ಮೊಳಕಾಲ್ಮುರು: ಸಿದ್ದರಾಮೇಶ್ವರರು ಎಲ್ಲಾ ಜಾತಿಗೂ ಸೀಮಿತವಾಗಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಮಹಾನ್ ಸಂತ ಎಂದು ಶಾಸಕರಾದ ಎನ್ ವೈ ಗೋಪಾಲಕೃಷ್ಣ ರವರು ತಿಳಿಸಿದರು.
ಪಟ್ಟಣದಲ್ಲಿ ಬುಧವಾರ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾ ಸಂಸ್ಥಾನ ಚಿತ್ರದುರ್ಗ ಮೊಳಕಾಲ್ಮೂರು ತಾಲ್ಲೂಕು ಭೋವಿ ವಡ್ಡರ ಸಂಘ ಮೊಳಕಾಲ್ಮೂರು ಚಿತ್ರದುರ್ಗ ಜಿಲ್ಲೆ ಇವರು ವತಿಯಿಂದ ಏರ್ಪಡಿಸಿದ್ದ ಶ್ರೀ ಸಿದ್ದರಾಮೇಶ್ವರ ಜಯಂತೋತ್ಸವ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಾಗಿ ಮುನ್ನಡೆದರೆ ಒಳ್ಳೆಯ ಸಮಾಜ ಕಟ್ಟಲು ಸಹಾಯವಾಗುತ್ತದೆ ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದ್ದಾರೆ ಬಸವಣ್ಣ ಮತ್ತು ಸಿದ್ದರಾಮೇಶ್ವರರ ಪಾಲನೆಯಲ್ಲಿ ನಾವು ಸಮಾಜದಲ್ಲಿ ಬೆಳೆಯಬೇಕು ಭೂಮಿ ಮೇಲೆ ಹುಟ್ಟಿರುವ ಎಲ್ಲಾ ಜಾತಿಯ ಜನಾಂಗಕ್ಕೆ ಅನುಕೂಲವಾಗಲೆಂದೆ ಸಿದ್ದರಾಮೇಶ್ವರರು ಅನೇಕ ಕೃತಿಗಳನ್ನು ರಚಿಸಿದ್ದಾರೆ ಎಂದರು.
ನಾನು ಎಲ್ಲ ಜೊತೆ ಒಡನಾಟ ಇಟ್ಟುಕೊಂಡಿದ್ದೇನೆ. ಜಾತಿ ಅಂತ ಬಂದ ಮೇಲೆ ಶಕ್ತಿ ಪ್ರದರ್ಶನ ತೋರಿಸಬೇಕಾಗುತ್ತದೆ ಎಲ್ಲರೂ ಒಂದು ದಿನ ಸೇರಿ ಉತ್ತಮ ಕಾರ್ಯಕ್ರಮ ಮಾಡಬೇಕಾಗುತ್ತದೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಇನ್ನೂ ಹೆಚ್ಚಿನ ಕಾರ್ಯಕ್ರಮವನ್ನು ಮಾಡೋಣ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು ಮಾತನಾಡಿ ಸಿದ್ದರಾಮೇಶ್ವರರು ಕಾಯಕ ಜೀವಿಗಳ ಸೋಷಿತಾ ಸಮುದಾಯಗಳ ಆಸ್ಮಿತೆ, ಸಿದ್ದರಾಮೇಶ್ವರರು ರೀತಿಯಲ್ಲಿ ಜಲಕ್ರಾಂತಿಯನ್ನು ಮಾಡಬೇಕು ಅವರ ರೀತಿಯಲ್ಲಿ ಜಲ ಕ್ರಾಂತಿಗಳನ್ನು ಮಾಡಿ ನೂರಾರು ಕೆರೆಗಳನ್ನು ಕಟ್ಟಿಸಿದ ಮಹಾನ್ ಸಂತ ಎಂದರು
ಅದೇ ರೀತಿ ಸಾಮೂಹಿಕ ವಿವಾಹಗಳನ್ನು ಜಗತ್ತಿಗೆ ಪರಿಚಯಿಸಿದ ಮಹಾಸಂತ ಸಿದ್ದರಾಮೇಶ್ವರರು ಆತ್ಮ ಕಲ್ಯಾಣದ ಜೊತೆ ಜೊತೆಗೆ ಲೋಕ ಕಲ್ಯಾಣಕ್ಕೆ ದುಡಿದ ಮಹಾನ್ ಸಂತ
ಸಿದ್ದರಾಮೇಶ್ವರರು ದುಡಿಯುವ ಸಮಾಜವನ್ನು ಕುಡಿಯುವ ಸಮಾಜವನ್ನು ಮಾಡದೆ ಓದುವ ಸಮುದಾಯವನ್ನು ಮಾಡಿ ಅದರ ಜೊತೆಜೊತೆಗೆ ವಚನಗಳನ್ನು ರಚಿಸಿದಂತಹ ಮಹಾನ್ ಸಂತ ಎಂದರು.
