ತುರುವೇಕೆರೆ: ಪಟ್ಟಣದ 12ನೇ ವಾರ್ಡಿನಲ್ಲಿರುವ ಗಂಗಾಧರೇಶ್ವರ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಶ್ರೀ ಸುಂಕಿಮಾರಮ್ಮ ದೇವಿಯ ಹಬ್ಬವನ್ನು ಜುಲೈ 01 ರಂದು ಆಚರಿಸಲಾಗುವುದು.
ಕಳೆದ 40 ವರ್ಷಗಳಿಂದ ಪಟ್ಟಣದಲ್ಲಿ ಶ್ರೀ ಸುಂಕಿಮಾರಮ್ಮ ದೇವಿಯ ಹಬ್ಬವನ್ನು ಆಚರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮದೇವತೆ ಶ್ರೀ ಉಡುಸಲಮ್ಮ ದೇವಿಯ ಅಪ್ಪಣೆ ಪಡೆದು ತಾಯಿಯ ಆಜ್ಞಾನುಸಾರ ಶ್ರೀ ಸುಂಕಿಮಾರಮ್ಮ ದೇವಿ ಹಬ್ಬವನ್ನು ಆಚರಿಸಲು ತೀರ್ಮಾನಿಸಲಾಗಿದೆ.
ಜುಲೈ 01 ರಂದು ಮಂಗಳವಾರ ಸಂಜೆ 06 ಗಂಟೆಗೆ ಗಂಗಾಧರೇಶ್ವರ ದೇವಸ್ಥಾನದ ಮುಂಭಾಗದ (ಎನ್.ಹೆಚ್.ಪಿ.ಎಸ್. ಶಾಲೆ ಹತ್ತಿರ) ಆವರಣವನ್ನು ತಳಿರು ತೋರಣಗಳಿಂದ ಅಲಂಕರಿಸಿ ಶ್ರೀ ಸುಂಕಿಮಾರಮ್ಮ ದೇವಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ, ಆರತಿ ನೆರವೇರಿಸಲಾಗುವುದು.
ಜುಲೈ 02 ರಂದು ಬುಧವಾರ ದೇವಿಗೆ ಮಹಾಮಂಗಳಾರತಿ ನೆರವೇರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಭಕ್ತಿಪೂರ್ವಕವಾಗಿ ಪಟ್ಟಣದಿಂದ ಹೊರಗೆ ಕಳಿಸಲಾಗುವುದು. ಈ ದೇವಿಯ ಪೂಜೆ ಕಾರ್ಯಕ್ರಮದಲ್ಲಿ ಪಟ್ಟಣದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದುಆಯೋಜಕರು ಕೋರಿದ್ದಾರೆ.
ವರದಿ: ಗಿರೀಶ್ ಕೆ ಭಟ್




