ಸಿಂಧನೂರು : ನಗರದಲ್ಲಿ ಕಳೆದ ಹಲವು ತಿಂಗಳಗಳಿಂದ ಬಸ್ ನಿಲ್ದಾಣದ ಹತ್ತಿರ ಡಿವೈಡರ್ ಪಕ್ಕದಲ್ಲಿ ವಾಸ ಮಾಡುತ್ತಿದ್ದ ಬುದ್ಧಿಮಾಂದ್ಯ ಮಹಿಳೆ ಹೆಸರು ಅಮೀನಾ ಬೇಗಂ ವಯಸ್ಸು 30 ಎಂದು ತಿಳಿದುಬಂದಿದೆ ಈಕೆಯನ್ನು ರಕ್ಷಿಸಿ ಕಾರುಣ್ಯ ಆಶ್ರಮಕ್ಕೆ ಕಳಿಸಿದ
ಸ್ತ್ರೀಶಕ್ತಿ ಸ್ವಸಹಾಯ ಒಕ್ಕೂಟ ಅಧ್ಯಕ್ಷೆ ಶ್ರೀದೇವಿ, ಶ್ರೀನಿವಾಸ ಹಾಗೂ ನಮ್ಮ ಕರ್ನಾಟಕ ಸೇನೆ ಅಧ್ಯಕ್ಷ ಮಂಜುನಾಥ ಗಾಣಿಗೇರ್ ರವರು ನೋಡಿ ಅಕ್ಷಯ ಆಹಾರ ಜೋಳಿಗೆ ಟ್ರಸ್ಟಿನ ಕಾರ್ಯದರ್ಶಿ ಅಶೋಕ ನಲ್ಲ ಹಾಗೂ ಕಾರುಣ್ಯ ಆಶ್ರಮದ ಕಾರ್ಯಧ್ಯಕ್ಷ ಚನ್ನಬಸವ ಸ್ವಾಮಿ ಹಿರೇಮಠ ಅವರ ಗಮನಕ್ಕೆ ತಂದಿದ್ದಾರೆ ತಕ್ಷಣ ವೃದ್ಧಾಶ್ರಮದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬುದ್ಧಿಮಾಂದ್ಯ ಮಹಿಳೆಗೆ ಕ್ಷೌರ ಮಾಡಿ ಹೆಣ್ಣು ಮಕ್ಕಳ ಸಹಾಯದಿಂದ ಸ್ನಾನಮಾಡಿಸಿ ಹೊಸ ಬಟ್ಟೆ ತೊಡಿಸಿ ಕಾರುಣ್ಯ ಆಶ್ರಮದಲ್ಲಿ ತಾತ್ಕಾಲಿಕವಾಗಿ ನೆಲೆ ಕಲ್ಪಿಸಿದ್ದಾರೆ ಮುಂದಿನ ದಿನಗಳಲ್ಲಿ ಮಹಿಳೆಯನ್ನು ನಿಮಾನ್ಸ್ ಗೆ ದಾಖಲಿಸಲು ನಿರ್ಧರಿಸಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಅಮರಮ್ಮ ತಿಳಿಸಿದ್ದಾರೆ
ನಂತರ ಶ್ರೀದೇವಿ ಶ್ರೀನಿವಾಸ್ ರವರನ್ನು ಕಾರುಣ್ಯಶ್ರಮದ ವತಿಯಿಂದ ಅಂಬೇಡ್ಕರ್ ರವರ ಭಾವಚಿತ್ರವನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು
ಈ ಸಂದರ್ಭದಲ್ಲಿ ಸ್ತ್ರೀಶಕ್ತಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶ್ರೀ ದೇವಿ ಶ್ರೀನಿವಾಸ್, ಮಂಜುನಾಥ ಗಾಣಿಗೇರ್, ಚನ್ನಬಸಯ್ಯಸ್ವಾಮಿ ಹಿರೇಮಠ, ಅಶೋಕ್ ನಲ್ಲ, ಅಮರಮ್ಮ, ಗೌರಮ್ಮ, ಇನ್ನಿತರರು ಇದ್ದರು
ಬಸವರಾಜ ಬುಕ್ಕನಹಟ್ಟಿ,