Ad imageAd image

ಅದ್ದೂರಿಯಿಂದ ಜರುಗಿದ ಶ್ರೀನಾಗನಾಥೇಶ್ವರ ಸ್ವಾಮಿಯ ರಥೋತ್ಸವ

Bharath Vaibhav
ಅದ್ದೂರಿಯಿಂದ ಜರುಗಿದ ಶ್ರೀನಾಗನಾಥೇಶ್ವರ ಸ್ವಾಮಿಯ ರಥೋತ್ಸವ
WhatsApp Group Join Now
Telegram Group Join Now

ಸಿರುಗುಪ್ಪ : –ತಾಲೂಕಿನ ಸಿರಿಗೇರಿ ಗ್ರಾಮದ ಅಧಿದೈವ ಶ್ರೀ ನಾಗನಾಥೇಶ್ವರ ಸ್ವಾಮಿಯ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ಸಾಯಂಕಾಲ ಅದ್ದೂರಿಯಾಗಿ ಜರುಗಿತು. ಜಾತ್ರಾ ನಿಮಿತ್ತ ದೇವಸ್ಥಾನದಲ್ಲಿ ವಿವಿಧ ಫಲಪುಷ್ಪಗಳು ಆಭರಣಗಳಿಂದ ಅಲಂಕಾರ, ಹೋಮ ಹವನ, ಮಹಾಮಂಗಳಾರತಿ, ಪಲ್ಲಕ್ಕಿಸೇವೆಯಂತಹ ಧಾರ್ಮಿಕ ಕಾರ್ಯಗಳು ಜರುಗಿದವು.

ಸಾಮಾನ್ಯವಾಗಿ ಎಲ್ಲಾ ರಥೋತ್ಸವವು ಪೂರ್ವಾಭಿಮುಖವಾಗಿ ಜರುಗಿದರೆ ಇಲ್ಲಿ ಪಶ್ಚಿಮಾಭಿಮುಖವಾಗಿ ಜರುಗುವುದು ವಿಶೇಷವಾಗಿದ್ದು, ದೇವಸ್ಥಾನದ ಎದುರುಗಡೆ ಬೆಟ್ಟವಿರುವುದರಿಂದ ಪಶ್ಚಿಮಾಭಿಮುಖವಾಗಿ ಎದುರು ಬಸವಣ್ಣನ ದೇವಸ್ಥಾನದವರೆಗೆ ರಥವನ್ನು ಭಕ್ತರು ಎಳೆಯುತ್ತಾರೆಂಬುದು ಕೆಲವು ಭಕ್ತರ ಅಭಿಪ್ರಾಯವಾಗಿದೆ.

ಪ್ರತಿವರ್ಷ ಈ ಗ್ರಾಮದಲ್ಲಿ ಯುಗಾದಿ ಹಬ್ಬದ ನಂತರ ರಾಮನವಮಿ ಮುನ್ನ ಶ್ರೀ ನಾಗನಾಥೇಶ್ವರ ರಥೋತ್ಸವ ಹಾಗೂ ರಾಮನವಮಿಯಂದು ನಡೆಯುವ ಶ್ರೀ ಸಿರಿಗೇರಮ್ಮ ದೇವಿ ರಥೋತ್ಸವ ಜರುಗುವುದರಿಂದ ಇಡೀ ಗ್ರಾಮದ ಪ್ರತಿಯೊಂದು ಮನೆಯಲ್ಲೂ ಜಾತ್ರೆಯ ಸಂಭ್ರಮ ಸಡಗರ ಕಾಣಬಹುದಾಗಿದೆ.

ಹರಕೆ ಹೊತ್ತ ಭಕ್ತರು ಕಾಯಿ ಕರ್ಪೂರ ಎಡೆ ನೈವೇದ್ಯ ಸಮರ್ಪಣೆ ಮಾಡಿ ಸಾಯಂಕಾಲ 6ಕ್ಕೆ ನೆರವೇರಿದ ರಥೋತ್ಸವವಕ್ಕೆ ಹೂಹಣ್ಣು ಎಸೆದು ಭಕ್ತಿಯಿಂದ ನಮಿಸಿದರು. ನೆರೆಯ ತೆಕ್ಕಲಕೋಟೆ, ಸಿದ್ದರಾಂಪುರ, ದಾಸಾಪುರ, ಕೊಂಚಿಗೇರಿ, ಶಾನವಾಸಪುರ, ಮುದ್ದಟನೂರು, ಮಾಳಾಪುರ, ಗುಂಡಿಗನೂರು, ನಡವಿ, ಇನ್ನಿತರ ಗ್ರಾಮಗಳ ಭಕ್ತರು, ಎಲ್ಲೆಂದರಲ್ಲಿ ಕಿಕ್ಕಿರಿದ ಜನಸಂಧಣಿಯು ಜಾತ್ರಾ ಮಹೋತ್ಸವಕ್ಕೆ ಸಾಕ್ಷಿಯಾಗಿತ್ತು.

ತೆಕ್ಕಲಕೋಟೆ ವೃತ್ತ ನಿರೀಕ್ಷಕರರಾದ ಸುಂದ್ರೇಶ್, ಕಾನೂನು ಸುವವ್ಯಸ್ಥೆ ಪಿ.ಎಸ್.ಐ ವೆಂಕಟೇಶ್, ತಾರಾಬಾಯಿ, ಅಪರಾಧ ವಿಭಾಗದ ಪಿ.ಎಸ್.ಐ ಸಂಗಮೇಶ್ವರಿ, ನರಸಮ್ಮ ಇನ್ನಿತರ ಪೋಲೀಸ್ ಸಿಬ್ಬಂದಿಗಳಿಂದ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ವರದಿ. ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!