—————————ಶ್ರೀಜಿತ್-ಗೋಪಾಲ್ ಜವಾಬ್ದಾರಿಯುತ ಬ್ಯಾಟಿಂಗ್
ಅಹ್ಮದಾಬಾದ್: ಕೃಷ್ಣನ್ ಶ್ರೀಜಿತ್ ಹಾಗೂ ಶ್ರೇಯಸ್ ಗೋಪಾಲ್ ಅವರ ಜವಾಬ್ದಾರಿಯುತ ರ‍್ಧ ಶತಕಗಳು ಹಾಗೂ ಈ ಇಬ್ಬರ ನಡುವೆ ಬಂದ ಶತಕದ ಪಾಲುಗಾರಿಕೆ ನೆರವಿನಿಂದ ರ‍್ನಾಟಕ ತಂಡವು ತಮಿಳುನಾಡು ವಿರುದ್ಧ ನಡೆದ ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ೪ ವಿಕೆಟ್‌ಗಳ ಸುಲಭದ ಜಯ ಪಡೆಯಲು ಸಾಧ್ಯವಾಯಿತು.
ಗುಜರಾತ್ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು ೨೮೯ ರನ್‌ಗಳನ್ನು ಗಳಿಸಬೇಕಿದ್ದ ರ‍್ನಾಟಕ ತಂಡವು ಒಂದು ಹಂತದಲ್ಲಿ ೧೩೬ ರನ್ ಗಳಿಗೆ ಪ್ರಮುಖ ೪ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಜೊತೆಗೂಡಿದ ಕೃಷ್ಣನ್ ಶ್ರೀಜಿತ್ ಹಾಗೂ ಶ್ರೇಯಸ್ ಗೋಪಾಲ್ ೫ ನೇ ವಿಕೆಟ್‌ಗೆ ೧೧೬ ರನ್ ಗಳನ್ನು ಕೂಡಿ ಹಾಕಿ ತಂಡವನ್ನು ಜಯದ ದಡ ತಲುಪಿಸಿದರು.
ಸ್ಕೋರ್ ವಿವರ
ತಮಿಳುನಾಡು ೪೯.೫ ಓವರುಗಳಲ್ಲಿ ೨೮೮
ಕರ‍್ನಾಟಕ ೪೭.೧ ಓವರುಗಳಲ್ಲಿ ೬ ವಿಕೆಟ್‌ಗೆ ೨೯೩
ಕೃಷ್ಣನ್ ಶ್ರೀಜಿತ್ ೭೭ ( ೭೮ ಎಸೆತ, ೬ ಬೌಂಡರಿ, ೨ ಸಿಕ್ಸರ್)
ಶ್ರೇಯಸ್ ಗೋಪಾಲ್ ೫೫ (೪೭ ಎಸೆತ, ೬ ಬೌಂಡರಿ)
ಮಯಾAಕ್ ಅಗರವಾಲ್ ೫೮ (೭೭ ಎಸೆತ, ೭ ಬೌಂಡರಿ)
ಕ್ರಿಕೆಟ್: ಕರ‍್ನಾಟಕಕ್ಕೆ ಗೆಲುವಿನ ಮಾಲೆ