ಎಲ್ಲರೂ ಸಿದ್ದರಾಮೇಶ್ವರರ ದಾರಿಯಲ್ಲಿ ನಡೆಯಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಾಷ್ಠಾವಂತವಾಗಿ ಡಾಕ್ಟರ್ ತಿಮ್ಮಣ್ಣ ಪ್ರಾಚಾರ್ಯರು ಎಸ್ ಪಿ ಎಸ್ ಆರ್ ಕಾಲೇಜ್ ರಾಂಪುರ ಮತ್ತು ಶ್ರೀಯುತ ವಿ ತಿಮ್ಮಪ್ಪ ನಿವೃತ್ತ ಡಿಸಿಪಿ ಚಿಕ್ಕಳ್ಳಿ ಇವರು ಕೂಡ ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ಕಾರ್ಯಕ್ರಮದ ಮುಂಚಿತವಾಗಿ ಶ್ರೀ ನುಂಕೆ ಮೇಲೆ ದೇವಸ್ಥಾನದಿಂದ ಜಾನಪದ ನೃತ್ಯ ಮತ್ತು ಕಲಾತಂಡಗಳೊಂದಿಗೆ ಮಹಿಳೆಯರಿಂದ ಕಳಸ ಕುಂಭಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದರಲ್ಲಿ ಸಾಧು ಸಂತಾನ ವೇಷ ಧರಿಸಿದ್ದ ವ್ಯಕ್ತಿಯು ಎಲ್ಲರ ಗಮನ ಸೆಳೆದರು.
ಕಾರ್ಯಕ್ರಮದ ನಂತರ 23 24 ನೇ ಸಾಲಿನ ವ್ಯಾಸಂಗ ಮಾಡಿದ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇಕಡಾ 85ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಭೋವಿ ವಡ್ಡರ ಸಂಘದ ಕಾರ್ಯಕಾರಿ ಮಂಡಳಿ ಅಧ್ಯಕ್ಷರಾದ ನಾಗರಾಜ್ ಗೌರವ ಅಧ್ಯಕ್ಷರಾದ ಹನುಮಂತಪ್ಪ ಉಪಾಧ್ಯಕ್ಷರಾದ ಮರಿಸ್ವಾಮಿ ಖಜಾಂಚಿ ಚಿಕ್ಕೇರಳ್ಳಿ ರಮೇಶ್ ಪ್ರಧಾನ ಕಾರ್ಯದರ್ಶಿ ಎಂ ರಾಮು ಶ್ರೀನಿವಾಸ್ ವೆಂಕಟೇಶ್ ನಾಗರಾಜ್ ಹನುಮಂತ ಗುರುಸ್ವಾಮಿ ಆನಂದಮೂರ್ತಿ ಅಂಜನಪ್ಪ ಮಹೇಶ್ ನಾಗಭೂಷಣ್ ಓಲೇಶ್ ಮತ್ತು ಭೋವಿ ಯುವಕ ಸಂಘದ ಅಧ್ಯಕ್ಷರಾದ ಎಸ್ ನಾಗರಾಜ್ ಮೋಹನ್ ಬಾಬು ನಾಗರಾಜ್ ಸೇರಿದಂತೆ ಇನ್ನು ಹಲವಾರು ಉಪಸ್ಥಿತರಿದ್ದರು.
ವರದಿ : ಪಿಎಂ ಗಂಗಾಧರ




