ಸೇಡಂ : ತಾಲೂಕಿನ ಸಿಲಾರಕೋಟ್ ಗ್ರಾಮದ ಮೂಲ ನಿವಾಸಿ ಹಾಗೂ ಮೇದಕ್ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಡಾಕ್ಟರ್ ಮಧುಸೂಧನ್ ರೆಡ್ಡಿ ಪಾಟೀಲ್ ಅವರ ತಮ್ಮನಾದ ಶ್ರೀಕಾಂತ್ ರೆಡ್ಡಿ ಅವರು ತೆಲಂಗಾಣದ ಕಾರ್ಪೊರೇಷನ್ ಚುನಾವಣೆಯಲ್ಲಿ ತಾಂಡೂರು ವಾರ್ಡ್ ನಂಬರ್ ೩೩ರಲ್ಲಿ ಸ್ಪರ್ಧಿಸಿ 201 ಮತಗಳ ಅಂತರದಿಂದ ಭರ್ಜರಿ ಜಯ ಗಳಿಸಿದರೆ.
ಈ ವೇಳೆ ಸೇಡಂ ಬಿಜೆಪಿ ಮುಖಂಡರಾದ ಶಿವುಕುಮಾರ್ ಪಾಟೀಲ್ ತೇಲ್ಕೂರ ಅವರು ಬೆಟಿನಿಡಿ ಶ್ರೀಕಾಂತ್ ರೆಡ್ಡಿ ಅವರನ್ನು ಅಭಿನಂದಿಸಿ ಸನ್ಮಾನ ಮಾಡಿದರು.
ಈ ಸಂಧರ್ಭದಲ್ಲಿ ಮೆದಕ್ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಡಾಕ್ಟರ್ ಮಧುಸೂಧನ್ ರೆಡ್ಡಿ ಪಾಟೀಲ್, ಭೀಮರೆಡ್ಡಿ ದೇವಾಡಿ, ಸತ್ಯವರ್ಧನ ರೆಡ್ಡಿ, ಶ್ರೀನಿವಾಸ್ ಅಕುಲ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




