಾಲ್ಲೂಕಿನ ಇತಿಹಾಸದ ಪ್ರಸಿದ್ಧವಾದ ಶ್ರೀ ಪ್ರಸನ್ನ ಕಾಶಿ ವಿಶ್ವೇಶ್ವರ ಸ್ವಾಮಿಯ ಗಿರಿಜಾ ಕಲ್ಯಾಣ ಮಹೋತ್ಸವವು ವಿಜೃಂಭಣೆಯಿಂದ ನಡೆಸಲಾಯಿತು, ಅಲ್ಲದೇ ರಥೋತ್ಸವಕ್ಕೆ ಬಣ್ಣ -ಬಣ್ಣದ ಹೂವುಗಳಿಂದ ಅಲಂಕರಿಸಲಾಗಿತ್ತು.

ಅಲ್ಲದೇ ಬ್ರಹ್ಮ ರಥೋತ್ಸವನ್ನು ಊರಿನ ರಾಜ ಬೀದಿಗಳಲ್ಲಿ ತಾಳ ಮೇಳಗಳಿಂದ ತಮಟೆ ವಾದ್ಯೆ,ಡೋಲು ಕುಣಿತ, ವೀರಗಾಸೆ,ಬ್ರೇಕ್ ಡ್ಯಾನ್ಸ್ ಮೂಲಕ ಮೆರವಣಿಗೆ ಸರಲಾಯಿತು, ಈ ಸಂದರ್ಭದಲ್ಲಿ ಅಕ್ಕು -ಪಕ್ಕದ ಹಳ್ಳಿಗಳಿಂದ ಸಾರ್ವಜನಿಕರು ರಥೋತ್ಸವ ನೋಡಲು ಬಂದಿದ್ದರು, ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು, ಸಿಬ್ಬಂದಿ, ಊರಿನ ಹಿರಿಯರು, ಗ್ರಾಮಸ್ಥರು,ಸಾರ್ವಜನಿಕರು ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
ವರದಿ :ಯಾರಬ್. ಎಂ




