Ad imageAd image

ಅದ್ಧೂರಿಯಿಂದ ಜರುಗಿದ ಶ್ರೀ ರಕ್ಷಮ್ಮ ದೇವಿ ಕಳಸಾರೋಹಣ ಜಾತ್ರಾ ಮಹೋತ್ಸವ

Bharath Vaibhav
ಅದ್ಧೂರಿಯಿಂದ ಜರುಗಿದ ಶ್ರೀ ರಕ್ಷಮ್ಮ ದೇವಿ ಕಳಸಾರೋಹಣ ಜಾತ್ರಾ ಮಹೋತ್ಸವ
WhatsApp Group Join Now
Telegram Group Join Now

ಹುಕ್ಕೇರಿ: ತಾಲೂಕಿನ ರಕ್ಷಿ ಗ್ರಾಮದಲ್ಲಿ ಶ್ರೀ ರಕ್ಷಮ್ಮ ದೇವಿ ದೇವಸ್ಥಾನ ಕಳಸಾರೋಹಣ ಜಾತ್ರಾ ಮಹೋತ್ಸವ ಶ್ರೀ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ನಿಡಸೋಸಿ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಗುಬ್ಬಲಗುಡ್ಡ ಘಟಪ್ರಭಾ ಶ್ರೀ ಶಿವಬಸವ ಮಹಾಸ್ವಾಮಿಗಳು ವಿರುಕ್ತ ಮಠ ಹುಕ್ಕೇರಿ  ಅಭಿನವ ಮಂಜುನಾಥ್ ಮಹಾರಾಜರು ಕ್ಯಾರಗುಡ್ಡ ಹುಕ್ಕೇರಿ, ಮಲ್ಲಿಕಾರ್ಜುನ ಮಹಾಸ್ವಾಮಿಗಳು ಶಿವಾನಂದ ಮಠ ಶ್ರೀ ಅವರ ಸಾನಿಧ್ಯದಲ್ಲಿ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವನ್ನು ಜರಗಿಸಲಾಯಿತು.

ಗ್ರಾಮದ ಶ್ರೀ ರಾಕ್ಷಮ್ಮಾ ದೇವಿ ಕಳಸರೋಹಣ ಜಾತ್ರಾ ಮಹೋತ್ಸವಕ್ಕೆ ಯುವ ನಾಯಕರಾದ ಪವನ್ ಕತ್ತಿ ಅವರು ಭಾಗವಹಿಸಿದರು ರಕ್ಷಿ ಗ್ರಾಮದ ಮುಖಂಡರು ಹಿರಿಯರು ಕಿರಿಯರು ಒಟ್ಟು ಗೂಡಿ ಜಾತ್ರೆಯನ್ನು ಅತೀ ವಿಜೃಂಭಣೆಯಿಂದ ನಡೆಸಲಾಯಿತು.

ಜಾತ್ರಾ ಮಹೋತ್ಸವದಲ್ಲಿ ಉಡಿ ತುಂಬುವ, ಕುಂಭೋತ್ಸವ ಪಲ್ಲಕ್ಕಿ ಉತ್ಸವ ಡೊಳ್ಳಿನ ಪದಗಳು ಓಟ ಸ್ಪರ್ಧೆ ಟಗರಿನ ಕಾಳಗ ಕುದುರೆ ಗಾಡಿ ಸವಾರಿ ರಂಗೋಲಿ ಸ್ಪರ್ಧೆ ಮೋಟಾರ್ ಸೈಕಲ್ ಸ್ಪರ್ಧೆ ಹಾಗೂ ಇದೇ ರೀತಿ ಹಲವು ಕಾರ್ಯಕ್ರಮಗಳು ನಡೆಸಲಾಯಿತು. ರಕ್ಷಿ ಗ್ರಾಮದ ಮುಖಂಡರು ಯುವಕರು ಗ್ರಾಮ ದೇವತೆಯ ಸಮಿತಿವತಿಯಿಂದ ಅತೀ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವನ್ನು ಆಚರಿಸಲಾಯಿತು

ಈ ಸಂದರ್ಭದಲ್ಲಿ ಮಹೇಶ್ ಬಡಗಾಂವಿ, ಬಾಳಪ್ಪ ಭೀಮಣ್ಣವರ, ಶಂಕರ್ ಪಾಟೀಲ್, ವಿಠ್ಠಲ್ ಪಾಟೀಲ್, ಅಮರ್ ರಾಮಣ್ಣಕಟ್ಟಿ, ಗಣಪತಿ ಗುಡಾಜ್, ರಾಮಪ್ಪ ಚಂದರಗಿ, ಶಟೆಪ್ಪಾ ಗಸ್ತಿ, ಶಿವಾನಂದ ಪಾಟೀಲ್ ಹಾಗೂ ರಕ್ಷಿ ಗ್ರಾಮದ ಎಲ್ಲ ಯುವಕರು ಉಪಸ್ಥಿತರಿದ್ದರು.

ವರದಿ: ಶಿವಾಜಿ ಎನ್ ಬಾಲೇಶಗೋಳ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!