Ad imageAd image
- Advertisement -  - Advertisement -  - Advertisement - 

ತೆಂಗಳಿಯಲ್ಲಿ ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ ಸಂಬ್ರಮ

Bharath Vaibhav
ತೆಂಗಳಿಯಲ್ಲಿ ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ ಸಂಬ್ರಮ
WhatsApp Group Join Now
Telegram Group Join Now

ಬೆಂಗಳೂರು:-ಇತಿಹಾಸ ಉಳ್ಳುವ ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವವನ್ನು ಪವಿತ್ರ ಶ್ರಾವಣ ಮಾಸದ ದಿನದಂದು ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತೇವೆ ಎಂದು ಶ್ರೀ ಷ.ಬ್ರ.ಡಾ ಶಾಂತ ಸೋಮನಾಥ ಶಿವಾಚಾರ್ಯರು ಹೇಳಿದರು.ಅವರು ಕಲ್ಬುರ್ಗಿ ಜಿಲ್ಲೆ ಕಾಳಗಿ ತಾಲ್ಲೂಕಿನ ತೆಂಗಳಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಶ್ರೀ ವೀರಭದ್ರೇಶ್ವರ ಜಯಂತೋತ್ಸವದ ಸಾನಿಧ್ಯ ವಹಿಸಿ ಪೂಜ್ಯ ಶ್ರೀ ಷ.ಬ್ರ.ಡಾ:ಶಾಂತ ಸೋಮನಾಥ ಶಿವಾಚಾರ್ಯರು ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.

ವೀರಭದ್ರೇಶ್ವರ ಭಕ್ತಿ ಸ್ವರೂಪರಾದ ಬಸವರಾಜ್ ಮಾಡಬುಳ ಅವರ ಧರ್ಮಪತ್ನಿ ಮತ್ತು ಕುಟುಂಬದ ಸದಸ್ಯರು ಶ್ರೀ ವೀರಭದ್ರೇಶ್ವರ ಮೂರ್ತಿಗೆ ಹಾಲಿನ ಅಭಿಷೇಕ, ರುದ್ರಭಿಷೇಕ, ಅರಿಶಿಣ ಕುಂಕುಮ ಪುಷ್ಪಾರ್ಚನೆ ಪ್ರವೀಣ ಶ್ರೀ ಜಗದೀಶ್ ಸ್ವಾಮಿ ಹಿರೇಮಠ ಅವರಿಂದ ಶಾಸ್ತ್ರೋಕ್ತವಾಗಿ
ಮಂತ್ರ ಪಠಣದೊಂದಿಗೆ ಮಹಾ ಮಂಗಳಾರತಿ ಪ್ರದಾನ ಅರ್ಚಕರಾದ ಶ್ರೀರುದ್ರಯ್ಯ ಸ್ವಾಮಿಜಿಗಳು ಸ್ಥಾವರಮಠ ನೆರೆವೇರಿಸಿಕೊಟ್ಟರು.
ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ ಪ್ರಯುಕ್ತ ಶ್ರೀ ವೀರಭದ್ರೇಶ್ವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಧ್ವಜಾರೋಹಣವನ್ನು
ಹಿರಿಯ ಮುದ್ದಜಿ ರಾಜಕಾರಣಿ ಹಾಗೂ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಪಂಡಿತರಾವ್ ಭೇರನ್, ಸುರಣ್ಣ ಭೇರನ್, ಮಲ್ಲಿನಾಥ್ ಭೇರನ್ ನೆರವೇರಿಸಿದರು.

ಈ ಸಂದರ್ಭದಲ್ಲಿ ಶರಣಪ್ಪ ತೆಲಗಾಣಿ, ಫಕೀರಯ್ಯಾ ಸ್ವಾಮಿ ಸ್ಥಾವರಮಠ ಶಿವಶರಣಪ್ಪ ಬಾಳದೆ, ಬಸವರಾಜ್ ಬಸ್ತೆ, ನಾಗರಾಜ್ ಮಹಾಗಾಂವ,ಭೀಮರಾಯ ಸುಲ್ತಾನಪುರ, ಬಸವರಾಜ್ ಭೈರಿ,ರವಿ ಮಲ್ಕುಡ, ಬಸವರಾಜ್ ಬಾಳದೆ, ಸಿದ್ದಣ್ಣ ಹೊಸಳ್ಳಿ, ಶಂಕರ ಮೇಲಕೇರಿ,ಮಹಾದೇವ ಯ್ಯ ಮಠಪತಿ, ರೇವಣಸಿದ್ಧಯ್ಯ ಮಠಪತಿ, ಗುರುಸಿದ್ದಪ್ಪ ಭಾರಿಗಿಡದ್ , ಬಸು ಬೋಧನ ಮಠ್, ಶಶಿಲ ಬೀದನ್, ತೋಟಯ್ಯ ಆರ್. ಸ್ಥಾವರಮಠ್, ಭೀಮಾಶಂಕರ ಮಾಡಬುಳ್, ತೆಂಗಳಿ ಗ್ರಾಮದ ಹಿರಿಯ ಮುಖಂಡರು ಮಹಿಳೆಯರು ಸಮಸ್ತ ನಾಗರಿಕ ಬಂಧು ಭಗನಿಯರು ಮುಂತಾದವರು ಉಪಸ್ಥಿತರಿದ್ದರು.

 

ವರದಿ:-ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
Share This Article
error: Content is protected !!